ಅಮೇರಿಕಾ ಜೊತೆಗೆ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದಾಗ ಭಾರತದ ಆರ್ಥಿಕ ವ್ಯವಸ್ಥೆ ಕುಸಿಯದೆ ನಿಂತದ್ದು ವಿಶ್ವದ ಕಣ್ಣಿನಲ್ಲಿ ಭೇಷ್ ಅನ್ನಿಸಿ ಕೊಂಡದ್ದು ಎಲ್ಲರಿಗೂ ತಿಳಿದ ವಿಷಯ ಆದರೆ ಇವತ್ತೇನಾಗಿದೆ? ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಂತ ಸೂಕ್ಷ್ಮವಾಗಿದೆ. ಹಣದುಬ್ಬರ ಹೆಚ್ಚಾಗಿದೆ, ಡಾಲರ್ ಎದುರು ರುಪಾಯಿ ಒಂದೇ ಸಮನೆ ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ಅಮೆರಿಕಾದ ಲೆಹ್ಮನ್ ಬ್ರದರ್ ಕುಸಿಯಲು ಇದ್ದ ಕಾರಣಗಳೇ. ಅಂದರೆ ಅಂದಿನ ಕುಸಿತದಿಂದ ಭಾರತ ಪಾಠ ಕಲಿಯಲಿಲ್ಲ. ಅಲ್ಲಿನ ಮಟ್ಟಿಗೆ ನಿಂಜಾ ಸಾಲವನ್ನ ಜನತೆಗೆ ಕೊಡದಿದ್ದರೂ, ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಸಾಲವನ್ನ ಕೊಡುವಾಗ ಉದಾರತನ ತೋರಿದ್ದು, ಅಂದರೆ ಮೂಲಭೂತವಾಗಿ ಬ್ಯಾಡ್ ಲೆಂಡಿಂಗ್ ಅಥವಾ ಕೆಟ್ಟ, ವಸೂಲಿ ಮಾಡಲಾಗದ ಸಾಲ ನೀಡಿದ್ದು ಭಾರತದ ಇಂದಿನ ದುಸ್ಥಿತಿಗೆ ಕಾರಣವಾಗಿದೆ.