

ಸಮಂತಾ ರುತ್ ಪ್ರಭು ಮತ್ತು ಅವರ ಪತಿ ರಾಜ್ ನಿಡಿಮೋರು ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದು, ದಂಪತಿ ಇತ್ತೀಚೆಗಷ್ಟೇ ಮನೆಯಲ್ಲಿ ಪೂಜೆ ನೆರವೇರಿಸಿದ್ದಾರೆ. ಆಪ್ತರು ಮತ್ತು ಆತ್ಮೀಯರು ಹಾಜರಿದ್ದ ಕಾರ್ಯಕ್ರಮದ ಕೆಲವು ಫೋಟೊಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಕೆಂಪು ಬಣ್ಣದ ಸೂಟ್ ಧರಿಸಿದ್ದರೆ, ರಾಜ್ ಕ್ರೀಮ್ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮಾ ಧರಿಸಿದ್ದರು.
ಸಮಂತಾ ರುತ್ ಪ್ರಭು ಅವರು ಜೂನ್ 2026ರಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು. ತಮ್ಮ 'ಮಾ ಇಂಟಿ ಬಂಗಾರಂ' ಚಿತ್ರದ ಯಶಸ್ಸಿನ ಸಂದರ್ಭದಲ್ಲಿ ನಟಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡರು.
ತಮ್ಮ ಸದ್ಯದ ಯೋಜನೆಗಳನ್ನು ಮುಗಿಸಿದ ನಂತರ ಸ್ವಲ್ಪ ಸಮಯದವರೆಗೆ ನಟನೆಯಿಂದ ದೂರ ಸರಿಯುವ ಉದ್ದೇಶ ಹೊಂದಿರುವುದಾಗಿ ಸಮಂತಾ ಬಹಿರಂಗಪಡಿಸಿದರು. 'ಮಾ ಇಂಟಿ ಬಂಗಾರಂ' ನಂತರ, ನನ್ನ ಸ್ಥಿತಿಯನ್ನು ಗಮನಿಸಿದರೆ ನಾನು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ. ನಾನು ಮಾತೃತ್ವ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಅದಾದ ನಂತರ, ನನ್ನ ಅಭಿಮಾನಿಗಳಿಗಾಗಿ ಮತ್ತೊಂದು ಚಿತ್ರದೊಂದಿಗೆ ನಾನು ಹಿಂತಿರುಗುತ್ತೇನೆ' ಎಂದು ಅವರು ಹೇಳಿದರು.
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಡಿಸೆಂಬರ್ 1, 2025 ರಂದು ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅದೇ ದಿನ ನಟಿ ತಮ್ಮ ವಿವಾಹದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು.
ಇಬ್ಬರೂ ಮೊದಲು ಜನಪ್ರಿಯ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅವರು 'ಸಿಟಾಡೆಲ್: ಹನಿ ಬನ್ನಿ'ಗಾಗಿ ಮತ್ತೆ ಒಂದಾದರು.
ಸಮಂತಾ ವರ್ಲ್ಡ್ ಪಿಕಲ್‌ಬಾಲ್ ಲೀಗ್‌ನ ಚಿತ್ರಗಳನ್ನು ಹಂಚಿಕೊಂಡ ನಂತರ ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹೆಚ್ಚಾದವು. ಅಲ್ಲಿ ಅವರು ರಾಜ್ ಜೊತೆಗೆ ಚೆನ್ನೈ ಸೂಪರ್ ಚಾಂಪಿಯನ್ಸ್‌ಗಾಗಿ ಹುರಿದುಂಬಿಸುತ್ತಿರುವುದು ಕಂಡುಬಂತು. ಈ ಜೋಡಿ ಮಾ ಇಂಟಿ ಬಂಗಾರಂನಲ್ಲಿಯೂ ಒಟ್ಟಿಗೆ ಕೆಲಸ ಮಾಡಿತು.