ಜನ ಸೋಲುತ್ತಾರೆ, ರಾಜಕಾರಣಿ ಗೆಲ್ಲುತ್ತಾನೆ

ಸಂಸದರ ಅಮಾನತು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಫೋಟೊಗಳಲ್ಲಿ ಸೋನಿಯಾ ಗಾಂಧಿ ಫೋಕಸ್ ಆಗಿದ್ದು, ಕಾಂಗ್ರೆಸ್‍ನಲ್ಲಿ ಸಂತೋಷ ಮತ್ತು ಆತ್ಮವಿಶ್ವಾಶವನ್ನು ಆಕೆ ಹೊರಹಾಕುತ್ತಿರುವಂತಿತ್ತು.
ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ
ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ

ಕಾಂಗ್ರೆಸ್ ಸಂಸದರ ಅಮಾನತು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಫೋಟೊಗಳಲ್ಲಿ ಸೋನಿಯಾ ಗಾಂಧಿ_ಫೋಕಸ್ ಆಗಿದ್ದು, ಕಾಂಗ್ರೆಸ್‍ನಲ್ಲಿ ದೋಷಾತೀತವಾದ ಸಂತೋಷ ಮತ್ತು ಆತ್ಮವಿಶ್ವಾಶವನ್ನು ಆಕೆ ಹೊರಹಾಕುತ್ತಿರುವಂತಿತ್ತು. ತಾನು ಸೂರ್ಯನತ್ತ ಬೆರಳು ತೋರಿಸಿ ಅದು `ಚಂದ್ರ' ಎಂದರೆ ಇಡೀ ಪಕ್ಷ ಕೋರಸ್‍ನಲ್ಲಿ `ಅದು ಚಂದ್ರ' ಎಂದೇ ಧ್ವನಿಗೂಡಿಸುತ್ತದೆ ಎಂಬುದೂ ಸೋನಿಯಾಗೆ ಗೊತು

ದೇಶದ ರಾಜಕಾರಣದಲ್ಲಿನ ಸದ್ಯ ಹಿಂದೆಂದೂ ಕಾಣದಂತಹ, ಸೂಕ್ಷ್ಮ  ಮತ್ತು ಊಹಿಸಿಕೊಳ್ಳದಿದ್ದಂತಹ ಬೆಳವಣಿಗೆಗಳಾಗುತ್ತಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಸಾರ್ವಜನಿಕ ಪ್ರತಿಭಟನೆಗಳಿಗೆ ಇಳಿದಿದ್ದು ಅತ್ಯುತ್ಸಾಹದಿಂದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮುಷ್ಠಿ ಬಿಗಿ ಮಾಡಿದ ಆಕೆಯ ಕೈ ಗಾಳಿಯನ್ನು ಸೀಳುವಂತಿದೆ. ಸೋನಿಯಾ ಗಾಂಧಿ„ ಮೇಲ್ಮಟ್ಟದಲ್ಲಿ ಈ ಪ್ರತಿಭಟನೆಗಳನ್ನು ಆರಂಭಿಸಿಲ್ಲ. ಬದಲಿಗೆ ಲಾಠಿಚಾರ್ಜ್‍ಗಳು ನಡೆದಂತಹ ಯುವ ಕಾಂಗ್ರೆಸ್‍ನ ಕಾರ್ಯಕರ್ತರೊಂದಿಗೆ ಬೀದಿಗಿಳಿದಿದ್ದಾರೆ.

ಕೆಲವೇ ದಿನಗಳ ಹಿಂದೆ ಇಂತಹದ್ದೇ ಪ್ರತಿಭಟನೆಗಳು ಸಂಸತ್ತಿನ ಮುಂದೆಯೂ ನಡೆದವು. ಆಡಳಿತಾರೂಢ ಬಿಜೆಪಿ ಸಹ ಪ್ರತಿಭಟನೆ ಮಾಡಿತ್ತು. ಭ್ರಷ್ಟಾಚಾರ ಆರೋಪ ಹೊತ್ತಿರುವ ಬಿಜೆಪಿ ಸಚಿವರು ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ಸಂಸದರ ಬೇಡಿಕೆಗೆ ಪ್ರತಿಯಾಗಿ ಬಿಜೆಪಿ ಸಂಸದರು ಭ್ರಷ್ಟಾಚಾರ ಆರೋಪ ಹೊತ್ತ ಕಾಂಗ್ರೆಸ್ ನಾಯಕರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸಿದರು.

ಈ ಸನ್ನಿವೇಶದಲ್ಲಿರುವ ವ್ಯಂಗ್ಯ ಗಮನಕ್ಕೆ ಬಾರದೆ ಇರದು. ಮಹಾತ್ಮಗಾಂಧಿ ಸಣ್ಣ ಮೊತ್ತದ ಹಣ ನಿರ್ವಹಣೆಯಲ್ಲಿ ಲೋಪ ಎಸಗಿದ್ದರಿಂದ ತನಗೆ ನಿಕಟವಾಗಿದ್ದ ಜೆ.ಬಿ.ಕೃಪಲಾನಿಯಂತಹವರನ್ನೇ ಶಿಕ್ಷೆಗೆ ಗುರಿಪಡಿಸಿದ್ದರು. ಅವರ ಪ್ರತಿಮೆ ಎದುರು ಈ ಎರಡೂ ಗುಂಪುಗಳು ಪ್ರದರ್ಶನ ಮಾಡಿದವು. ಆಡಳಿತ ಪಕ್ಷದ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರೆ, ಪ್ರತಿ ಪಕ್ಷಗಳ ಸದಸ್ಯರು ಸಂಸತ್ತಿನ ಒಳಗೆ ಪ್ರತಿಭಟನೆ ನಡೆಸಿದ್ದು ಮತ್ತೊಂದು ವ್ಯಂಗ್ಯ. ಒಂದು ವೇಳೆ ಈ ದೇಶದ ಸರ್ವಶಕ್ತನೇ ಸಂಸತ್ತನ್ನು ನಡೆಸುವಂತಿದ್ದರೆ ತಮ್ಮ ಬೇಡಿಕೆಗಳನ್ನು ಯಾರ ಮುಂದಿಡುತ್ತಿದ್ದೆವು ಎಂದು ಪ್ರತಿಪಕ್ಷದ ನಾಯಕರೊಬ್ಬರು ಅಣಕ ಮಾಡಿದ್ದಾರೆ. ದೇಶದ ಏಳು ದಶಕಗಳ ಪ್ರಜಾಪ್ರಭುತ್ವ ಅಧಿಕಾರಸ್ಥರು ಮತ್ತು ಇತರರು ಎಂಬ ಭಾವನೆ ಮೂಡಿಸಿದೆ.
ಇಲ್ಲಿ ಪಾತ್ರಗಳು ಅದಲು ಬದಲಾಗಿವೆ ಅಷ್ಟೆ. ವರ್ಷದ ಹಿಂದೆ ಅಧಿಕಾರದಲ್ಲಿದ್ದವರು ಈಗ ಅಧಿಕಾರದಲ್ಲಿರುವವರ ವಿರುದ್ಧದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕಾಂಗ್ರೆಸ್‍ನ ಪ್ರತಿಭಟನೆ ಸಂದರ್ಭದಲ್ಲಿ ತೆಗೆದಿರುವ ಫೋಟೋಗಳು ಭವಿಷ್ಯದ ದೃಷ್ಟಿಯಿಂದ ಐತಿಹಾಸಿಕ ಮಹತ್ವ ಹೊಂದಿವೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿನ ಆಕ್ರೋಶ, ಅವರ ಮುಖದಲ್ಲಿ ಕಾಣುತ್ತಿದ್ದ ಭಾವನೆಗಳು ಇಂದಿನ ಕಾಂಗ್ರೆಸ್ಸಿಗರಲ್ಲಿ ಕಾಣುತ್ತಿರುವುದಕ್ಕಿಂತಲೂ ಭಿನ್ನವಾಗಿದೆ.

ಈ ಎಲ್ಲ ಫೋಟೋಗಳಲ್ಲಿ ಸೋನಿಯಾ ಗಾಂಧಿ ಪ್ರಮುಖ ಫೋಕಸ್ ಆಗಿದ್ದಾರೆ. ಅವುಗಳಳ್ಲಿ ಕಾಂಗ್ರೆಸ್‍ನಲ್ಲಿ ದೋಷಾತೀತವಾದ ಸಂತೋಷ ಮತ್ತು ಆತ್ಮವಿಶ್ವಾಶವನ್ನು ಆಕೆ ಹೊರಹಾಕುತ್ತಿರುವಂತಿತ್ತು. ಪಕ್ಷದ ಸದ್ಯದ ಸ್ಥಿತಿಯನ್ನು ಚೆನ್ನಾಗಿಯೇ ಬಲ್ಲವರು ಸೋನಿಯಾ. ಮತ್ತೆ ಅದರ ಮುಂದಾಳುವಾಗಿ ನಿಲ್ಲಬಲ್ಲವರು. ಆಕೆಯ ಮಾತನ್ನು ಪ್ರತಿಮಾತಿಲ್ಲದೇ ಒಪ್ಪಿಕೊಳ್ಳುವುದಕ್ಕೆ ಪಕ್ಷದ ಪ್ರತಿಯೋಬ್ಬರು ಸಿದ್ಧರಿದ್ದಾರೆ. ಸೋನಿಯಾ ಸುಡು
ಮಧ್ಯಾಹ್ನದ ಸೂರ್ಯನತ್ತ ಬೆರಳು ತೋರಿಸಿ ಅದು `ಚಂದ್ರ' ಎಂದರೆ ಇಡೀ ಪಕ್ಷ ಕೋರಸ್‍ನಲ್ಲಿ `ಅದು ಚಂದ್ರ', `ಅದು ಚಂದ್ರ' ಎಂದು ಧ್ವನಿಗೂಡಿಸುತ್ತದೆ. ಇದು ಆಕೆಗೆ ಗೊತ್ತು.

ಕಾಂಗ್ರೆಸ್ ಪಕ್ಷದಲ್ಲಿ ಆತ್ಮವಿಶ್ವಾಸದ ಮತ್ತೊಂದು ರೂಪಕದಂತೆ ಕಾಣುತ್ತಿರುವವರು ಉಪಾಧ್ಯಕ್ಷ ರಾಹುಲ್ ಗಾಂಧಿ. ಆದರೆ ಅವರು ಪ್ರತಿಭಟನೆಯಲ್ಲಿ ಘೋಷಣೆ ಕೂಗಲಿಲ್ಲ ಮತ್ತು ಕೈ ಮೇಲೆತ್ತಲಿಲ್ಲ. ಯಾರಿಗೂ ತನ್ನ ನಿಷ್ಠೆಯನ್ನು ತೋರಿಸಬೇಕಾದ ಅಗತ್ಯವಿಲ್ಲ ಎಂದು ಆತನಿಗೆ ಗೊತ್ತು. ಆದರೆ ಪಕ್ಷದಲ್ಲಿರುವ ಅನೇಕ ಹಿರಿಯ ನಾಯಕರಿಗೆ ಅದರ ಅಗತ್ಯವಿದೆ. ಉದಾಹರಣೆಗೆ ಹೇಳುವುದಾದರೆ ಆನಂದ್‍ಶರ್ಮ ಅಂತವರಿಗೆ ನಿಷ್ಠೆ ತೋರಿಸಿಕೊಳ್ಳಬೇಕು. ಸಂಸತ್ ಎದುರಿನ ಪ್ರತಿಭಟನೆಯಲ್ಲಿ ಸೆರೆ ಹಿಡಿದ ಕೆಲವು ಫೋಟೋಗಳಲ್ಲಿ ಅವರು ಹಿಂದೆ ಎಲ್ಲೋ ಇದ್ದಾರೆ. ಪ್ರತಿಭಟನೆಗೆ ಸೋನಿಯಾ ಗಾಂಧಿ ಬಂದ ತಕ್ಷಣ, ಕೂಡಲೇ ಅವರ ಹಿಂದೆ ಬಂದು ನಿಲ್ಲುತ್ತಾರೆ.

 ಎಲ್ಲರ ಗಮನ ಸೆಳೆಯಲು ತನ್ನಿಂತಾನೆ ತಳ್ಳಿಕೊಂಡು ಮುಂದೆ ಬರುತ್ತಾರೆ. ಇದೇ ಅಲ್ಲವೆ ರಾಜಕಾರಣ. ಇವರಿಗೆ ಹೋಲಿಸಿದರೆ ಎ.ಕೆ.ಆಂಟೋನಿ ಭಿನ್ನ. ಸೋನಿಯಾಗಾಂಧಿ ಅವರೇ ಆಂಟೋನಿ ಕೈಹಿಡಿದು ತಮ್ಮ ಬಳಿಗೆ ಕರೆದುಕೊಳ್ಳುವುದನ್ನು ಫೋಟೋಗಳಲ್ಲಿ ಕಾಣಬಹುದು. ಆಂಟೋನಿ ಹಿಂದೆ ನಿಂತಿದ್ದವರು ಗುಲಾಂ ನಬಿ ಆಜಾದ್. ಅವರು ತಮ್ಮೆರಡು ಕೈಗಳನ್ನು ಆಂಟೋನಿ ಭುಜದ ಮೇಲಿಟ್ಟುಕೊಂಡಿದ್ದರು. ಇವರಿಬ್ಬರೂ ಎತ್ತರ ಮತ್ತು ಕುಳ್ಳಗಿರುವುದರಿಂದ ಫೋಟೋಗ್ರಾಫರ್‍ಗೆ ನಾಯಕರನ್ನು ಅವರ ಶ್ರೇಣಿಗೆ ಅನುಗುಣವಾಗಿ ಸೆರೆಹಿಡಿಯಬೇಕೆಂಬ ಸಮಸ್ಯೆ ಎದುರಾಗಿಲ್ಲ. ಏಕೆಂದರೆ ಆಂಟೋನಿ ತಲೆ ಆಜಾದ್‍ರ ಗದ್ದಕ್ಕಿಂತ ಕೆಳಗಿದೆ. ಇದು ದೆಹಲಿಯಲ್ಲಿ ಪ್ರಚಲಿತವಿರುವ ಒಂದು ಮಾತನ್ನು ನೆನಪಿಸುತ್ತದೆ. ಅದೇನೆಂದರೆ ಉತ್ತರ ಯಾವಾಗಲೂ ತಲೆ ಮತ್ತು ಭುಜವಾಗಿರುತ್ತದೆ. ಅದು ದಕ್ಷಿಣದ ಮೇಲ್ಭಾಗದಲ್ಲೇ ಇರುತ್ತದೆ. ಅದನ್ನೇ ಹೇಳುವಂತೆ ಇವರಿಬ್ಬರ ಫೋಟೋ ಇದೆ. ಈ ಫೋಟೋಗಳಲ್ಲಿ ಗಮನ ಸೆಳೆದ ಪ್ರಭಾವಿ ವ್ಯಕ್ತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಎಂದಿನಂತೆ ಸದಾ ನಿಶ್ಚಲವಾಗಿರುವ, ಯಾರನ್ನೂ ಆಕರ್ಷಿಸದ ಮತ್ತು ಬದಲಾವಣೆಗಳಿಲ್ಲದ ನಿಲುವು. ಅವರು ಸಂಸತ್ ಭವನವಿದ್ದಂತೆ. ಭಯೋತ್ಪಾದಕ ದಾಳಿ ನಡೆಯಲಿ, ಇಡೀ ಅಧಿವೇಶನ ನಾಶವಾಗಲಿ, ಸಂಸತ್ ಭವನದ ಬೃಹತ್ ಕಂಬಗಳು ಒಂದಿಷ್ಟು ಮಿಸುಕಾಡದೆ, ಸದ್ದಿಲ್ಲದೆ ನಿಂತಿರುವಂತೆ ಮನಮೋಹನ್ ಸಿಂಗ್ ಕೂಡ. ನಿಜ ಹೇಳಬೇಕೆಂದರೆ ಸಿಂಗ್ ಅವರಿಗೆ ಹೋಲಿಸಿದರೆ, ಎರಡೂ ಪ್ರತಿಭಟನೆಗಳ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಮುಖ ಹೆಚ್ಚು ಅಭಿವ್ಯಕ್ತಿಸುವಂತೆ ಕಾಣುತ್ತಿತ್ತು. ಇದು ಮಹಾತ್ಮನಿಗೆ ಒಂದಿಷ್ಟು ವಿರಾಮ ನೀಡುವ ಕಾಲವೇ? ಏಕೆಂದರೆ ಸಂಸತ್ತಿನ ಮುಂದೆ ಅವರ ಪ್ರತಿಮೆ ಪ್ರತಿಷ್ಠಾಪಿಸಿರುವುದು ಸಂಸದರು ಪರಸ್ಪರ ಕೂಗಾಡುತ್ತಾ ಅವರ ಶಾಂತಿಗೆ ಭಂಗ ತರಲಿ ಎಂದಲ್ಲ. ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದು ಸಂಸತ್ತಿನಲ್ಲಿ ಸೃಷ್ಟಿಸುತ್ತಿರುವ ಗದ್ದಲ ಸಾಲದು ಎಂದಾದಲ್ಲಿ ಕಾರ್ ಪಾರ್ಕಿಂಗ್ ಸ್ಥಳ ಆಯ್ಕೆ ಮಾಡಿಕೊಳ್ಳಲಿ. ಅದೂ ಬೇಡದಿದ್ದಲ್ಲಿ ಹೆಚ್ಚು ಸೂಕ್ತವಾದ ಸಂಸತ್ತಿನ ಪ್ರವೇಶ ದ್ವಾರವನ್ನು ಆಯ್ಕೆ ಮಾಡಿಕೊಳ್ಳಲಿ.

ಲಂಡನ್‍ನ ಪಾರ್ಲಿಮೆಂಟ್ ಸ್ಕ್ವೇ ರ್‍ನಲ್ಲಿ ಗಾಂಧಿ ಸೇರಿದಂತೆ ಹಲವು ನಾಯಕರ ಪ್ರತಿಮೆಗಳಿದ್ದು ಇಲ್ಲಿ ಪ್ರತಿಭಟನೆಗಳು ಕಾನೂನುಬಾಹಿರ. ವಾಸ್ತವ ಎಂದರೆ ಲಂಡನ್‍ನಲ್ಲಿ ಸಂಚಾರಕ್ಕೆ ಅಡ್ಡಿ ಮಾಡುವಂತಹ ಪ್ರತಿಭಟನೆಗಳನ್ನು ಬ್ರಿಟೀಷರು ಇಲ್ಲವಾಗಿಸಿದ್ದಾರೆ. ಯಾ ರೇ ಎಂತದೇ ಪ್ರತಿಭಟನೆ ಮಾಡುವುದಕ್ಕೆ ಹೈಡ್ ಪಾರ್ಕ್ ಸ್ಥಳ ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ ನವದೆಹಲಿಯಲ್ಲಿನ ಜಂತರ್‍ಮಂತರ್ ತದ್ವಿರುದ್ಧವಾಗಿದೆ. ಸಂಸದರು ಸಂಸತ್ ಭವನದ ಮುಂದಿನ ಗಾಂಧಿ ಅವರ ಪಾಡಿಗೆ ನೆಮ್ಮದಿಯಾಗಿರಲು ಬಿಟ್ಟು, ಅಲ್ಲಿ ಹೋಗಿ ಪ್ರತಿಭಟನೆಗಳನ್ನು ಯಾಕೆ ಮಾಡಬಾರದು? ಅಣ್ಣಾ ಹಜಾರೆಯಂತವರು, ಮತ್ಯಾರೊ
ಸಾಮಾನ್ಯ ಪ್ರತಿಭಟನೆಗಳನ್ನು ಮಾಡಿದ ಆ ಸ್ಥಳ ತಮ್ಮ ಘನತೆಗೆ ತಕ್ಕುದಾದುದಲ್ಲ ಎಂದು ಅವರು ಭಾವಿಸಿರುವಂತಿದೆ. ಆದರೆ ಅವರು ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ ನಂತರ ಸಂಸತ್ತಿಗೆ ಹಿಂತಿರುಗಿ ಬಡವರು ತೆರಿಗೆಯ ಸಬ್ಸಿಡಿ ಬಿರಿಯಾನಿ ತಿಂದು ತಮ್ಮ ವಿಐಪಿ ದರ್ಜೆಯನ್ನು ಮರಳಿ ಪಡೆಯಬಹುದು. ಇಲ್ಲಿನ ನಾಟಕ ಯಾವಾಗಲೂ ಒಂದೆ. ಸಂಸದರು ಗೆದ್ದು ಜನ ಸೋಲುತ್ತಾರೆ ಇಲ್ಲವೇ ಜನ ಸೋತು ಸಂಸದರು ಗೆಲ್ಲುತ್ತಾರೆ.
- ಟಿ ಜೆ ಎಸ್ ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com