‘ನನಗೆ ಎಕ್ಸ್‌ಪೋಸಿಂಗ್ ಅಥವಾ ಮೈ ತೋರಿಸೋದು ಇಷ್ಟ ಇಲ್ಲ’: 'ಪೆದ್ದಿ' ಜಾನ್ವಿ ಕಪೂರ್ ಬಗ್ಗೆ ರಶ್ಮಿಕಾ ಹೇಳಿದ್ದೇನು?

'ಪೆದ್ದಿ' (Peddi) ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ ಅವರ ಪಾತ್ರ ಮತ್ತು ಅದರಲ್ಲಿ ಅವರು ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾಡಿದ್ದಾರೆ ಎಂಬ ವಿವಾದದ ಬಗ್ಗೆ ಕರಣ್ ಜೋಹರ್ ಅವರು ಇಬ್ಬರನ್ನೂ ಪ್ರಶ್ನಿಸಿದ್ದಾರೆ.
‘I am not comfortable with exposing or skin show’: Rashmika Mandanna
ರಶ್ಮಿಕಾ - ವಿಜಯ್
Updated on: 

ಕೆಲವು ಕಮರ್ಷಿಯಲ್ ಸಿನಿಮಾಗಳಲ್ಲಿ ಮೈ ಕಾಣುವಂತಹ ಉಡುಪುಗಳನ್ನು ಧರಿಸುವಂತೆ ನಟಿಯರ ಮೇಲೆ ಕೆಲವೊಮ್ಮೆ ಒತ್ತಡ ಹೇರಲಾಗುತ್ತದೆ. ಈ ವಿಷಯದ ಕುರಿತು ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ಹಾಗೂ ಅವರ ಪತಿ ವಿಜಯ್ ದೇವರಕೊಂಡ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ತಮಗೆ ಮುಜುಗರ ಉಂಟುಮಾಡುವ ಯಾವುದೇ ವಿಷಯಕ್ಕೆ ಮಣಿಯದೆ, ತಮ್ಮ ನಿಲುವಿಗೆ ದೃಢವಾಗಿ ನಿಲ್ಲಬೇಕು ಎಂದು ವಿಜಯ್ ದೇವರಕೊಂಡ ಅವರು 'ಕಾಫಿ ವಿತ್ ಕರಣ್' (Koffee With Karan) ಕಾರ್ಯಕ್ರಮದಲ್ಲಿ ನಟಿಯರಿಗೆ ಸಲಹೆ ನೀಡಿದ್ದಾರೆ.

ಈ ಸಂಭಾಷಣೆಯ ವೇಳೆ, 'ಪೆದ್ದಿ' (Peddi) ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ ಅವರ ಪಾತ್ರ ಮತ್ತು ಅದರಲ್ಲಿ ಅವರು ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾಡಿದ್ದಾರೆ ಎಂಬ ವಿವಾದದ ಬಗ್ಗೆ ಕರಣ್ ಜೋಹರ್ ಅವರು ಇಬ್ಬರನ್ನೂ ಪ್ರಶ್ನಿಸಿದ್ದಾರೆ.

‘I am not comfortable with exposing or skin show’: Rashmika Mandanna
'ನನ್ನನ್ನು ಮದುವೆಯಾಗುವಂತೆ ನಾನೇ ಒಂದು ವರ್ಷ ವಿಜಯ್ ದೇವರಕೊಂಡ ಹಿಂದೆ ಬಿದ್ದಿದ್ದೆ': ನಟಿ ರಶ್ಮಿಕಾ ಮಂದಣ್ಣ

ಕೆಲವು ಕಮರ್ಷಿಯಲ್ ಸಿನಿಮಾಗಳು ನಟಿಯರ ಮೈ ಕಾಣುವಂತಹ ವೇಷಭೂಷಣಗಳನ್ನು ಬಯಸುತ್ತವೆ ಎಂದು ರಶ್ಮಿಕಾ ಒಪ್ಪಿಕೊಂಡರು. ಆದಾಗ್ಯೂ, ತಮ್ಮ ಇಷ್ಟಕ್ಕೆ ವಿರುದ್ಧವಾದ ಯಾವುದನ್ನೂ ತಾನು ಒಪ್ಪುವುದಿಲ್ಲ ಎಂದು ರಶ್ಮಿಕಾ ಸ್ಪಷ್ಟಪಡಿಸಿದರು.

ಕಮರ್ಷಿಯಲ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಅನಾನುಕೂಲತೆಯನ್ನುಂಟುಮಾಡುವ ಬಟ್ಟೆಗಳನ್ನು ಧರಿಸಲು ಹೇಳಿದಾಗ, ವಿಜಯ್ ಅವರ ಸಲಹೆಯನ್ನು ಪಡೆಯುವುದಾಗಿಯೂ ನಟಿ ಬಹಿರಂಗಪಡಿಸಿದರು. ಅಲ್ಲದೆ "ನನಗೆ ಇಷ್ಟವಿಲ್ಲದ ಕೆಲವು ವಿಷಯಗಳಿವೆ. ಕೆಲವು ಪಾತ್ರಗಳಿಗೆ ಬಿಕಿನಿ ಅಥವಾ ಅಂತಹದ್ದೇನಾದರೂ ಬೇಕಾಗುತ್ತದೆ ಎಂದು ನನಗೆ ತಿಳಿದಿದೆ, ಆದರೆ ಅದರಲ್ಲಿಯೂ ಸಹ, ನಾನು ಎಕ್ಸ್‌ಪೋಸಿಂಗ್ ಅಥವಾ ಸ್ಕಿನ್ ಶೋನಲ್ಲಿ ಹೆಚ್ಚು ಕಂಫರ್ಟಬಲ್ ಅಲ್ಲ. ಅದು ನನಗೆ ಇಷ್ಟ ಇಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.

"ಆದರೆ ಅದೇ ಸಮಯದಲ್ಲಿ, ನಾನು ನನಗಾಗಿ ಕೆಲವು ಕಂಡೀಷನ್​ಗಳನ್ನು ಹಾಕುತ್ತೇನೆ. ಅವುಗಳನ್ನು ಹೆಚ್ಚಾಗಿ ನಿರ್ದೇಶಕರು ಒಪ್ಪುತ್ತಾರೆ. ಅಂತಹ ಜನರೊಂದಿಗೆ ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ" ಎಂದು ನಟಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com