Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

ಬಿಗ್ ಬಾಸ್ ಕೊಟ್ಟ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ವೇಳೆ ನಟಿ ಸಂಗೀತಾ ಭಟ್ ಅವರು ಏಕಾಏಕಿ ಕುಸಿದು ಬಿದ್ದಿದ್ದು, ಅಸ್ವಸ್ಥಗೊಂಡ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Bigg Boss Kannada: Actress Sangeetha Bhat collapsed during a task
ನಟಿ ಸಂಗೀತಾ ಭಟ್
Updated on: 

ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ತಮ್ಮ ಆರೋಗ್ಯದಲ್ಲಿ ಏರುಪೇರಾದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್-13ರ ಮನೆಯಿಂದ ಹೊರಬಂದ ಬೆನ್ನಲ್ಲೇ ನಟಿ ಸಂಗೀತ ಭಟ್ ಅವರ ಆರೋಗ್ಯದಲ್ಲೂ ದಿಢೀರ್ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಕೊಟ್ಟ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ವೇಳೆ ನಟಿ ಸಂಗೀತಾ ಭಟ್ ಅವರು ಏಕಾಏಕಿ ಕುಸಿದು ಬಿದ್ದಿದ್ದು, ಅಸ್ವಸ್ಥಗೊಂಡ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಟಾಸ್ಕ್‌ನಲ್ಲಿ ಸಂಗೀತಾ ಭಟ್ ಅವರು ರಾಕ್ಷಸರ ತಂಡದಲ್ಲಿದ್ದರು. ಟಾಸ್ಕ್‌ನಲ್ಲಿ ಚಟುವಟಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಗೀತಾ ಭಟ್‌ಗೆ ತೀವ್ರ ವೀಝಿಂಗ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ಕೂಡಲೆ ಅವರನ್ನ ಕನ್‌ಫೆಶನ್‌ ರೂಮ್‌ ಒಳಗೆ ಬಿಡಲಾಗಿದೆ.

Bigg Boss Kannada: Actress Sangeetha Bhat collapsed during a task
ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ಏಕಾಏಕಿ ಆಸ್ಪತ್ರೆಗೆ ಸೇರೋದಕ್ಕೆ ಕಾರಣ ಏನು: ಮಾಹಿತಿ ಬಿಚ್ಚಿಟ್ಟ ಪ್ರಥಮ ಪ್ರಸಾದ್‌!

ವಿಡಿಯೋ ವೈರಲ್

ಸಂಗೀತಾ ಭಟ್‌ ಅವರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನ ಎತ್ತಿಕೊಂಡು ಕನ್‌ಫೆಶನ್‌ಗೆ ರೂಮ್‌ಗೆ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಸದ್ಯ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮದ ಲೈವ್‌ನಲ್ಲಿ ಸಂಗೀತಾ ಭಟ್ ಅವರು ಕಾಣಿಸುತ್ತಿಲ್ಲ. ಸಂಗೀತಾ ಭಟ್ ಇನ್ನೂ ಆಸ್ಪತ್ರೆಯಲ್ಲಿದ್ದಾರಾ? ಸಂಗೀತಾ ಭಟ್ ಆರೋಗ್ಯವಾಗಿದ್ದಾರಾ? ಅವರಿಗೆ ಏನಾಗಿದೆ? ವಾಪಸ್ ಬರ್ತಾರಾ? ಎಂಬ ಪ್ರಶ್ನೆಗಳನ್ನು ವೀಕ್ಷಕರು ಕೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com