BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)

ಅತೃಪ್ತಿ, ಅಸಮಾಧಾನ, ಬಂಡಾಯದ ಬೆಂಕಿ ಬಿಜೆಪಿಯನ್ನು ಸುಡುತ್ತಾ? ಅಥವಾ ಇದು ಬರೀ ಯಡಿಯೂರಪ್ಪ ಕುಟುಂಬದ ನಾಯಕತ್ವವನ್ನೇ ಕೇಂದ್ರೀಕರಿಸಿದ ಬಂಡಾಯವಾ?
ಯಡಿಯೂರಪ್ಪ
ಯಡಿಯೂರಪ್ಪonline desk

ಅತೃಪ್ತಿ, ಅಸಮಾಧಾನ, ಬಂಡಾಯದ ಬೆಂಕಿ ಬಿಜೆಪಿಯನ್ನು ಸುಡುತ್ತಾ? ಅಥವಾ ಇದು ಬರೀ ಯಡಿಯೂರಪ್ಪ ಕುಟುಂಬದ ನಾಯಕತ್ವವನ್ನೇ ಕೇಂದ್ರೀಕರಿಸಿದ ಬಂಡಾಯವಾ?

ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರ ಬಿದ್ದ ಬೆನ್ನಲ್ಲೇ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು ಕೆಲವರನ್ನು ಬಿಟ್ಟರೆ ಒಂದಷ್ಟು ಮಂದಿ ಪ್ರಚಾರದ ಕಣಕ್ಕೂ ಧುಮುಕಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಲಬುರ್ಗಿಮತ್ತು ಶಿಮೊಗ್ಗದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆಯನ್ನೂ ನೀಡಿದ್ದಾರೆ. ಆದರೆ ಇವೆಲ್ಲದರ ನಡುವೆಯೂ ಕುತೂಹಲ ಮೂಡಿಸಿರುವ ಅಂಶ ಎಂದರೆ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರು ಮೇಲುಗೈ ಸಾಧಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಟಿಕೆಟ್ ವಂಚಿತ ಹಿರಿಯ ನಾಯಕರೇ ಬಂಡಾಯ ಎದ್ದಿರುವುದು ಮತ್ತು ಈ ಪೈಕಿ ಕೆಲವರು ಕಾಂಗ್ರೆಸ್ ನತ್ತ ಮುಖ ಮಾಡಿರುವುದು.

ಗುರಿ ಸಾಧಿಸಲು ಕಾಂತೇಶ್ ದುರ್ಬಲ ಅಭ್ಯರ್ಥಿ ಆಗುತ್ತಾರೆ ಹಾಗಾಗಿ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂಬುದು ಬಿಜೆಪಿ ಮೂಲಗಳು ನೀಡುವ ವಿವರಣೆ.

ಇನ್ನು ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧ ತನ್ನ ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಹೇಳುತ್ತಿದ್ದಾರಾದರೂ ಅವರ  ಬಂಡಾಯವನ್ನು ಯಡಿಯೂರಪ್ಪ ಅಥವಾ ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಿವಮೊಗ್ಗ ಅಬ್ಯರ್ಥಿ ರಾಘವೇಮದ್ರ ಗಂಭಿರವಾಗಿ ತೆಗೆದುಕೊಂಡಿಲ್ಲ. ಶಿವಮೊಗ್ಗ ಸ್ಥಳೀಯ ಬಿಜೆಪಿ ಶಾಸಕ ಚೆನ್ನ ಬಸಪ್ಪ ಕೂಡಾ ಪಕ್ಷದ ನಿಲುವಿಗೆ ಬದ್ದರಾಗಿ ರಾಘವೇಂದ್ರ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಈಶ್ವರಪ್ಪ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆಯ್ದ ಪ್ರಮುಖರು ಯಾರೂ ಬಂಡಾಯ ಸ್ಪರ್ಧೆಯನ್ನು ಬೆಂಬಲಿಸಲಿಲ್ಲ. ಬದಲಾಗಿ ದುಡುಕಿ ತೀರ್ಮಾನ ಕೈಗೊಳ್ಳದಂತೆ ಸದ್ಯದ ಪರಿಸ್ಥಿತಿಯಲ್ಲಿ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದು ಬಿಟ್ಟರೆ ಉಳಿದಂತೆ ನೇರಾ ನೇರ ಬೆಂಬಲ ಘೋಷಿಸಿಲ್ಲ. ಹೀಗಾಗಿ ಯಡಿಯೂರಪ್ಪ ವಿರುದ್ಧ ಸಮರ ಸಾರಿರುವ ಈಶ್ವರಪ್ಪ ರಣರಂಗದಲ್ಲಿ ಒಂಟಿಯಾಗಿದ್ದಾರೆ.

ದಿನಕ್ಕೊಂದು ಹೇಳಿಕೆಯಂತೆ ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಅವರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರೂ ಅದಕ್ಕೆ ಪಕ್ಷದ ಉಳಿದ ಯಾವುದೇ ನಾಯಕರೂ ಪ್ರತಿಕ್ರಿಯಿಸುತ್ತಿಲ್ಲ. ಕೆಲವರು ಈಶ್ವರಪ್ಪ ಅವರನ್ನಾಗಲೀ ಅವರ ಹೋರಾಟದ ಹೇಳಿಕೆಗಳನ್ನಾಗಲೀ ಗಂಭೀರವಾಗಿ ತೆಗೆದುಕೊಳ್ಳುವ  ಅವಶ್ಯಕತೆ ಇಲ್ಲ ಎಂಬ ನಿಲುವಿಗೆ ಬದ್ದರಾಗಿದ್ದರೆ ಇನ್ನುಳಿದಂತೆ ಪಕ್ಷದಲ್ಲಿದ್ದೂ ಯಡಿಯೂರಪ್ಪ ಮತ್ತು ಅವರ ಮಕ್ಕಳ ನಾಯಕತ್ವವನ್ನು ಒಳಗೊಳಗೇ ವಿರೋಧಿಸುತ್ತಿರುವ ಬಹಳಷ್ಟು ನಾಯಕರು ಈ ವಿಚಾರದಲ್ಲಿ ತಟಸ್ಥ ಧೋರಣೆ ತಳೆದಿದ್ದಾರೆ .ಇದಕ್ಕೆ ಕಾರಣ ತಮ್ಮೆಲ್ಲ ಮಾತುಗಳನ್ನು ಈಶ್ವರಪ್ಪ ಆಡುತ್ತಿರುವುದು. ಆದರೆ ಇದು ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪನವರೇ ಟಿಕೆಟ್ ಕೊಡಿಸಿ ಕಣಕ್ಕಿಳಿಸಿರುವ ಬಿಜೆಪಿ ಅಭ್ಯರ್ಥಿಗಳಿಗೆ ಮುಳ್ಳಾಗುತ್ತಾ? ಎಂದು ನೊಡಿದರೆ ಅಂತಹ ಯಾವುದೇ ಸಾಧ್ಯತೆಗಳಿಲ್ಲ. ಪ್ರಧಾನಿ ಮೋದಿ ನಾಯಕತ್ವದ ಜನಪ್ರಿಯತೆಯೇ ಬಿಜೆಪಿಗೆ ಚುನಾವಣೆಗೆ ಬಂಡವಾಳ ಆಗಿರುವುದರಿಂದ ಈ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿ ನಡೆದರೂ ಭವಿಷ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯವೇ ಮಸುಕಾಗಿ ಬಿಡಬಹುದು ಎಂಬ ಆತಂಕ ಇನ್ನೊಂದು ಕಡೆ ಈ ಮುಖಂಡರುಗಳನ್ನು ಕಾಡುತ್ತಿದೆ. ಹೀಗಾಗಿ ಈಶ್ವರಪ್ಪ ಮೇಲೆ ಅನುಕಂಪ ವಿಶ್ವಾಸ ಇದ್ದರೂ  ತಮ್ಮ ವ್ಯಕ್ತಿಗತ ರಾಜಕಾರಣದ ಅವಶ್ಯಕತೆಗಳಿಗೆ ಕಟ್ಟು ಬಿದ್ದು ಸುಮ್ಮನಗಾಗಿದ್ದಾರೆ. ಹೀಗಾಗಿ ಯಾವುದೇ ದೃಷ್ಟಿಯಿಂದ ನೋಡಿದರೂ ಈಶ್ವರಪ್ಪ ಈ ರಾಜಕಾರಣದ ಚೆದುರಂಗದಾಟದಲ್ಲಿ ಬಲಿ ಪಶು ಆಗುವುದು ಅನುಮಾನವೇ ಇಲ್ಲ ಎಂಬ ವಾತಾವರಣ ಮೂಡಿದೆ.

ಯಡಿಯೂರಪ್ಪ
ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)

ಈ ಗುರಿ ಸಾಧಿಸಲು ಕಾಂತೇಶ್ ದುರ್ಬಲ ಅಭ್ಯರ್ಥಿ ಆಗುತ್ತಾರೆ ಹಾಗಾಗಿ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂಬುದು ಬಿಜೆಪಿ ಮೂಲಗಳು ನೀಡುವ ವಿವರಣೆ.

ಇನ್ನು ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧ ತನ್ನ ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಹೇಳುತ್ತಿದ್ದಾರಾದರೂ ಅವರ  ಬಂಡಾಯವನ್ನು ಯಡಿಯೂರಪ್ಪ ಅಥವಾ ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಿವಮೊಗ್ಗ ಅಬ್ಯರ್ಥಿ ರಾಘವೇಮದ್ರ ಗಂಭಿರವಾಗಿ ತೆಗೆದುಕೊಂಡಿಲ್ಲ. ಶಿವಮೊಗ್ಗ ಸ್ಥಳೀಯ ಬಿಜೆಪಿ ಶಾಸಕ ಚೆನ್ನ ಬಸಪ್ಪ ಕೂಡಾ ಪಕ್ಷದ ನಿಲುವಿಗೆ ಬದ್ದರಾಗಿ ರಾಘವೇಂದ್ರ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಈಶ್ವರಪ್ಪ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆಯ್ದ ಪ್ರಮುಖರು ಯಾರೂ ಬಂಡಾಯ ಸ್ಪರ್ಧೆಯನ್ನು ಬೆಂಬಲಿಸಲಿಲ್ಲ. ಬದಲಾಗಿ ದುಡುಕಿ ತೀರ್ಮಾನ ಕೈಗೊಳ್ಳದಂತೆ ಸದ್ಯದ ಪರಿಸ್ಥಿತಿಯಲ್ಲಿ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದು ಬಿಟ್ಟರೆ ಉಳಿದಂತೆ ನೇರಾ ನೇರ ಬೆಂಬಲ ಘೋಷಿಸಿಲ್ಲ. ಹೀಗಾಗಿ ಯಡಿಯೂರಪ್ಪ ವಿರುದ್ಧ ಸಮರ ಸಾರಿರುವ ಈಶ್ವರಪ್ಪ ರಣರಂಗದಲ್ಲಿ ಒಂಟಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಂತೆ  ಇರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ರಾಗವೇಂದ್ರ ಗೆಲುವಿನ ಓಟಕ್ಕೆ ತಡೆಯೊಡ್ಡುವ ಪ್ರಬಲ ಅಭ್ಯರ್ಥಿಗಳು ಇಲ್ಲ. ಹಿಂದೊಮ್ಮೆ ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕೆಜೆಪಿ ಸ್ಥಾಪಿಸಿ ವಿದಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಶ್ವರಪ್ಪ ಮೂರನೇ ಸ್ಥಾನಕ್ಕಿಳಿದು ಕರುಣಾಜನಕ ಸೋಲು ಅನುಭವಿಸಿದ್ದರು.  ಅಧಿಕಾರವೇ ರಾಜಕಾರಣದ ಪ್ರಮುಖ ಅಂಶ ಆಗಿರುವುದರಿಂದ ಒಂದು ಕಾಲದ ಅವರ ಶಿಷ್ಯ ಶಾಸಕ ಚೆನ್ನ ಬಸಪ್ಪ ಕೂಡಾ ಅವರ ಜತೆಗಿಲ್ಲ. ಶಿವಮೊಗ್ಗ ಹೊರತುಪಡಿಸಿ ನೋಡಿದರೂ ಜಿಲ್ಲೆಯಲ್ಲಿ ಈಶ್ವರಪ್ಪ ಪ್ರಭಾವ ಹೇಳಿಕೊಳ್ಳುವಂತಹುದ್ದೇನಿಲ್ಲ. ಹೀಗಾಗಿ ಬಿಜೆಪಿ ಹೊರತುಪಡಿಸಿ ಅವರು ವ್ಯಕ್ತಿಗತವಾಗಿ ಪ್ರಬಲ ನಾಯಕರೇನಲ್ಲ. ಶಿವಮೊಗ್ಗದಲ್ಲಿರುವ ಸಂಘ ಪರಿವಾರದ ಒಂದು ಬಣ ಅವರನ್ನು ಬೆಂಬಲಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಆ ಬಣವೂ ಬಿಜೆಪಿ ಪರ ನಿಲ್ಲುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ದೃಷ್ಟಿಕೋನದಿಂದ ನೋಡಿದರೂ ಈಶ್ವರಪ್ಪ ಬಂಡಾಯ ಗಂಭೀರವಾದ ಪರಿಣಾಮವನ್ನೇನೂ ಸೃಷ್ಟಿಸುವ ಸಾಧ್ಯತೆಗಳಿಲ್ಲ.

ಇನ್ನು ವ್ಯಕ್ತಿಗತವಾಗಿ ನೋಡಿದರೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಗುವ ಆಕಾಂಕ್ಷೆ ಇಟ್ಟುಕೊಂಡಿದ್ದ ಅವರ ಪುತ್ರ ಕೆ.ಇ. ಕಾಂತೇಶ್ ಕೂಡಾ ರಾಜಕೀಯವಾಗಿ ಯಡಿಯೂರಪ್ಪ ಅವರ ಮಕ್ಕಳಂತೆ ಸ್ವಂತ ರಾಜಕೀಯ ಅಸ್ತಿತ್ವ ರೂಪಿಸಿಕೊಂಡವರಲ್ಲ. ತಂದೆಯ ನೆರಳನ್ನೇ ನಂಬಿಕೊಂಡು ಬಂದ ಕಾಂತೇಶ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರೂ ಜನಾನುರಾಗಿ ಆಗುವಲ್ಲಿ ವಿಫಲರಾದದ್ದು  ದೌರ್ಬಲ್ಯಗಳಲ್ಲಿ ಒಂದು.

ಯಡಿಯೂರಪ್ಪ
ವಿರೋಧಿಗಳನ್ನು ಹಣಿಯಲು ಸಿದ್ದು ಜಾತಿ ಗಣತಿ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಹಾಗೆ ನೋಡಿದರೆ ಈಶ್ವರಪ್ಪ ಅವರಿಗೆ ರಾಜಕೀಯವಾಗಿ ಮುಖ್ಯಮಂತ್ರಿ ಪದವಿಯೊಂದನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲ ಪ್ರಮುಖ ಅಧಿಕಾರಗಳೂ ಸಿಕ್ಕಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುವ ದೈರ್ಯ ಕೇಮದ್ರ ಬಿಜೆಪಿ ನಾಯಕರಿಗೂ ಇಲ್ಲ. ಯಾಕೆಂದರೆ ಅವರಷ್ಟೇ ಸಾಮರ್ಥ್ಯದ ಮತ್ತೊಬ್ಬ ಪ್ರಭಾವಿ ನಾಯಕ ಬಿಜೆಪಿಯಲ್ಲಿ ಇಲ್ಲ.  ಇದೇ ಬಿಜೆಪಿಯ ನಿಜವಾದ ಸಮಸ್ಯೆ.

ಪಕ್ಕದ  ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಪ್ರತಿನಿಧಿಯಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿಯ ಇನ್ನೊಂದು ಗುಂಪು ನಡೆಸಿದ ಆಂಧೋಲನ ಯಶಸ್ವಿಯೇನೋ ಆಗಿದೆ. ಅಲ್ಲೂ ಶೋಭಾ ಗೋಬ್ಯಾಕ್ ಆಂದೋಲನಕ್ಕೆ ತೆರೆಯ ಹಿಂದೆ ನಿಂತು ಬೆಂಬಲ ನೀಡಿದ್ದ ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಯಾವುದೇ ನಾಯಕರಿಗೆ ಲಾಭ ಆಗಿಲ್ಲ. ಸಂಘ ಪರಿವಾರದ ಕಟ್ಟಾಳು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಈ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಉಡುಪಿ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವರ ಮತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಸ್ಪರ್ಧಿಯಾಗಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಇಲ್ಲೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಿ.ಟಿ.ರವಿಯವರ ಹೆಸರನ್ನು ಕೈಬಿಡಲಾಗಿದೆ. ಆದರೆ ತಮ್ಮ ಬೆಂಬಲಿಗರೂ ಆಗಿರುವ ಶೋಭಾ ಕರಂದ್ಲಾಜೆಯವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ನೀಡಲಾಗಿದೆ ಆ ಮೂಲಕ ಯಡಿಯೂರಪ್ಪ ರವಿ ವಿರುದ್ಧದ ತಮ್ಮ ಹಳೇ ರಾಜಕೀಯ ಸೇಡನ್ನು ತೀರಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದ ಮಾಜಿ ಕೇಂದ್ರ ಸಚಿವರೂ ಆದ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಅವರಿಗೆ ಟಿಕೆಟ್ ಕೈ ತಪ್ಪಲು ಅವರ ಗೊಂದಲಮಯ ರಾಜಕೀಯ ನಿಲುವೇ ಕಾರಣ ಎಂದೂ ಬಿಜೆಪಿ ಮೂಲಗಳೇ ಪ್ರತಿಪಾದಿಸುತ್ತವೆ. ಈ ಮೊದಲು ಮತ್ತೆ ಸ್ಪರ್ಧೆಗೆ ಅವಕಾಶ ಅನುಮಾನ ಎಂಬ ಮಾಹಿತಿ ಮೊದಲೇ ತಿಳಿದಿದ್ದ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು. ಅವರ ಈ ನಿಲುವನ್ನು ಯಡಿಯೂರಪ್ಪ ಕೂಡಾ ಸ್ವಾಗತಿಸುವ ಭರದಲ್ಲಿ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ನಂತರ ಬೆಂಗಳೂರು ನಗರದ  ಬಿಜೆಪಿ ನಾಯಕರ ಒತ್ತಾಸೆಗೆ ಕಟ್ಟು ಬಿದ್ದ ಗೌಡರು ತಮ್ಮ ನಿಲುವು ಬದಲಿಸಿದರಾದರೂ ಅದನ್ನು ವರಿಷ್ಠರಿಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದರು. ಈ ಗೊಂದಲವೇ ಅವರಿಗೆ ಟಿಕೆಟ್ ತಪ್ಪಲು ಕಾರಣ. ರಾಜಕೀಯವಾಗಿ ಯಡಿಯೂರಪ್ಪ ಅವರಿಂದ ತುಸು ದೂರವೇ ಉಳಿದಿದ್ದು ಸಜ್ಜನಿಕೆಯ ನಾಯಕ ಎದು ಗುರುತಿಸಿಕೊಂಡಿದ್ದರೂ ಪಕ್ಷದೊಳಗೆ ತಮ್ಮದೇ ಆದ ಪ್ರಭಾ ವಲಯ ಅಥವಾ  ಬೆಂಬಲಿಗರ ಪಡೆಯನ್ನು ಸೃಷ್ಟಿಸಿಕೊಳ್ಳಲು ವಿಫಲರಾಗಿದ್ದು ದುರಂತ.

ಯಡಿಯೂರಪ್ಪ
ಡಿಕೆಶಿ ವಿರುದ್ಧ ಸಿದ್ದು ಬೆಂಬಲಿಗರ ಒಕ್ಕಲಿಗ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಗೌಡರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಅವರ ನಿಲುವು ಘೋಷಿಸಿಲ್ಲ. ಕೊಪ್ಪಳ, ದಾವಣಗೆರೆ, ಬೆಳಗಾವಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಸಮಧಾನ ಭುಗಿಲೆದ್ದು ಪರಾಕಾಷ್ಠೆಯ ಹಂತ ತಲುಪಿದೆ. ಮಾಜಿ ಸಚಿವ ವಿ. ಸೋಮಣ್ಣ ಕಣಕ್ಕಿಳಿದಿರುವ ತುಮಕೂರಿನಲ್ಲೂ ಪರಿಸ್ಥಿತಿ ಉತ್ತಮವಾಗೇನೂ ಇಲ್ಲ. ಮಾಜಿ ಸಚಿವ ಮಾಧುಸ್ವಾಮಿ ಸಿಡಿದೆದ್ದಿದ್ದಾರೆ. ಯಾವುದೇ ಬಿಜೆಪಿ ನಾಯಕರನ್ನು ತಮ್ಮ ಮನೆ ಬಳಿ ಬಿಟ್ಟುಕೊಳ್ಳುತ್ತಿಲ್ಲ. ಮೋದಿ ಅಲೆಯ ಭರಾಟೆಯಲ್ಲಿ ಗೆಲುವು ಖಚಿತ ಎಂದು ಬೀಗುತ್ತಿರುವ ಬಿಜೆಪಿಗೆ ಆಂತರಿಕ ಭಿನ್ನಮತ, ಬಂಡಾಯವೇ ದೊಡ್ಡ ಸಮಸ್ಯೆ. ಕಾಂಗ್ರೆಸ್ ಕೂಡಾ ಈ ಬೆಳವಣಿಗೆ ಮೇಲೆ ಕಣ್ಣಿಟ್ಟಿದೆ. ಮುಂದಿನದನ್ನು ಕಾದು ನೋಡಬೇಕು.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com