BBK 13: ಕಿರಣ್ ಶಾಸ್ತ್ರಿ ಪ್ಲ್ಯಾನ್ ಸಕ್ಸಸ್; ಒಂದೇ ವಾರದಲ್ಲಿ 3 ಸ್ಪರ್ಧಿಗಳಿಗೆ ಜೈಲು ಶಿಕ್ಷೆ; ಬಿಗ್ ಬಾಸ್ ಫಾರ್ಮ್ಯಾಟ್ ಬದಲಾಯಿಸ್ತೀರಾ? ಕಳಪೆ ಪಟ್ಟ ಸಿಕ್ಕಿದ್ದಕ್ಕೆ ಕ್ಯಾಪ್ಟನ್ ಗಾನವಿ ಕಣ್ಣೀರು..!

ವಾರದ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯ ಕಿರಣ್ ಶಾಸ್ತ್ರಿ ಅವರು ಮೊದಲು ಧ್ವನಿ ಎತ್ತಿದರು.
ganavi gowda, Asiya and Soundarya
ಕಳಪೆ ಪಟ್ಟ ಪಡೆದ ಮೂವರು ಮಹಿಳಾ ಸ್ಪರ್ಧಿಗಳು.
Updated on: 

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ರಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ.

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಮಹಿಳಾ ಸ್ಪರ್ಧಿಗಳಿಗೆ ಒಟ್ಟಿಗೆ 'ಕಳಪೆ' ಪಟ್ಟ ನೀಡಿ ಜೈಲಿಗೆ ಕಳುಹಿಸಲಾಗಿದೆ.

ಮನೆಯ ಕ್ಯಾಪ್ಟನ್ ಹಾಗೂ ಮಹಾರಾಣಿ ಪಟ್ಟಕ್ಕೇರಿದ್ದ ಗಾನವಿ ಗೌಡ, ಆಸಿಯಾ ಫಿರ್ದೋಸ್ ಹಾಗೂ ಸೌಂದರ್ಯ ಶೆಟ್ಟಿ ಈ ವಾರ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ವಾರದ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯ ಕಿರಣ್ ಶಾಸ್ತ್ರಿ ಅವರು ಮೊದಲು ಧ್ವನಿ ಎತ್ತಿದರು.

ಈ ವಾರದ ಆಟ ಹಾಗೂ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸೌಂದರ್ಯ, ಆಸಿಯಾ ಮತ್ತು ಗಾನವಿ ಮೂವರನ್ನೂ ಜೈಲಿಗೆ ಕಳುಹಿಸಬೇಕು ಎಂದು ಅವರು ಪಟ್ಟು ಹಿಡಿದರು. ಕಿರಣ್ ಅವರ ಈ ನಿರ್ಧಾರಕ್ಕೆ ಮನೆಯ ಬಹುತೇಕ ಸದಸ್ಯರು ಬೆಂಬಲ ಸೂಚಿಸಿದರು.

ganavi gowda, Asiya and Soundarya
BBK 13: ಬಿಗ್‌ ಬಾಸ್ ಮನೆಯಿಂದ ಅಗ್ನಿಪರೀಕ್ಷೆಯ ಕುಮಾರಿ ಎಲಿಮಿನೇಟ್; ಇದೇ ಕಾರಣ!

ಇನ್ನು, ಟಾಸ್ಕ್ ಗೆದ್ದು ಮನೆಯ ಮಹಾರಾಣಿ ಹಾಗೂ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಗಾನವಿ ಗೌಡ ಅವರಿಗೆ ಈ ನಿರ್ಧಾರ ತೀವ್ರ ಶಾಕ್ ನೀಡಿತು.

ಮೂವರಿಗೆ ಒಟ್ಟಿಗೆ ಕಳಪೆ ಕೊಡಲು ಹೇಗೆ ಸಾಧ್ಯ? ಬಿಗ್ ಬಾಸ್ ಫಾರ್ಮ್ಯಾಟ್ ಬದಲಾಯಿಸುತ್ತೀರಾ? ಎಂದು ಗಾನವಿ ಮನೆಯವರನ್ನು ಪ್ರಶ್ನಿಸಿದರು. ಅಲ್ಲದೆ, ಈ ಅನಿರೀಕ್ಷಿತ ಬೆಳವಣಿಗೆಯಿಂದ ಭಾವುಕರಾಗಿ ಕಣ್ಣೀರು ಹಾಕಿದರು.

ಆದರೆ, ಮನೆಯ ಬಹುತೇಕ ಸದಸ್ಯರು ಒಮ್ಮತದಿಂದ ಈ ಮೂವರ ಹೆಸರನ್ನು ಸೂಚಿಸಿದ ಕಾರಣ, ಬಿಗ್ ಬಾಸ್ ಆದೇಶದಂತೆ ಗಾನವಿ ಗೌಡ, ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯ ಶೆಟ್ಟಿ ಮೂವರೂ ಜೈಲು ಸೇರಬೇಕಾಯಿತು. ಇದರಂತೆ ಕ್ಯಾಪ್ಟನ್ ಆಗಿದ್ದಾಗಲೇ ಕಳಪೆ ಪಟ್ಟ ಪಡೆದು ಜೈಲು ಸೇರಿದ ಅಪರೂಪದ ಮತ್ತು ದಾಖಲೆಯ ಘಟನೆಗೆ ಈ ವಾರದ ಬಿಗ್ ಬಾಸ್ ಮನೆ ಸಾಕ್ಷಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X