ಆಸ್ಪತ್ರೆಗೆ ದಾಖಲಾದ ಹಿರಿಯ ನಟಿ ಸುಂದರಶ್ರೀ: ನೆರವಿನ ನಿರೀಕ್ಷೆಯಲ್ಲಿ ಡಾ. ಗುಬ್ಬಿ ವೀರಣ್ಣ ಮೊಮ್ಮಗಳು!

ಆಸ್ಪತ್ರೆಯ ಹಾಸಿಗೆಯಿಂದಲೇ ವಿಡಿಯೋ ಮಾಡುವ ಮೂಲಕ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿರುವ ನಟಿ, ಕಲಾಭಿಮಾನಿಗಳಲ್ಲಿ ನೆರವಿನ ಹಸ್ತ ಚಾಚುವಂತೆ ಕೋರಿದ್ದಾರೆ.
sundarshree
ಸುಂದರಶ್ರೀ
Updated on: 

ಬೆಂಗಳೂರು: ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಹಿರಿಯ ನಟಿ ಸುಂದರಶ್ರೀ ಸದ್ಯ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿರುವ ಅವರು, ಚಿಕಿತ್ಸಾ ವೆಚ್ಚ ಭರಿಸಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆಸ್ಪತ್ರೆಯ ಹಾಸಿಗೆಯಿಂದಲೇ ವಿಡಿಯೋ ಮಾಡುವ ಮೂಲಕ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿರುವ ನಟಿ, ಕಲಾಭಿಮಾನಿಗಳಲ್ಲಿ ನೆರವಿನ ಹಸ್ತ ಚಾಚುವಂತೆ ಕೋರಿದ್ದಾರೆ.

ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಪದ್ಮಶ್ರೀ ಡಾ.ಗುಬ್ಬಿ ವೀರಣ್ಣನವರ ಮೊಮ್ಮಗಳು, ಹಿರಿಯ ರಂಗಕರ್ಮಿ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕಲಾವಿದೆಯಾಗಿ ವೀಕ್ಷಕರ ಮನಗೆದ್ದ ನಟಿ ಸುಂದರಶ್ರೀ. ಇವರ ಜನಪ್ರಿಯ ಪಾತ್ರಗಳು ‘ಈ ಟಿವಿ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಸುಂದ್ರಿ ಎಂಬ ಅಜ್ಜಿ ಪಾತ್ರ ಮಾಡಿದ್ದರು.

2003 ರಿಂದ 2008ರವೆಗೂ ಈ ಸೀರಿಯಲ್‌ ಜನಪ್ರಿಯತೆ ಪಡೆದಿತ್ತು. ಅಷ್ಟುದಿನಗಳ ಕಾಲ ಅಜ್ಜಿ ಪಾತ್ರ ಮಾಡಿದ್ದ ಸುಂದರಶ್ರೀ ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

sundarshree
Bigg Boss Kannada 13: "ಮೂರು ಬಿಟ್ಟೋರು ಅಲ್ಲಿರೋಕೆ ಸಾಧ್ಯ; ಎಲಿಮಿನೇಟ್ ಆಗ್ತಿದ್ದಂತೆ ಸ್ಪರ್ಧಿಗಳ ವಿರುದ್ಧ ನಟಿ ವೈಷ್ಣವಿ ಕಿಡಿ

ಸುಂದರಶ್ರೀ ಅವರದ್ದು ಕನ್ನಡ ರಂಗಭೂಮಿಯೊಂದಿಗೆ ಆಳವಾದ ನಂಟು ಹೊಂದಿರುವ ಕುಟುಂಬ. ಅವರು ಕನ್ನಡ ರಂಗಭೂಮಿಯ ದಿಗ್ಗಜ ಪದ್ಮಶ್ರೀ ಡಾ. ಗುಬ್ಬಿ ವೀರಣ್ಣನವರ ಮೊಮ್ಮಗಳು. ಗುಬ್ಬಿ ವೀರಣ್ಣನವರ ಕುಟುಂಬದಿಂದ ಹಲವು ಕಲಾವಿದರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸುಂದರಶ್ರೀ ಅವರು 1970ರಲ್ಲಿ ಬಿಡುಗಡೆಯಾದ ಪರೋಪಕಾರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು ಎಂದು ವರದಿಯಾಗಿದೆ. ನಂತರ ಕಾಡು ಕುದುರೆ, ಅದೇ ರಾಗ ಅದೇ ಹಾಡು, ಬಾಲ ಹೊಂಬಾಳೆ, ಟ್ರಂಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸುಂದರಶ್ರೀ ಗುಬ್ಬಿ ಅವರಿಗೆ 65 ವರ್ಷ ವಯಸ್ಸು. ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

"ನಮಸ್ಕಾರ, ನಾನು ಸುಂದರಶ್ರೀ ಈಗ ಮೈಗೆ ಹುಷಾರಿಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದೀನಿ. 3 ತಿಂಗಳಾಯ್ತು ಅಡ್ಮಿಟ್‌ ಆಗಿ, ನನಗೆ ಈಗ ಹಣದ ಅವಶ್ಯಕತೆಯಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಬಹುದು" ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ ಸುಂದರಶ್ರೀ ಅವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com