ಶ್‌...ಎಚ್ಚರಿಕೆ! ಚಿತ್ರ ಕಳಪೆಯಾದರೆ ಭಯಾನಕ ಚಿತ್ರಗಳು ತಮಾಷೆಯಾಗಿ ಕಾಣ್ತವೆ

ಶ್...ಎಚ್ಚರಿಕೆ ಚಿತ್ರ ಅವಾಸ್ತವಿಕ ಸೆಟ್ಟಿಂಗ್ಸ್ ಹಾಗೂ ಸಿಲ್ಲಿ ಕಥಾವಸ್ತುವಿನಿಂದ ಕೂಡಿದೆ...
ಶ್...ಎಚ್ಚರಿಕೆ
ಶ್...ಎಚ್ಚರಿಕೆ
Updated on: 

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ಚಿತ್ರಗಳು ಹೆಚ್ಚಾಗಿ ಬಿಡುಗಡೆಯಾಗ್ತಿವೆ. ಹೀಗೆ ಹೊಸಬರೆ ಸೇರಿ ಮಾಡಿರುವ ಶ್...ಎಚ್ಚರಿಕೆ ಚಿತ್ರ ತೆರೆಕಂಡಿದ್ದು, ಚಿತ್ರಕಥೆ ಕಳಪೆಯಾದರೆ ಹಾರರ್ ಚಿತ್ರಗಳು ಹೇಗೆ ಫನ್ನಿ ಎನಿಸುತ್ತದೆ ಎನ್ನುವುದಕ್ಕೆ ಶ್...ಎಚ್ಚರಿಕೆ ಚಿತ್ರ ಒಂದು ನಿದರ್ಶನವಾಗಿದೆ.

ಶ್ ಚಿತ್ರದ ಮೂಲಕ 1993ರಲ್ಲಿ ನಿರ್ದೇಶಕ ಉಪೇಂದ್ರ ಸ್ಯಾಂಡಲ್ ವುಡ್ ಮಂದಿಯ ನಿದ್ದೆ ಗೆಡಿಸಿದ್ದರು. ಅದೇ ಹೆಸರಿನಲ್ಲಿ ಮೂಡಿಬಂದಿರುವ ಹೊಸಬರ ಶ್...ಎಚ್ಚರಿಕೆ ಚಿತ್ರ ಅವಾಸ್ತವಿಕ ಸೆಟ್ಟಿಂಗ್ಸ್ ಹಾಗೂ ಸಿಲ್ಲಿ ಕಥಾವಸ್ತುವಿನಿಂದ ಕೂಡಿದ್ದು, ಭಯಾನಕ ಚಿತ್ರವಾದರು.. ತಮಾಷೆಯಾಗಿ ಕಾಣುತ್ತೆ.

ಚಿತ್ರದ ನಾಯಕ ಮನು(ಮಾರುತಿ ಸೂರ್ಯ) ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಕೆಲಸ ನಿಮಿತ್ತ ಮನು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕೊಡಗಿಗೆ ಹೋಗುತ್ತಾನೆ. ದಾರಿ ಮಧ್ಯೆ ಬೈಕ್ ಗೆ ಕಾರು ಡಿಕ್ಕಿ ಹೊಡೆಯುತ್ತದೆ. ಬೈಕ್ ನಿಂದ ಕೆಳಗೆ ಬಿದ್ದವನ್ನು ನೋಡದೆ ಹೊರಟು ಹೋಗುತ್ತಾರೆ. ಕೊಡಗಿನಲ್ಲಿ ಒಂಟಿ ಮನೆಯಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಂದ ತೊಂದರೆಗಳು ಹೆದರಾಗುತ್ತದೆ.

ಮುಂದೆ ಮನು ಮಗ ಕ್ರಿಸ್ ಗೆ ಇದರ ಅನುಭವವಾಗುತ್ತದೆ. ಈ ವಿಚಾರವಾಗಿ ತಂದೆಗೆ ಹೇಳಿದರು. ಮನು ಇದನ್ನು ನಂಬುವುದಿಲ್ಲ. ಪ್ರೇತಗಳೇ ಮುತ್ತಿಕೊಂಡಿರುವ ಸ್ಥಳದಿಂದ ಮನು ಕುಟುಂಬ ಅನುಭವಿಸು ತೊಂದರೆ ಹಾಗೂ ಇದರಿಂದ ಅವರು ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನ ಚಿತ್ರದ ಕಥಾವಸ್ತುವಾಗಿದೆ.

ಚಿತ್ರವನ್ನು ನಿರ್ದೇಶಿಸಿರುವ ನಾಗರಾಜ್‌ ಕಂದಗಲ್‌ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಹೊಸಬರೇ ತುಂಬಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತ ನೀಡಿದ್ದಾರೆ. "ಯಂಗ್‌ ಸ್ಟರ್ ಸೇರಿ ಭಯಪಡಿಸುವ ಸಿನಿಮಾ ಮಾಡಿದ್ದಾರೆ. ಇಲ್ಲಿ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಮಹತ್ವ ಇದೆ. ಹಾಗಂತ ದೃಶ್ಯಗಳು ಭಯ ಹುಟ್ಟಿಸುವುದಿಲ್ಲ ಅನ್ನುವಂತಿಲ್ಲ.

ಚಿತ್ರ: ಶ್...ಎಚ್ಚರಿಕೆ
ಪಾತ್ರಧಾರಿಗಳು: ಮಾರುತಿ ಸೂರ್ಯ, ಅಕ್ಷತಾ
ಬಾಬಿ ರಿಯಾ, ಬಾಬಿ ಶ್ರೇಯ, ಮಾಸ್ಟರ್ ಕ್ರಿಸ್, ಜೈ ಗಣೇಶ್
ನಿರ್ದೇಶಕ: ನಾಗರಾಜ್ ಕಂದಗಲ್

ಮೂಲ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com