ಡಿಕೆಶಿ ವಿರುದ್ಧ ಸಿದ್ದು ಬೆಂಬಲಿಗರ ಒಕ್ಕಲಿಗ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಸಂದರ್ಭ ಸಿಕ್ಕಾಗಲೆಲ್ಲ ಶಿವಕುಮಾರ್ ವಿರುದ್ಧ ಅಬ್ಬರಿಸುವ ಸಚಿವ ರಾಜಣ್ಣ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುವ ಮೊದಲೇ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುದ್ದ ಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮತ್ತೆ ಡಿ.ಕೆ.ಶಿ. ವಿರುದ್ಧ ತೊಡೆ ತಟ್ಟಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್- ಸಿದ್ದರಾಮಯ್ಯ
ಡಿಸಿಎಂ ಡಿಕೆ ಶಿವಕುಮಾರ್- ಸಿದ್ದರಾಮಯ್ಯ online desk

ತುಮಕೂರಿನ ಮಾಜಿ ಲೋಕಸಭಾ ಸದಸ್ಯ ಮುದ್ದ ಹನುಮೇಗೌಡ ಬಿಜೆಪಿ ತೊರೆದು ಮೊನ್ನೆ ಕಾಂಗ್ರೆಸ್ ಗೆ ವಾಪಸಾಗಿದ್ದಾರೆ. ಚಿಕ್ಕಬಳ್ಳಾಪುರ ಮಾಜಿ ಶಾಸಕರೂ ಆದ ಬಿಜೆಪಿಯ ಮಾಜಿ ಸಚಿವ ಡಾ. ಕೆ.ಸುಧಾಕರ್ ರನ್ನೂ ಕಾಂಗ್ರೆಸ್ ಗೆ ಕರೆ ತರುವ ಸಿದ್ಧತೆಗಳು ಆರಂಭವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿದ್ದ ಮುದ್ದ ಹನುಮೆಗೌಡರಿಗೆ ಅಡ್ಡಗಾಲು ಹಾಕಿದ್ದ ಶಿವಕುಮಾರ್ ತಮ್ಮ ಭಾವ ಡಾ. ರಂಗನಾಥ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರು. ಇದರ ವಿರುದ್ಧ ಸಿಡಿದೆದ್ದಿದ್ದ ಅವರು ಬಿಜೆಪಿ ಸೇರಿದ್ದರು. ಈ ಬಾರಿ ಅಲ್ಲೂ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗುವುದಿಲ್ಲ ಎಂಬ ಸೂಚನೆ ಅರಿತು ಮತ್ತೆ ಮರಳಿ ಕಾಂಗ್ರೆಸ್ ಸೇರಿದ್ದಾರೆ. ರಾಜಕಾರಣದಲ್ಲಿ ಅವರ ಒಂದು ಸುತ್ತಿನ ಪರ್ಯಟಣೆ ಮಗಿದಿದೆ.

ವಿಶೇಷ ಎಂದರೆ ಅವರನ್ನು ಕಾಂಗ್ರೆಸ್ ಗೆ ಮರಳಿ ಕರೆತರಲು ಸಿದ್ದರಾಮಯ್ಯ ಆಪ್ತ ಬಳಗಕ್ಕೆ ಸೇರಿದ ಸಚಿವ ಕೆ.ಎನ್. ರಾಜಣ್ಣ ಹಾಗೂ ಇತ್ತಿಚಿಗೆ ಸಿದ್ದರಾಮಯ್ಯನವರಿಗೆ ಹತ್ತಿರವಾಗಿರುವ ಸಚಿವ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹಾಗೂ ಗುಬ್ಬಿ ಶಾಸಕ ವಾಸು ಅತಿಯಾದ ಮುತುವರ್ಜಿ ವಹಿಸಿದ್ದರು. ಸಂದರ್ಭ ಸಿಕ್ಕಾಗಲೆಲ್ಲ ಶಿವಕುಮಾರ್ ವಿರುದ್ಧ ಅಬ್ಬರಿಸುವ  ಸಚಿವ ರಾಜಣ್ಣ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುವ ಮೊದಲೇ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುದ್ದ ಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮತ್ತೆ ಡಿ.ಕೆ.ಶಿ. ವಿರುದ್ಧ ತೊಡೆ ತಟ್ಟಿದ್ದಾರೆ. ಇದಕ್ಕೆ ಪರೋಕ್ಷವಾಗಿ ಸಿದ್ದರಾಮಯ್ಯನವರ ಕೃಪಾಶೀರ್ವಾದವೂ ಇದೆ. ಇದನ್ನು ಸಮರ್ಥಿಸಿಕೊಳ್ಳಲೂ ಆಗದ ನಿರಾಕರಿಸಲೂ ಆಗದ ಇಕ್ಕಟ್ಟಿಗೆ ಶಿವಕುಮಾರ್ ಸಿಲುಕಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್- ಸಿದ್ದರಾಮಯ್ಯ
ಬಿಜೆಪಿ –ಜೆಡಿಎಸ್ ಮೈತ್ರಿಯ ಹಾದಿ ನಿರ್ಧರಿಸಲಿರುವ ರಾಜ್ಯಸಭೆ ಚುನಾವಣೆ ಫಲಿತಾಂಶ (ಸುದ್ದಿ ವಿಶ್ಲೇಷಣೆ)

ಇನ್ನು ರಾಜ್ಯ ಸಭೆ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ  ರಾಜಕಾರಣದ ತಿಕ್ಕಾಟದ ಹರಕೆಯ ಕುರಿ ಆಗುತ್ತಾರಾ? ಎಂಬ ಪ್ರಶ್ನೆಯೂ ತಲೆ ಎತ್ತಿದೆ.

ಚುನಾವಣೆಯ ಮತದಾನಕ್ಕೆ ಇನ್ನೂ ಐದು ದಿನ ಬಾಕಿ ಇರುವ ಸಂದರ್ಭದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಫಲಿತಾಂಶ ಏನೇ ಬರಲಿ ಮುಂದಿನ ದಿನಗಳಲ್ಲಿ ಆಡಳಿತ ಕಾಂಗ್ರೆಸ್ ಪಕ್ಷ ಇದನ್ನೊಂದು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳುವುದಂತೂ ಸತ್ಯ ಎಂಬುದು ಈಗ ಖಚಿತವಾಗಿದೆ.  ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರನ್ನು ಮೈತ್ರಿಯ ಕಾರಣಕ್ಕೆ ಬಿಜೆಪಿ ಬೆಂಬಲಿಸಿದೆಯಾದರೂ ಮೇಲ್ನೋಟಕ್ಕೆ ಎಲ್ಲವೂ ಅಂದುಕೊಂಡಂತೆ ಇಲ್ಲ. ಬಿಜೆಪಿ ಜೆಡಿಎಸ್ ಪಕ್ಷಗಳಲ್ಲಿ ಭಿನ್ನಮತ ತಲೆ ಎತ್ತಿರುವುದರಿಂದ ಇದರ ಲಾಭ ಪಡೆಯಲು ಕಾಂಗ್ರೆಸ್ ಹೂಡಿರುವ ರಣ ತಂತ್ರ ಯಶ ಕಾಣುವ ಸಾಧ್ಯತೆಗಳಂತೂ ಸದ್ಯಕ್ಕೆ ಇದೆ.

ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿದ್ದಾರೆ. ಹೀಗಾಗೇ ಕಾಂಗ್ರೆಸ್ ಶಾಸಕರ ಮತಗಳು ಕೈತಪ್ಪಿ ಹೋಗದಂತೆ ಮಾಡಲು ಪಕ್ಷದ 136 ಶಾಸಕರನ್ನೂ ನಗರದ ಹೊರ ವಲಯದ ರೆಸಾರ್ಟ್ ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಶಿವಕುಮಾರ್ ಅವರೇ ಮಾಮೂಲಿಯಂತೆ ಚುನಾವಣೆಯ ಉಸ್ತುವಾರಿ ಹೊತ್ತಿರುವುದರಿಂದ ಸಹಜವಾಗೇ ಅವರಿಗೆ ಇದು ಜೆಡಿಎಸ್ ವಿರುದ್ಧದ ಯುದ್ಧಕ್ಕೆ ಸವಾಲಾಗಿ ಪರಿಣಮಿಸಿದೆ.

ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಹಾಗೂ ಕೆಲವು ಪಕ್ಷೇತರ ಶಾಸಕರನ್ನು ಸಂಪರ್ಕಿಸಿ ಬೆಂಬಲ ಕೇಳಿರುವುದು ಈ ಹಂತದಲ್ಲಿ ಕಾಂಗ್ರೆಸ್ ಗೆ ನಿಷ್ಠರಾಗಿರುವ  ಇಬ್ಬರು ಪಕ್ಷೇತರ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂಬ ಕುರಿತು ಕಾಂಗ್ರೆಸ್ ಇದೀಗ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದೆ. ಹೀಗಾಗಿ ಸಹಜವಾಗೇ ಚುನಾವಣಾ ಕಣ ಮುಂದಿನ ದಿನಗಳಲ್ಲಿ ಕಾವೇರುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ವಿಶೇಷ ಎಂದರೆ ಈ ವಿವಾದವನ್ನು ಜೆಡಿಎಸ್ ನ ಮಿತ್ರ ಪಕ್ಷ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಕಣದಲ್ಲಿರುವ ತನ್ನ ಅಭ್ಯರ್ಥಿಯ ಗೆಲುವಿಗೆ ಸೀಮಿತವಾಗಿ ಅಗತ್ಯ ಮತಗಳು ಕ್ರೂಢೀಕರಣ ಗೊಳ್ಳುವಂತೆ ಹಾಗೂ ಹಂಚಿಕೆ ಆಗುವ ಮತಗಳು ತಪ್ಪದಂತೆ ಎಚ್ಚರ ವಹಿಸಿದೆ. ಆ ಪಕ್ಷದ ಒಟ್ಟು 66 ಶಾಸಕರ ಪೈಕಿ 48 ಶಾಸಕರ ಮತಗಳನ್ನು ಅಧಿಕೃತ ಅಭ್ಯರ್ಥಿ ನಾರಾಯಣ ಭಾಂಡಗೆ ಅವರಿಗೆ ಹಂಚಿಕೆ ಮಾಡಲಾಗಿದೆ. ಪಕ್ಷದ ಯಾವ ಯಾವ ಶಾಸಕರು ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂಬುದರ ಪೂರ್ಣ ಯೋಜನೆ ತಯಾರಾಗಿದೆ.

ಗೆಲ್ಲಲು ಬೇಕಾದಷ್ಟು ಮೊದಲ ಪ್ರಾಶಸ್ತ್ಯದ ಮತಗಳು ಬಿಜೆಪಿ ಬಳಿ ಇರುವುದರಿಂದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಯಾವುದೇ ತೊಡಕಾಗದು. ಇನ್ನುಳಿಯುವ 18 ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತಗಳಾಗಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.  ಬಿಜೆಪಿಯಿಂದ ಬರುವ 18 ಮತಗಳ ಜತೆಗೆ ತಮ್ಮದೇ ಪಕ್ಷದ 19 ಶಾಸಕರ ಮತಗಳನ್ನು ಪಡೆದ ನಂತರವೂ ಕೊರತೆಯಾಗುವ ಇನ್ನೂ ಎಂಟು ಮತಗಳನ್ನು ಪಡೆಯಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಅವರಿಗೆ ಕಾಂಗ್ರೆಸ್ ನ ಒಬ್ಬ ಅಭ್ಯರ್ಥಿಯನ್ನು ಸೋಲಿಸುವ ತವಕ. ಆದರೆ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಹೆಚ್ಚುವರಿಯಾಗಿ ಎಂಟು ಮತಗಳು ಸಿಗುವ ಸಾಧ್ಯತೆ ತೀರಾ ದೂರ. ಇದೇ ಲೆಕ್ಕಾಚಾರ ದೃಢವಾದರೆ ಕುಪೇಂದ್ರ ರೆಡ್ಡಿ ಜೆಡಿಎಸ್ ಆಂತರಿಕ ರಾಜಕಾರಣದ ತಿಕ್ಕಾಟಕ್ಕೆ ಬಲಿಪಶು ಆಗುತ್ತಾರೆ.

ಡಿಸಿಎಂ ಡಿಕೆ ಶಿವಕುಮಾರ್- ಸಿದ್ದರಾಮಯ್ಯ
ರಾಜ್ಯಸಭೆ ಚುನಾವಣೆ: ಐದನೇ ಅಭ್ಯರ್ಥಿ ಕಣಕ್ಕೆ? ಮೂರೂ ಪಕ್ಷಗಳಲ್ಲಿ ತಲ್ಲಣ (ಸುದ್ದಿ ವಿಶ್ಲೇಷಣೆ)

ಈ ಚುನಾವಣೆಯಲ್ಲಿ ಮತ ಹಾಕುವ ಶಾಸಕರು ವೇಳೆ ಪಕ್ಷದ ಸೂಚನೆಯನ್ನು ಉಲ್ಲಂಘಿಸಿದರೂ ಅದರಿಂದ ಸದಸ್ಯತ್ವ ರದ್ದಾಗುವ ಅಪಾಯವೇನೂ ಇಲ್ಲ. ಇದು ಮತ ಚಲಾಯಿಸುವ ಎಲ್ಲ ಶಾಸಕರಿಗೂ ಗೊತ್ತು. ಹೀಗಾಗೇ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ ಚಲಾವಣೆಗೆ ಸಂಬಂಧಿಸಿದಂತೆ ನೀಡುವ ವಿಪ್ ನ್ನು ಕೆಲವು ಶಾಸಕರು ಉಲ್ಲಂಘಿಸುವ ಸಾಧ್ಯತೆಗಳೇ ಜಾಸ್ತಿ.

ಬಿಜೆಪಿಯಲ್ಲಿದ್ದೂ ಈಗಾಗಲೇ ಕಾಂಗ್ರೆಸ್ ನತ್ತ ಮುಖ ಮಾಡಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಈ ಚುನಾವಣೆಯಲ್ಲಿ ಯಾವ ನಿಲವು ತೆಗೆದುಕೊಳ್ಳುತ್ತಾರೆ ಎಂಬುದೇ ಕುತೂಹಲವಾಗಿದೆ.

ಈ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುತ್ತಾರೆಂದೇ ಹೇಳಲಾಗುತ್ತಿದೆಯಾದರೂ ಕಡೇ ಗಳಿಗೆಯಲ್ಲಿ ಮತದಾನಕ್ಕೆ ಗೈರು ಹಾಜರಾದರೂ ಆಶ್ಚರ್ಯ ಏನಿಲ್ಲ. ಸೋಮಶೇಖರ್ ಅವರೇನೋ ಇತ್ತಿಚಿನ ಒಂದು ಸಂದರ್ಶನದಲ್ಲಿ ರಾಜ್ಯ ಸಭೆ ಚುನಾವಣೆಯಲ್ಲಿ ಪಕ್ಷದ  ಅಭ್ಯರ್ಥಿ ಪರವೇ ತಾನು ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಮಂಗಳೂರಿನಿಂದ ಬೆಂಗಳೂರಿಗೆ ಒಟ್ಟಿಗೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಬಿಜೆಪಿ ಸೇರುವ ಮೊದಲು ಕಾಂಗ್ರೆಸ್ನಲ್ಲಿದ್ದ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದವರು. ಹೀಗಾಗಿ ಈ ವಿಮಾನ ಪ್ರಯಾಣ, ಮಾತುಕತೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಇನ್ನುಳಿದಂತೆ ಜೆಡಿಎಸ್ ನಲ್ಲೂ ಇದೇ ಪರಿಸ್ಥಿತಿ ಬಿಜೆಪಿ ಜತೆಗಿನ ಹೊಂದಾಣಿಕೆ ಕೆಲವು ಶಾಸಕರಿಗೆ ಸಮಾಧಾನ ತಂದಿಲ್ಲ. ಇದು ಸಹಜವಾಗೇ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಜೆಡಿಎಸ್ ಅಭ್ಯರ್ಥಿ ವಿರುದ್ಧದ ಮತದಾರರಿಗೆ ಆಮಿಷ ಒಡ್ಡಿರುವ ದೂರು ಗಂಭೀರ ಸ್ವರೂಪ ಪಡೆದರೆ ಆಗ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಲೇ ಬೇಕಾಗುತ್ತದೆ. ಸದ್ಯಕ್ಕೆ ಇದು ಪೊಲೀಸ್ ಠಾಣೆಯ ಹಂತದಲ್ಲಿ ದೂರು ದಾಖಲಾಗಿದೆ. ಆದರೆ ಚುನಾವಣಾ ಫಲಿತಾಂಶ ನಂತರವೂ ಅಧಿಕಾರಸ್ಥ ಕಾಂಗ್ರೆಸ್ ಪಕ್ಷ ಅವರ ಬಗೆಗೆ ಇದುವರೆಗಿನ ತನ್ನ ಮೃದು ಧೋರಣೆಯನ್ನು ಹಾಗೆಯೇ ಮುಂದುವರಿಸುತ್ತಾ ಎಂಬುದು ಸದ್ಯದ ಪ್ರಶ್ನೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರೆಡ್ಡಿ ತಮ್ಮ ವ್ಯವಹಾರದ ಅಗತ್ಯತೆಗಳಿಗಾಗಿ ನಿತ್ಯ ಸರ್ಕಾರದ ಜತೆ ಒಡನಾಟ ಹೊಂದಿರಲೇಬೇಕಾಗುತ್ತದೆ.ಈಗ ಅವರು ಜೆಡಿಎಸ್ ಜತೆ ಗುರುತಿಸಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿಗಳು ಯಾವ ತಿರುವು ತೆಗೆದುಕೊಳ್ಳುತ್ತದೆ ಎಂಬುದನ್ನು ಈಗಲೇ ನಿರ್ಧರಿಸುವುದು ಕಷ್ಟ.  ಕಾಂಗ್ರೆಸ್ ಪಾಳೇಯದಲ್ಲಂತೂ ಮೂವರೂ ಅಭ್ಯರ್ಥಿಗಳು ಗೆಲ್ಲುವ ಆತ್ಮ ವಿಶ್ವಾಸ ಎದ್ದು ಕಾಣುತ್ತಿದೆ.

ಪುಟ್ಟಣ್ಣ ಮರು ಆಯ್ಕೆಗೆ ಕಾಂಗ್ರೆಸ್ ಬೀಗಿದ್ದೇಕೆ ?

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟಣ್ಣ ಗೆದ್ದು ಮೇಲ್ಮನೆ ಸದಸ್ಯರಾಗಿ ಪ್ರಮಾಣವಚನವನ್ನೂ ತೆಗೆದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಕೀಲ ರಂಗನಾಥ್ ಪರಾಭವಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಬಹುತೇಕ ಮುಖಂಡರು ಇದೊಂದು ತಮ್ಮ ಪಕ್ಷದ ಮಹತ್ವದ ದಿಗ್ವಿಜಯ ಎಂದು ಬೀಗುತ್ತಿದ್ದಾರೆ. ವಾಸ್ತವವಾಗಿ ಯಾವುದೇ ರಾಜಕಾರಣದ ಪಲಿತಾಂಶದ ಪರಿಣಾಮ ಹೊಂದಿರದ ಈ ಚುನಾವಣೆ ಎಂದಿಗೂ ಅಷ್ಟೇನೂ ಮಹತ್ವ ಎಂದಿನಿಸಿಲ್ಲ.

ಡಿಸಿಎಂ ಡಿಕೆ ಶಿವಕುಮಾರ್- ಸಿದ್ದರಾಮಯ್ಯ
ಅನಂತ್ ಕುಮಾರ್ ಹೆಗಡೆ 'ಕರಾಟೆ ಕೌಶಲ್ಯ'ಕ್ಕೆ ನಲುಗಿದ ಬಿಜೆಪಿ! (ಸುದ್ದಿ ವಿಶ್ಲೇಷಣೆ)

ಈಗಾಗಲೇ ಹಲವು ಬಾರಿ ಗೆದ್ದಿರುವ ಪುಟ್ಟಣ್ಣ ಅವರ ಗೆಲುವಿನ ಓಟಕ್ಕೆ ಇದೊಂದು ಸೇರ್ಪಡೆ ಅಷ್ಟೆ. ವಿಶೇಷವಾಗಿ ಈ ಚುನಾವಣೆಗಳಲ್ಲಿ ಪಳಗಿರುವ ಅವರು ಯಾವುದೇ  ಪಕ್ಷದಲ್ಲಿರಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ವಿಧಾನ ಪರಿಷತ್ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಂದ ನಡೆಯುವ ಚುನಾಣೆಯಲ್ಲಿ ಸೀಮಿತ ಸಂಖ್ಯೆಯ ಮತದಾರರು ಇರುವುದರಿಂದ ಅದೇನೂ ರಾಜಕೀಯವಾಗಿ ಎಂದಿಗೂ ಮಹತ್ವ ಎನಿಸಿಲ್ಲ.

ಮೂರು ದಶಕಗಳಿಗೂ ಮೀರಿದ ರಾಜಕೀಯ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇದು ಗೊತ್ತಿಲ್ಲದ ವಿಚಾರವೇನಲ್ಲ. ಆದರೂ ಈ ಫಲಿತಾಂಶವನ್ನು ತಮ್ಮ ಪಕ್ಷದ ಮಹತ್ವದ ದಿಗ್ವಿಜಯ ಎಂದು ಬಣ್ಣಿಸುವ ಮೂಲಕ ತಮ್ಮ ಅಸಹಾಯಕತೆಯನ್ನು ಮರೆ ಮಾಚುವ ಪ್ರಯತ್ನ ಮಾಡಿದ್ದಾರೆ.

ಎಲ್ಲ ರಾಜಕಾರಣಿಗಳಂತೆ ಸಿದ್ದರಾಮಯ್ಯ ಕೂಡಾ ಬದಲಾಗಿದ್ದಾರೆ. ಅವರ ಹಿಂದಿನ ಕಾರ್ಯ ಶೈಲಿ, ರಾಜಕೀಯ ನಡೆ ಗೊತ್ತಿದ್ದವರೂ ಮುಜುಗುರ ಪಡುವಂತೆ ಅವರ ಇತ್ತೀಚಿನ ಆಡಳಿತಾತ್ಮಕ ಮತ್ತು ರಾಜಕೀಯ ನಡವಳಿಕೆಗಳು ಪ್ರದರ್ಶಿತವಾಗುತ್ತಿವೆ.

ಈ ಬೆಳವಣಿಗೆಗಳು ಒಂದು ಕಡೆಯಾದರೆ ಮುಖ್ಯಮಂತ್ರಿ ಪಟ್ಟದ ಅಧಿಕಾರದ ಅವಧಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಮತ್ತೆ ಕೂಗು ಎದ್ದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ, ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಈ ಬಾರಿ ಎರಡು ವರ್ಷದ ಅವಧಿ ಮುಗಿದ ನಂತರ ಸಿಎಂ ಬದಲಾವಣೆ ಆಗಬೇಕೆಂಬ ಕೂಗು ಎಬ್ಬಿಸಿದ್ದಾರೆ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com