16 ವರ್ಷಗಳ ಬಳಿಕ 'ಕೃಷ್ಣನ್ ಲವ್ ಸ್ಟೋರಿ' ಸೀಕ್ವೆಲ್: ಕೃಷ್ಣ ಅಜಯ್ ರಾವ್‌ಗೆ ಜೋಡಿಯಾದ ಪ್ರಿಯಾಂಕಾ ಆಚಾರ್!

ಈ ಚಿತ್ರದ ನಿರ್ಮಾಣ ಪೂರ್ವ ಕಾರ್ಯಗಳು ವೇಗವಾಗಿ ಸಾಗುತ್ತಿದ್ದು, ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ತಂಡವು ಯೋಜಿಸುತ್ತಿದೆ; ಇದೇ ಸಮಯದಲ್ಲಿ ಪಾತ್ರವರ್ಗದ ವಿವರಗಳ ಅಧಿಕೃತ ಘೋಷಣೆಯಾಗಲಿದೆ.
Priyanka Achar, Krishna Ajai Rao and Shashank
ಪ್ರಿಯಾಂಕಾ ಆಚಾರ್ - ಕೃಷ್ಣ ಅಜಯ್ ರಾವ್ ಮತ್ತು ಶಶಾಂಕ್
Updated on: 

'ಕೃಷ್ಣನ್ ಲವ್ ಸ್ಟೋರಿ' ಚಿತ್ರವು ಪ್ರೇಕ್ಷಕರ ಮನಗೆದ್ದು 16 ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕ ಶಶಾಂಕ್ ಮತ್ತು ನಟ ಕೃಷ್ಣ ಅಜಯ್ ರಾವ್ ಈ ಚಿತ್ರದ ಮುಂದುವರಿದ ಭಾಗಕ್ಕಾಗಿ (ಸೀಕ್ವೆಲ್) ಮತ್ತೊಮ್ಮೆ ಒಂದಾಗುತ್ತಿದ್ದಾರೆ. 'ಕೃಷ್ಣನ್ ಲವ್ ಸ್ಟೋರಿ 2' ಚಿತ್ರವು, ಗೀತಾ (ರಾಧಿಕಾ ಪಂಡಿತ್ ನಿರ್ವಹಿಸಿದ ಪಾತ್ರ) ಅಗಲಿಕೆಯ ನಂತರದ ಕೃಷ್ಣನ ಜೀವನವನ್ನು ಅನಾವರಣಗೊಳಿಸಲಿದೆ. ಕಥೆಯ ಸಹಜ ಬೆಳವಣಿಗೆಗೆ ಈ ಹದಿನಾರು ವರ್ಷಗಳ ಅಂತರ ಅತ್ಯಗತ್ಯವಾಗಿತ್ತು ಎಂದು ನಿರ್ದೇಶಕರು ತಿಳಿಸಿದ್ದಾರೆ. ನಾಯಕಿ ಯಾರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದ್ದು, ಏಳುಮಲೆ ಖ್ಯಾತಿಯ ಪ್ರಿಯಾಂಕ ಆಚಾರ್ ಆಯ್ಕೆಯಾಗಿದ್ದಾರೆ.

'ಮಹಾನಟಿ' ರಿಯಾಲಿಟಿ ಶೋನಲ್ಲಿ ಗೆದ್ದ ನಂತರ ಪ್ರಿಯಾಂಕಾ ನಿರ್ದೇಶಕ-ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ನಿರ್ಮಾಣದ 'ಎಳುಮಲೆ' ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಚಿತ್ರವು ಯಶಸ್ಸು ಕಂಡಿತು. ಸದ್ಯ 'ಸೆಲೆಬ್ರಿಟಿ' ಎಂಬ ಕನ್ನಡ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಾಗೂ ತೆಲುಗು ಚಿತ್ರರಂಗದಲ್ಲೂ ಹೆಜ್ಜೆ ಇಡುತ್ತಿರುವ ಪ್ರಿಯಾಂಕಾ, ಈಗ ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಈ ಚಿತ್ರದ ನಿರ್ಮಾಣ ಪೂರ್ವ ಕಾರ್ಯಗಳು ವೇಗವಾಗಿ ಸಾಗುತ್ತಿದ್ದು, ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ತಂಡವು ಯೋಜಿಸುತ್ತಿದೆ; ಇದೇ ಸಮಯದಲ್ಲಿ ಪಾತ್ರವರ್ಗದ ವಿವರಗಳ ಅಧಿಕೃತ ಘೋಷಣೆಯಾಗಲಿದೆ.

Priyanka Achar, Krishna Ajai Rao and Shashank
'ಏಳುಮಲೆ' ನಂತರ ಮತ್ತೊಂದು ಚಿತ್ರಕ್ಕೆ ಪ್ರಿಯಾಂಕಾ ಆಚಾರ್ ಸಹಿ

ಅಜಯ್ ರಾವ್ ಅವರೊಂದಿಗೆ, ಉಮಾಶ್ರೀ ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಮೂಲ ಚಿತ್ರದ ಪ್ರಮುಖ ಕಲಾವಿದರು ತಮ್ಮ ಪಾತ್ರಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ. ತಾಂತ್ರಿಕ ತಂಡದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ಅಭಿಲಾಷ್ ಕಲಥಿ ಅವರು ಸೇರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com