ರಂಗನಾಯಕ ಸಿನಿಮಾ ಸ್ಟಿಲ್
ರಂಗನಾಯಕ ಸಿನಿಮಾ ಸ್ಟಿಲ್

'ರಂಗನಾಯಕ' ಸಿನಿಮಾ ವಿಮರ್ಶೆ: ಏನೋ ಮಾಡಲು ಹೋಗಿ...! ವಿಪರೀತ ಮಾತು- ಅತಿರೇಕದ ಹಾಸ್ಯ; ನೀರಸ ಸಂಭಾಷಣೆ- ಬೋರಿಂಗ್ ನಿರೂಪಣೆ

ಮಠ ಹಾಗೂ ಎದ್ದೇಳು ಮಂಜುನಾಥದಂತಹ ಕ್ಲಾಸಿಕ್ ಸಿನಿಮಾಗಳನ್ನು ಪ್ರೇಕ್ಷಕರು ಇನ್ನಿಲ್ಲದಂತೆ ಪ್ರೀತಿಸಿದ್ದರು. 15 ವರ್ಷಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷನ್ ಸಿನಿಮಾ ಬಗ್ಗೆ ಪ್ರೇಕ್ಷಕರು ಕೊಂಚ ಹೆಚ್ಚಾಗಿಯೇ ನಿರೀಕ್ಷೆ ಇಟ್ಟುಕೊಂಡಿದ್ದರು.
Published on
Rating(2.5 / 5)

ಮಠ ಹಾಗೂ ಎದ್ದೇಳು ಮಂಜುನಾಥ ದಂತಹ ಕ್ಲಾಸಿಕ್ ಸಿನಿಮಾಗಳನ್ನು ಪ್ರೇಕ್ಷಕರು ಇನ್ನಿಲ್ಲದಂತೆ ಪ್ರೀತಿಸಿದ್ದರು. 15 ವರ್ಷಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷನ್ ಸಿನಿಮಾ ಬಗ್ಗೆ ಪ್ರೇಕ್ಷಕರು ಕೊಂಚ ಹೆಚ್ಚಾಗಿಯೇ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರಂಗನಾಯರ ಪ್ರೇಕ್ಷಕರ ನಿರೀಕ್ಷೆಗೆ ತಣ್ಣೀರೆರಚಿದ್ದಾರೆ. ಹಿಂದಿನ ಸಿನಿಮಾಗಳಂತೆ ರಂಗನಾಯಕ ಕೂಡ ಮೋಡಿ ಮಾಡುತ್ತದೆ ಎಂಬ ನಿರೀಕ್ಷೆಯಿತ್ತು, ಆದರೆ ಇಬ್ಬರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಭೂತಕನ್ನಡಿ ಎನ್ನುವ ಸಮ್ಮೋಹಿನಿ ಕಾರ್ಯಕ್ರಮದ ಮೂಲಕ ನಿರ್ದೇಶಕ ಗುರುಪ್ರಸಾದ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಹಿಂದಿನ ಜನ್ಮದ ಬಗ್ಗೆ ತಿಳಿಯುವುದರ ಮೂಲಕ ಸಿನಿಮಾ ಕಥೆ ಆರಂಭವಾಗುತ್ತದೆ. ಸಂಮೋಹನದಲ್ಲಿ ಮುಳುಗಿದ ನಿರ್ದೇಶಕ ಗುರುಪ್ರಸಾದ್ ಅವರು 1911 ರಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟಾಗ ಒಂದು ಶತಮಾನದ ಹಿಂದೆ ನಡೆದ ಘಟನೆಗಳನ್ನು ಅನಾವರಣಗೊಳಿಸುತ್ತಾ ತಮ್ಮ ಹಿಂದಿನ ಜೀವನದಲ್ಲಿ ಪ್ರಯಾಣಿಸುತ್ತಾರೆ.

ಆ ಸನ್ನಿವೇಶದಲ್ಲಿ ರಂಗನಾಯಕನಾಗಿ ಜಗ್ಗೇಶ್‌ ಆಗಮನವಾಗುತ್ತದೆ. ನಾಯಕನ ಪ್ರೇಯಸಿಯಾಗಿ ರಚಿತಾ ಮಹಾಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಗುರುಪ್ರಸಾದ್‌ ಕಥೆ ನಡೆಯುತ್ತಿದ್ದರೆ ಮತ್ತೊಂದೆಡೆ ರಂಗನಾಯಕನ ಕಥೆ ತೆರೆದುಕೊಳ್ಳುತ್ತದೆ. ಈ ಚಿತ್ರವು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುತ್ತದೆ. ಚಿತ್ರದ ಮೊದಲಾರ್ಧ ಕನ್ನಡದ ಮೊದಲ ಚಿತ್ರ ಮಾಡಿದ ವ್ಯಕ್ತಿಯ ಕಥೆಯ ಹಿಂದೆ ಸಾಗುತ್ತದೆ. ಇಲ್ಲಿ ನಿರ್ದೇಶಕ ಗುರುಪ್ರಸಾದ್‌ ಹೆಚ್ಚು ಆವರಿಸಿಕೊಂಡಿದ್ದಾರೆ, ಜಗ್ಗೇಶ್ ಪಾತ್ರ ಕಡಿಮೆಯಿದೆ.

ಸಿನಿಮಾದಲ್ಲಿ ನಿರ್ದೇಶಕರು ಕೇವಲ ಸಂಭಾಷಣೆ ಮೂಲಕ ನಿರೂಪಣೆ ಮಾಡಲು ಪ್ರಯತ್ನಿಸಿದ್ದಾರೆ, ವಿಪರೀತವಾಗಿ ಮಾತು ಮಾತು ಮಾತು...!ಕಥಾ ಹಂದರ ನಿರೂಪಣೆ ಮಾಡುವುದರಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ. ಕೆಲವೊಮ್ಮೆ, ಗುರುಪ್ರಸಾದ್ ಕೆಲವು ಕನ್ನಡ ನಾಯಕಿಯರ ಹೆಸರನ್ನು ಸೇರಿಸುತ್ತಾರೆ, ಅದು ಅನಗತ್ಯ ಮತ್ತು ಅಪ್ರಸ್ತುತ ಎನಿಸುತ್ತದೆ.

ರಂಗನಾಯಕ ಸಿನಿಮಾ ಸ್ಟಿಲ್
ರಂಗಭೂಮಿಯ ಭದ್ರ ಬುನಾದಿ, ಸಿನಿಮಾ ಬಗ್ಗೆ ನನ್ನ ಒಲವು, 'ಬ್ಲಿಂಕ್' ಚಿತ್ರ ನಿರ್ಮಾಣಕ್ಕೆ ಪ್ರೇರಣೆ: ಶ್ರೀನಿಧಿ

ಜಗ್ಗೇಶ್ ಅವರ ಅಭಿನಯದಿಂದ ಚಿತ್ರವನ್ನು ಉಳಿಸುವ ಪ್ರಯತ್ನಕ್ಕೆ ತಮ್ಮ ಹಳೇಯ ಮ್ಯಾನರಿಸಂ ಮತ್ತು ಸಂಭಾಷಣೆ ಅಡ್ಡಿಯಾಗಿದೆ. ಬಲವಾದ ಕಥಾಹಂದರವಿಲ್ಲದೆ, ಚಿತ್ರದಲ್ಲಿ ಸಾಲಿಡ್ ಕಥಾಹಂದರವಿಲ್ಲ. ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟ ಪಡಲು ಯಾವುದೇ ಕಾರಣಗಳಿಲ್ಲ. ಸಿನಿಮಾದ ಮೊದಲಾರ್ಧದಲ್ಲಿ ಜಗ್ಗೇಶ್‌ ಪಾತ್ರವು ಒಂದೆರಡು ಹಾಡುಗಳು ಮತ್ತು ದೃಶ್ಯಗಳಿಗೆ ಸೀಮಿತವಾಗಿದೆ, ನವರಸ ನಾಯಕ ಜಗ್ಗೇಶ್ ಅಭಿನಯ ಇಡೀ ಚಿತ್ರದ ಹೈಲೆಟ್. ಎಂದಿನ ತಮ್ಮ ಹಾವಭಾವದಿಂದಲೇ ಜಗ್ಗಣ್ಣ ಪ್ರೇಕ್ಷಕರನ್ನು ಹೆಚ್ಚು ರಂಜಿಸುತ್ತಾರೆ. ಅಭಿಮಾನಿಗಳಿಗಂತೂ ಅವರ ಅಭಿನಯ ಬಹಳ ಇಷ್ಟವಾಗುತ್ತದೆ.

ರಚಿತಾ ಮಹಾಲಕ್ಷ್ಮಿ ಪಾತ್ರವು ಕೇವಲ ರೋಮ್ಯಾಂಟಿಕ್ ಡ್ಯುಯೆಟ್‌ಗಳ ಸುತ್ತ ಸುತ್ತುತ್ತದೆ, ಸಿಕ್ಕ ಕೆಲವೇ ದೃಶ್ಯಗಳಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಂದೆಡೆ, ಪೋಷಕ ನಟರಾದ ಚೈತ್ರ ಕೋಟೂರ್, ಶತಮಾರ್ಷನ್ ಅವಿನಾಶ್, ಶೋಭಾ ರಾಘವೇಂದ್ರ ತಮ್ಮ ತಮ್ಮ ಪಾತ್ರಗಳಲ್ಲಿ ನಕ್ಕು ನಗಿಸುತ್ತಾರೆ. ಯೋಗರಾಜ್ ಭಟ್ ಮನಶಾಸ್ತ್ರಜ್ಞನ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ ಅನೂಪ್ ಸಿಳೀನ್ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಗಾಳಿ -ತಂಗಾಳಿ ಹಾಗೂ ಎನ್ನ ಮನದರಸಿ ಯಂತಹ ರೆಟ್ರೋ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ.

ರಂಗನಾಯಕ ಸಿನಿಮಾ ಸ್ಟಿಲ್
'ಪುರುಷೋತ್ತಮನ ಪ್ರಸಂಗ' ಚಿತ್ರ ವಿಮರ್ಶೆ: ಮಾಯಾನಗರಿ ದುಬೈ ಮೋಹದಲ್ಲಿ ಬಿದ್ದ ಮಧ್ಯಮ ವರ್ಗದ ಯುವಕನ ಕಥೆ-ವ್ಯಥೆ!

ಮೊದಲ ಭಾಗದಲ್ಲಿ ಗುರು ಪ್ರಸಾದ್ ಲೀಡ್ ಆಗಿ ಕಾಣಿಸಿಕೊಂಡು ಜಗ್ಗೇಶ್ ಅವರದ್ದು ಗೆಸ್ಟ್ ಅಪಿಯರೆನ್ಸ್ ಎನಿಸಿಬಿಡುತ್ತದೆ. ಇಡೀ ಸಿನಿಮಾ ತುಂಬ ಗುರುಪ್ರಸಾದ್ ಕಾಣಿಸಿಕೊಳ್ಳುತ್ತಾರೆ ಮತ್ತು ಅವರಿಲ್ಲಿ ನಿರ್ದೇಶಕ ಗುರುಪ್ರಸಾದ್ ಆಗಿಯೇ ಎಂಟ್ರಿ ಕೊಡುತ್ತಾರೆ. ಹಾಗಾಗಿ, ಮೊದಲರ್ಧದಲ್ಲಿ ಗುರುವಿನದ್ದೇ ಹೆಚ್ಚು ದರ್ಶನ!

ಗುರುಪ್ರಸಾದ್ ಎಂದಿನ ತಮ್ಮ ಬರವಣಿಗೆಯಿಂದ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಕೆಲವೊಮ್ಮೆ ಅತಿರೇಕ ಎನಿಸುತ್ತದೆ. ಪ್ರತಿಭಾನ್ವಿತ ನಿರ್ದೇಶಕರು, ಅದ್ಭುತ ನಟ ಸೇರಿ ಒಂದು ಸದಭಿರುಚಿಯ ಸಿನಿಮಾ ಕೊಡುವಲ್ಲಿ ಸೋತಿದ್ದಾರೆ.

ಸಿನಿಮಾ: ರಂಗನಾಯಕ

ನಿರ್ದೇಶನ: ಗುರು ಪ್ರಸಾದ್

ಕಲಾವಿದರು: ಜಗ್ಗೇಶ್, ರಚಿತಾ ಮಹಾಲಕ್ಷ್ಮಿ, ಗುರು ಪ್ರಸಾದ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com