‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಚಿತ್ರರಂಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Kannada legend Anant Nag to receive Dadasaheb Phalke Award 2024
ಅನಂತ್ ನಾಗ್ ಹಾಗೂ ಪತ್ನಿ ಗಾಯತ್ರಿ
Updated on

ಬೆಂಗಳೂರು: ಕೇಂದ್ರ ಸರ್ಕಾರ, ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ 2024’ಕ್ಕೆ ಚಂದನವನದ ಹಿರಿಯ ನಟ ಅನಂತ್‌ ನಾಗ್‌ ಅವರನ್ನು ಆಯ್ಕೆ ಮಾಡಿದೆ.

ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಚಿತ್ರರಂಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ ಸಂದಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅವರ ಪತ್ನಿ ಗಾಯತ್ರಿ ಅನಂತ್ ನಾಗ್ ಅವರು, ಪತಿ ಈ ವಿಚಾರವನ್ನು ತಿಳಿಸಿದ್ದಾರೆ. ಆದರೆ ಇದನ್ನು ನಂಬದ ಅನಂತ್ ನಾಗ್ ಅವರು, ಅದು ‘ಸುಳ್ಳು ಸುದ್ದಿ’ ಎಂದು ನಕ್ಕು ಮಲಗಿದ್ದಾರೆ.

Kannada legend Anant Nag to receive Dadasaheb Phalke Award 2024
ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ಅನಂತ್ ನಾಗ್ ಅವರ ಪತ್ನಿ ಗಾಯತ್ರಿ ಅವರು, ಈ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

‘ಸುಮಾರು ಅರ್ಧ ಗಂಟೆ ಮುಂಚೆ ನನಗೊಬ್ಬರು ಪತ್ರಕರ್ತರು ಫೋನ್ ಮಾಡಿ ಈ ಸುದ್ದಿ ತಿಳಿಸಿದರು. ನನಗೆ ತಕ್ಷಣಕ್ಕೆ ಅದು ಸತ್ಯವೇ ಎಂದು ನಂಬಲು ಸಾಧ್ಯವಾಗಲಿಲ್ಲ. ಈ ವೇಳೆ ಅನಂತ್ ನಾಗ್ ಅವರು ಮನೆಯಲ್ಲೇ ಇದ್ದರು, ಅವರಿಗೆ ವಿಷಯ ತಿಳಿಸಿದೆ. ಆದರೆ ಅವರು ‘ಇದೇನೋ ಸುಳ್ಳು ಸುದ್ದಿ ಇರಬೇಕು’ ಎಂದು ಹೇಳಿ ಮತ್ತೆ ಮಲಗಲು ಹೊರಟುಬಿಟ್ಟರು’ ಎಂದು ಗಾಯತ್ರಿ ಅವರು ನಗುತ್ತಾ ನೆನಪಿಸಿಕೊಂಡಿದ್ದಾರೆ.

‘ಆ ನಂತರ ವಾಟ್ಸಾಪ್‌ನಲ್ಲಿ ಅಧಿಕೃತ ಮಾಹಿತಿ ಮತ್ತು ಪತ್ರಿಕಾ ಪ್ರಕಟಣೆ ಹರಿದಾಡಲು ಶುರುವಾದಾಗ, ಅದನ್ನು ನೋಡಿ ಅನಂತ್ ನಾಗ್ ಅವರು ಎದ್ದು ಓದಿದರು. ತದನಂತರ ಶುಭಾಶಯಗಳ ಫೋನ್‌ ಕರೆಗಳ ಮಹಾಪೂರವೇ ಹರಿದು ಬಂತು’ ಎಂದು ಅವರು ಹೇಳಿದ್ದಾರೆ.

ಅನಂತ್ ಸಾಧನೆ ಬಗ್ಗೆ ಹೆಮ್ಮೆ ಇದೆ

ಇನ್ನು ತಮ್ಮ ಪತಿಯ ನಟನಾ ಪಯಣದ ಬಗ್ಗೆ ಮಾತನಾಡಿದ ಗಾಯತ್ರಿ ಅನಂತ್ ನಾಗ್ ಅವರು, ‘ಒಬ್ಬ ನಟನಾಗಿ ಅವರ ಸಾಧನೆ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಇದೆ. ಅವರು ಎಂದಿಗೂ ಬೇರೆಯವರ ಹಾದಿಯಲ್ಲಿ ನಡೆದವರಲ್ಲ . ತಮ್ಮದೇ ಆದ ವಿಶಿಷ್ಟ ಹಾದಿಯನ್ನು ರೂಪಿಸಿಕೊಂಡು ಬಂದವರು. ಅವರು ಬೇರೆ ಹಾದಿ ತುಳಿದರೂ ಸಹ ಕರ್ನಾಟಕದ ಜನತೆ ಅವರನ್ನು ಅಪಾರವಾಗಿ ಪ್ರೀತಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com