'ಅವರು ಆಸ್ಕರ್ ಪ್ರಶಸ್ತಿಗೆ ಅರ್ಹರು...': ಪತಿಯಿಂದ ವಿಚ್ಛೇದನ ಪಡೆಯುತ್ತಿರುವ ಬೆನ್ನಲ್ಲೇ ರಹಸ್ಟ ಪೋಸ್ಟ್ ಹಂಚಿಕೊಂಡ ಆರತಿ ರವಿ!

ಆರತಿ ಮತ್ತು ರವಿ ಮೋಹನ್ 2009 ರಲ್ಲಿ ವಿವಾಹವಾದರು ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಅಂತಿಮವಾಗಿ ರವಿ ಮೋಹನ್ ಹೆಂಡತಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದರು.
Aarati ravi - Jayam Ravi
ನಟ ಜಯಂ ರವಿ ಮತ್ತು ಆರತಿ ರವಿ
Updated on

ಚೆನ್ನೈ: ತಮಿಳು ನಟ ರವಿ ಮೋಹನ್ ಇದೀಗ ತಮ್ಮ ಪತ್ನಿ ಆರತಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆಗಳು ಮತ್ತು ಅನೈತಿಕ ಸಂಬಂಧದ ವದಂತಿಗಳ ಕಾರಣಕ್ಕಾಗಿ ವಿವಾದದ ಕೇಂದ್ರಬಿಂದುವಾಗಿದ್ದು, ಪತ್ನಿ ಆರತಿ ಇದೀಗ ರಹಸ್ಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆರತಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆದಿದ್ದು, ಅನೇಕ ಬಳಕೆದಾರರು ಇದನ್ನು ಅವರ ಪತಿ ರವಿ ಮೋಹನ್ ಕುರಿತಾದ ಪರೋಕ್ಷ ಟೀಕೆ ಎಂದೇ ಭಾವಿಸಿದ್ದಾರೆ.

ಯಾರನ್ನೂ ಹೆಸರಿಸದೆ, ಆರತಿ ತಮ್ಮ ಜೀವನದಲ್ಲಿ ಪ್ರವೇಶಿಸಿದ ವ್ಯಕ್ತಿಯ ನಟನೆಯನ್ನು ತಮಿಳು ಚಿತ್ರರಂಗದ ಕೆಲವು ದೊಡ್ಡ ತಾರೆಯರ ಅಭಿನಯದೊಂದಿಗೆ ಹೋಲಿಸಿದ್ದಾರೆ. ದಂಪತಿ ವಿಚ್ಛೇಧನ ಪಡೆಯುತ್ತಿದ್ದಾರೆ ಎಂಬ ಬೆಳವಣಿಗೆಗಳ ನಡುವೆಯೇ ಅವರ ಪೋಸ್ಟ್ ವೈರಲ್ ಆಗಿದೆ.

ಆರತಿ, 'ಸೂರ್ಯ, ಅಜಿತ್, ವಿಕ್ರಮ್, ಕಮಲ್ ಇವಂಗ ಎಲ್ಲಾರಾಯಿಯಮ್ ವಿದಾ ಎನ್ ಲೈಫ್ ಲಾ ವಂತ ಒರುಥನ್ ನಡಿಚಾನೆ, ನಡಿಪ್ಪು ಆಸ್ಕರ್ ಪ್ರಶಸ್ತಿ ಎಹ್ ಕುಡುಕಲಂ ಡಾ (ಸೂರ್ಯ, ಅಜಿತ್, ವಿಕ್ರಮ್ ಮತ್ತು ಕಮಲ್ ಅವರೊಂದಿಗೆ ಹೋಲಿಸಿದರೆ, ನನ್ನ ಜೀವನದಲ್ಲಿ ಬಂದ ವ್ಯಕ್ತಿ ತುಂಬಾ ಚೆನ್ನಾಗಿ ನಟಿಸಿದ್ದಾರೆ, ಅವರ ನಟನೆಯು ಆಸ್ಕರ್‌ಗೆ ಅರ್ಹ)' ಎಂದು ಬರೆದಿದ್ದಾರೆ.

ಈ ಪೋಸ್ಟ್‌ನಲ್ಲಿ ರವಿ ಮೋಹನ್ ಅವರ ಹೆಸರು ಎಲ್ಲಿಯೂ ಕಾಣಿಸದಿದ್ದರೂ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಹೇಳಿಕೆ ಅವರನ್ನೇ ಗುರಿಯಾಗಿರಿಸಿಕೊಂಡಿದೆ ಎಂದು ಶಂಕಿಸಿದ್ದಾರೆ.

Aarati ravi - Jayam Ravi
'ಮಲಗಿರುವ ಸಿಂಹವನ್ನು ಬಡಿದೆಬ್ಬಿಸುವುದು ಬೇಡ': ಜಯಂ ರವಿ ಆರೋಪಗಳಿಗೆ ಪತ್ನಿ ಆರತಿ ತಿರುಗೇಟು!

ಆರತಿ ಮತ್ತು ರವಿ ಮೋಹನ್ 2009 ರಲ್ಲಿ ವಿವಾಹವಾದರು ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಅಂತಿಮವಾಗಿ ರವಿ ಮೋಹನ್ ಹೆಂಡತಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದರು. ಅಂದಿನಿಂದ ಕಾನೂನು ಪ್ರಕ್ರಿಯೆಗಳ ಕುರಿತಾದ ವರದಿಗಳು ಸಾರ್ವಜನಿಕ ಗಮನ ಸೆಳೆಯುತ್ತಲೇ ಇವೆ. ಆರತಿ ಕೂಡ ಈ ಪ್ರಕ್ರಿಯೆಯ ಭಾಗವಾಗಿ ಆರ್ಥಿಕ ಸಹಾಯವನ್ನು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್ ವ್ಯಾಪಕ ಗಮನಸೆಳೆದಿದೆ.

ಜಯಂ ರವಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರವಿ ಮೋಹನ್, ವಿವಿಧ ಪ್ರಕಾರಗಳ ಚಿತ್ರಗಳೊಂದಿಗೆ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಪುತ್ರಿಯಾಗಿರುವ ಆರತಿ ಅವರನ್ನು ವಿವಾಹವಾದರು. ನಂತರ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು.

ರವಿ ಮೋಹನ್ ಮತ್ತು ಆರತಿ ರವಿ ನಡುವಿನ ವಿಚ್ಛೇದನ ಪ್ರಕ್ರಿಯೆಗಳು ಸದ್ಯ ನಡೆಯುತ್ತಿವೆ. ವೈವಾಹಿಕ ಜೀವನದ ಸಮಸ್ಯೆಗಳ ಕುರಿತು ವರದಿಗಳು ಹೊರಬಂದಾಗಿನಿಂದ ಅವರ ಬೇರ್ಪಡುವಿಕೆ ಸಾರ್ವಜನಿಕ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಥೆರಪಿಸ್ಟ್ ಕೆನೀಶಾ ಫ್ರಾನ್ಸಿಸ್ ಜೊತೆಗೆ ಸಂಬಂಧದ ಕುರಿತು ಚರ್ಚೆಗಳಾಗುತ್ತಿವೆ. ನಟನಿಂದ ದೂರವಾಗುವ ಬಗ್ಗೆ ಕೆನೀಶಾ ಫ್ರಾನ್ಸಿಸ್ ಸುಳಿವು ನೀಡಿದ ನಂತರ ಪ್ರಕರಣದ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com