O2 ಸಿನಿಮಾ ಸ್ಟಿಲ್
O2 ಸಿನಿಮಾ ಸ್ಟಿಲ್

O2 ಚಿತ್ರ ವಿಮರ್ಶೆ: ಸಂಶೋಧನೆ, ಪ್ರಯೋಗದ ನಡುವೆ ಪ್ರೀತಿ-ಪ್ರೇಮ; ಮೆಡಿಕಲ್ ಥ್ರಿಲ್ಲರ್‌ನ ರೋಚಕ ಕತೆ!

Rating(3 / 5)
Summary

ಹೃದಯಾಘಾತವಾದ ವ್ಯಕ್ತಿಗೆ ಆ ಕ್ಷಣದ ಟ್ರೀಟ್‌ಮೆಂಟ್‌ ತುಂಬ ಮುಖ್ಯ. ಹಾರ್ಟ್‌ ಅಟ್ಯಾಕ್‌ ಆದ ವ್ಯಕ್ತಿಗೆ O2 ಇಂಜೆಕ್ಟ್‌ ಮಾಡಿದರೆ, ಆ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದಾದ ಸಾಧ್ಯತೆ ಇರುತ್ತದೆ. O2 ಸಿನಿಮಾದಲ್ಲಿ ಪ್ರತಿಯೊಂದು ವಿಚಾರವನ್ನು ಬಹಳ ವೈಜ್ಞಾನಿಕವಾಗಿ ಹೇಳುವುದಕ್ಕೆ ಪ್ರಯತ್ನ ಮಾಡಲಾಗಿದೆ.

ಆಧುನಿಕ ಯುಗದಲ್ಲಿ ವೈದ್ಯಕೀಯ ವಿಜ್ಞಾನದ ಸಂಶೋಧನೆ ಪ್ರಯೋಗಗಳು ಆಕಾಶಕ್ಕೆ ಮುಟ್ಟಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಸೃಷ್ಟಿಯಾಗುತ್ತವೆ. ಇದೀಗ ಓ2 ಸಿನಿಮಾದಲ್ಲೂ ಇಂಥದ್ದೇ ವೈದ್ಯಕೀಯ ರಂಗದಲ್ಲಿನ ಬೆಳವಣಿಗೆ ಸುತ್ತ ನಡೆಯುವ ಕಥೆಯಾಗಿದೆ.

ಡಾ ಶ್ರದ್ಧಾ ನಾಯಕ್ (ಆಶಿಕಾ ರಂಗನಾಥ್), ಸತ್ತವರನ್ನು ಮರಳಿ ಬದುಕಿಸಬಲ್ಲ ವಿಷಯದಲ್ಲಿ ಸಂಶೋಧನೆ ನಡೆಸುತ್ತ ಇರುತ್ತಾಳೆ. ಆಕೆಗೆ ತನ್ನ ಸಹೋದ್ಯೋಗಿಗಳ ಸಹಾಯ ಸಿಗುತ್ತದೆ. ಹೃದಯಾಘಾತವಾದ ವ್ಯಕ್ತಿಗೆ ಆ ಕ್ಷಣದ ಟ್ರೀಟ್‌ಮೆಂಟ್‌ ತುಂಬ ಮುಖ್ಯ. ಹಾರ್ಟ್‌ ಅಟ್ಯಾಕ್‌ ಆದ ವ್ಯಕ್ತಿಗೆ O2 ಇಂಜೆಕ್ಟ್‌ ಮಾಡಿದರೆ, ಆ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದಾದ ಸಾಧ್ಯತೆ ಇರುತ್ತದೆ. O2 ಸಿನಿಮಾದಲ್ಲಿ ಪ್ರತಿಯೊಂದು ವಿಚಾರವನ್ನು ಬಹಳ ವೈಜ್ಞಾನಿಕವಾಗಿ ಹೇಳುವುದಕ್ಕೆ ಪ್ರಯತ್ನ ಮಾಡಲಾಗಿದೆ. ಈ ರೀತಿ ಸತ್ತ ವ್ಯಕ್ತಿಯನ್ನು ಬದುಕಿಸುವ ಸಂಶೋಧನೆಯಲ್ಲಿ ಡಾ ಶ್ರದ್ಧಾ (ಆಶಿಕಾ) ಟೀಮ್ ಯಶಸ್ವಿಯಾಗುತ್ತದೆಯೇ? ಇಲ್ಲವೇ ಎಂಬುದೇ ಕಥೆ. ಡಾ. ಶ್ರದ್ಧಾ ತಮ್ಮ ಆವಿಷ್ಕಾರದಲ್ಲಿ ಯಶಸ್ಸು ಗಳಿಸುತ್ತಾರೆಯೋ ಇಲ್ಲವೇ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಡಾಕ್ಟರ್‌ ದೇವ್‌ ಆಗಿ ಪ್ರವೀಣ್‌ ತೇಜ್‌ ಹಾಗೂ ಡಾಕ್ಟರ್‌ ಸೃಷ್ಟಿಯಾಗಿ ಸಿರಿ ರವಿಕುಮಾರ್‌ ಈ ತಂಡ ಸೇರಿಕೊಳ್ಳುತ್ತಾರೆ. ಆದರೆ ಅಂದುಕೊಂಡಂತೆ ಸಂಶೋಧನೆ ನಡೆಯುವುದಿಲ್ಲ. ಹತ್ತಾರು ವಿಘ್ನಗಳು. ಸಂಶೋಧನೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದೇ ಚಿತ್ರಕಥೆ. ಡಾ.ಮೃತ್ಯುಂಜಯನಾಗಿ ಪ್ರಕಾಶ್‌ ಬೆಳವಾಡಿ ಈ ಸಂಶೋಧನೆಗೆ ಅಡ್ಡಗಾಲಾಗಿ ನಿಲ್ಲುತ್ತಾರೆ. ಪ್ರಕಾಶ್ ಬೆಳಗಾವಿ ವಿರೋಧದ ನಡುವೆಯೂ ಶ್ರದ್ಧಾ ಪ್ರಯೋಗಕ್ಕೆ ಮುಂದಾಗುತ್ತಾರೆ.

ಇದರ ಮಧ್ಯೆ ಶ್ರದ್ಧಾ ವೈದ್ಯೆಯಾಗಿದ್ದರೂ ರೋಗಿಯ ಸಾವಿನ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಲು ಭಯ ಪಡುತ್ತಿರುತ್ತಾಳೆ, ಬಾಲ್ಯದಲ್ಲಿ ತನ್ನ ತಂದೆಯ ಅಕಾಲಿಕ ಮರಣದಿಂದಾಗಿ ಖಿನ್ನತೆಗೆ ಜಾರಿದ ಆಕೆ ಡಿಪ್ರೆಶನ್ ಗಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾಳೆ. ಇದರ ಜೊತೆಗೆ ರೇಡಿಯೋ ಜಾಕಿ ಓಶೋ (ರಾಘವ್ ನಾಯಕ್) ಜೊತೆ ಪ್ರೇಮಾಂಕರುವಾಗುತ್ತದೆ. ಓಶೋ ಒಬ್ಬ ಮಹತ್ವಾಕಾಂಕ್ಷಿ ಸಂಗೀತಗಾರನಾಗಿದ್ದು, ಬರ್ಕ್ಲಿ ಮ್ಯೂಸಿಕ್ ಸ್ಟುಡಿಯೊಗೆ ಪ್ರವೇಶಿಸುವ ಕನಸು ಕಾಣುತ್ತಾನೆ. ಸ್ನೇಹದಿಂದ ಪ್ರಾರಂಭವಾಗುವ ಸಂಬಂಧ ಶೀಘ್ರವೇ ಪ್ರೀತಿಯಾಗಿ ಬದಲಾಗುತ್ತದೆ, ಕೆಲವೇ ವಾರಗಳಲ್ಲಿ ಓಶೋ ಅವಳಿಗೆ ಪೂರ್ವಜರ ರಿಂಗ್ ನೀಡುವ ಮೂಲಕ ವಿವಾಹ ಪ್ರಸ್ತಾಪಿಸುತ್ತಾನೆ. ಆದರೆ, ವೈದ್ಯ ವೃತ್ತಿಗೆ ಬದ್ಧರಾಗಿರುವ ಶ್ರದ್ಧಾ ವಿವಾಹವಾಗಲು ಹಿಂದೇಟು ಹಾಕುತ್ತಾರೆ.

ಸತ್ತ ವ್ಯಕ್ತಿಯನ್ನು ಬದುಕಿಸಬಹುದೇ? ಇಂಥದ್ದೊಂದು ಎಳೆಯ ನಡುವೆ ಸಾಗುವ ಈ ಸಿನಿಮಾದಲ್ಲಿ, ವೈದ್ಯಕೀಯ ಕ್ಷೇತ್ರದ ರೋಚಕ ಸಂಗತಿಗಳನ್ನೂ ನೋಡುಗರ ಎದೆಗಿಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್. O2 ಭಾವನಾತ್ಮಕ ಅಂಶಗಳನ್ನು ಹೊಂದಿದೆ. ಏಕೆಂದರೆ ಇದು ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಗಾಗಿ ಸ್ವತಃ ಪುನೀತ್ ಅವರೇ ಅನುಮೋದಿಸಿದ ಕೊನೆಯ ಸ್ಕ್ರಿಪ್ಟ್ ಆಗಿದೆ. ವೈದ್ಯಕೀಯ ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಕನ್ನಡ ಚಿತ್ರರಂಗದ ವಿಶಿಷ್ಟ ಪ್ರಕಾರದ ಅಡಿಯಲ್ಲಿ ವರ್ಗೀಕರಿಸಬಹುದಾದ ಸಿನಿಮಾವಾಗಿದೆ.

ಚಿತ್ರದ ಸನ್ನಿವೇಶಗಳಲ್ಲಿ ಕುತೂಹಲ, ಒತ್ತಡವಿಲ್ಲ. ಬಹಳ ಸರಾಗವಾಗಿ ಕಥೆ ನಡೆಸಿಕೊಂಡು ಹೋಗುವಂತೆ ಅನಿಸುತ್ತದೆ. ನಟಿ ಆಶಿಕಾ ರಂಗನಾಥ್ ಅವರು ಈವರೆಗೂ ಮಾಡಿರುವ ಪಾತ್ರಗಳಿಗಿಂತ ಭಿನ್ನವಾದ ಪಾತ್ರವೊಂದು ಈ ಸಿನಿಮಾದಲ್ಲಿ ಸಿಕ್ಕಿದೆ. ಅದನ್ನವರು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ವೈದ್ಯೆಯಾಗಿ ಮತ್ತು ಪ್ರೇಮಿಯಾಗಿ ಆಶಿಕಾ ಮನಮುಟ್ಟುವ ಅಭಿನಯ ನೀಡಿದ್ದಾರೆ. ಪ್ರವೀಣ್ ತೇಜ್ ಅವರಿಗೆ ಇಲ್ಲಿ ಎರಡು ಶೇಡ್‌ನ ಪಾತ್ರವಿದೆ. ಕೆಲವು ನ್ಯೂನ್ಯತೆ ಕೊರತೆಗಳನ್ನು ಹೊರತು ಪಡಿಸಿದರೇ ಸಿನಿಮಾ ಮನ ಮುಟ್ಟುವಂತಿದೆ.

O2 ಸಿನಿಮಾ ಸ್ಟಿಲ್
'ನೈಟ್ ಕರ್ಫ್ಯೂ' ಸಿನಿಮಾ ವಿಮರ್ಶೆ: ಕೊರೋನಾ ಸಾಂಕ್ರಾಮಿಕದ ಕರಾಳತೆ; ಹೊಸ ಬಾಟಲಿಯಲ್ಲಿ ಹಳೆಯ ವೈನ್; ಅನಾವಶ್ಯಕ ಫೈಟಿಂಗ್ ಸೀನ್!

ಸೀಮಿತ ಸ್ಕ್ರೀನ್ ಟೈಮ್ ಹೊರತಾಗಿಯೂ ಸಿರಿ ರವಿಕುಮಾರ್ ಮಿಂಚಿ ಮಾಯವಾಗುತ್ತಾರೆ. ಪುನೀತ್ ಬಿಎ ಹಾಸ್ಯ ನಕ್ಕು ನಗಿಸುತ್ತದೆ. ಪ್ರಕಾಶ್ ಬೆಳವಾಡಿ ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಪೋಷಕ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ.

ಸಂಗೀತ ನಿರ್ದೇಶಕ ವಿವಾನ್ ರಾಧಾಕೃಷ್ಣ ಮತ್ತು ಗಾಯಕ ಸಂಜಿತ್ ಹೆಗ್ಡೆ ಹಾಡುಗಳಿಗೆ ಭಾವಪೂರ್ಣ ಧ್ವನಿ ನೀಡಿದ್ದಾರೆ. ಗೀತರಚನೆಕಾರ ಜಯಂತ್ ಕಾಯ್ಕಿಣಿ ಮತ್ತು ಸಂಗೀತ ನಿರ್ದೇಶಕರು ವಿವಿಧ ಹಾಡುಗಳಿಗೆ ಕೆಲವು ಅರ್ಥಪೂರ್ಣ ಸಾಲುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಎಸ್ ಅವರ ಛಾಯಾಗ್ರಹಣ ಮನ ಸೆಳೆಯುತ್ತದೆ, ಒಟ್ಟಾರೆ O2 ಕುಟುಂಬದ ಜೊತೆ ಸೇರಿ ಒಮ್ಮೆ ನೋಡಬಹುದಾದ ಸಿನಿಮಾವಾಗಿದೆ.

ಸಿನಿಮಾ: O2

ನಿರ್ದೇಶನ: ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್

ತಾರಾಗಣ: ಆಶಿಕಾ ರಂಗನಾಥ್, ರಾಘವ್ ನಾಯಕ್, ಪ್ರವೀಣ್ ತೇಜ್, ಸಿರಿ ರವಿ ಕುಮಾರ್, ಪುನೀತ್, ಪ್ರಕಾಶ್ ಬೆಳವಾಡಿ

Related Stories

No stories found.

Advertisement

X
Kannada Prabha
www.kannadaprabha.com