BBK 13: ನಿನ್ನನ್ನು ಎತ್ತಿ ಕುಕ್ಕಿ ಬಿಡ್ತೀನಿ.. ಸೌಂದರ್ಯಗೆ ಮಂಜು ಆವಾಜ್; 'Biggboss' ಮನೆಯಲ್ಲಿ ಕೈ ಮೀರಿದ ಪರಿಸ್ಥಿತಿ!

Bigg Boss ಕನ್ನಡ ಸೀಸನ್ 13ರಲ್ಲಿ ದಿನ ಕಳೆದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗುತ್ತಿವೆ. ತನ್ನ ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದನ್ನು ʼಬಿಗ್‌ ಬಾಸ್‌ʼ ಸ್ಪರ್ಧಿಗಳಿಗೆ ನೀಡಿದ್ದರು. ಈ ಟಾಸ್ಕ್ ವೇಳೆ ಸೌಂದರ್ಯಾ ಹಾಗೂ ಮಂಜು ನಡುವೆ ದೊಡ್ಡ ಮಟ್ಟದ ಕಿತ್ತಾಟವೇ ನಡೆದಿದೆ.
Soundarya Shetty, Manju
ಸೌಂದರ್ಯಾ ಶೆಟ್ಟಿ, ಮಂಜು ನಡುವೆ ಮಾರಾಮಾರಿ
Updated on

Bigg Boss ಕನ್ನಡ ಸೀಸನ್ 13ರಲ್ಲಿ ದಿನ ಕಳೆದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗುತ್ತಿವೆ. ತನ್ನ ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದನ್ನು ʼಬಿಗ್‌ ಬಾಸ್‌ʼ ಸ್ಪರ್ಧಿಗಳಿಗೆ ನೀಡಿದ್ದರು. ಈ ಟಾಸ್ಕ್ ವೇಳೆ ಸೌಂದರ್ಯಾ ಹಾಗೂ ಮಂಜು ನಡುವೆ ದೊಡ್ಡ ಮಟ್ಟದ ಕಿತ್ತಾಟವೇ ನಡೆದಿದೆ. ತನಗೆ ಕೊಟ್ಟಿರುವ ವಸ್ತುಗಳನ್ನು ಪ್ರತಿಸ್ಪರ್ಧಿಗಳಿಂದ ಕಾಪಾಡಿಕೊಳ್ಳುವ ಆಟದಲ್ಲಿ ಮಂಜ, ಧನುಷ್‌ ಹಾಗೂ ಸೌಂದರ್ಯ ನಡುವೆ ಜಗಳ ಆಗಿದೆ.

ಮೊದಲಿಗೆ ಸೌಂದರ್ಯ ಬಳಿಯಿದ್ದ ವಸ್ತುಗಳನ್ನು ಧನುಷ್‌ ಕಸಿದುಕೊಳ್ಳಲು ಯತ್ನಿಸಿದ್ದರು. ಈ ವೇಳೆ ಧನುಷ್‌ಗೆ ಸೌಂದರ್ಯ ಬಕೆಟ್‌ನಿಂದ ಹೊಡೆಯಲು ಯತ್ನಿಸಿದ್ದಾಳೆ. ಇದಕ್ಕೆ ಧನುಷ್‌ ಹೊಡಿ ಎಂದಿದ್ದು, ಸೌಂದರ್ಯ ಬಾ ಎಂದು ಟಕ್ಕರ್‌ ಕೊಟ್ಟಿದ್ದಾರೆ. ಧನುಷ್‌ ವಸ್ತುಗಳನ್ನು ಬಲ ಪ್ರಯೋಗ ಮಾಡಿ ಸೌಂದರ್ಯ ಕೈಯಿಂದ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಇನ್ನೊಂದು ಕಡೆ ಮಂಜ ಕೂಡ ಸೌಂದರ್ಯ ಅವರಿಂದ ವಸ್ತುಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಸೌಂದರ್ಯ ಮೊದಲು ಬಿಡು ಬಿಡು ಎಂದು ವಾರ್ನ್‌ ಮಾಡಿದ್ದಾರೆ. ಆದರೆ ಮಂಜ ಇದನ್ನು ಕೇಳಿಲ್ಲ. ಮಂಜ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಂತೆ ಸೌಂದರ್ಯ ಕೋಪ ನೆತ್ತಿಗೇರಿದ್ದು, ಮಂಜನಿಗೆ ಹೊಡೆಯಲು ಹೋಗುತ್ತಾಳೆ.

Soundarya Shetty, Manju
'ಟಾಕ್ಸಿಕ್' ಬಳಿಕ ನಟಿ ಮಾಲಾಶ್ರೀ ಜೊತೆಗೆ ಹೊಸ ಚಿತ್ರದಲ್ಲಿ ರುಕ್ಮಿಣಿ ವಸಂತ್: 'ಮಂಗಳ ಗೌರಿ' ಫಸ್ಟ್ ಲುಕ್ ರಿಲೀಸ್!

ಇದರಿಂದ ಸಿಟ್ಟಾದ ಮಂಜ ನನಗೆ ನಿನ್ನನ್ನು ಎತ್ತಿ ಹಾಕಿ ಕುಕ್ಕಿ ಬಿಡೋಣ ಅನುಸ್ತಿದೆ ಎಂದು ಹೇಳುತ್ತಾ ಸೌಂದರ್ಯ ಪಕ್ಕಕ್ಕೆ ಹೋಗಿದ್ದಾನೆ. ಇದನ್ನು ನೋಡುತ್ತಿದ್ದ ಮನೆ ಮಂದಿ ಕೂಡಲೇ ಮಧ್ಯಪ್ರವೇಶಿಸಿ ಮಂಜನನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಒಂದು ವೇಳೆ ಸೌಂದರ್ಯ ಆಗಲಿ, ಮಂಜ ಆಗಲಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ರೆ, ಇದು ʼಬಿಗ್‌ ಬಾಸ್‌ʼ ನಿಯಮದ ಉಲ್ಲಂಘನೆ ಆಗುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com