ಅದೊಂದು ರಾಜಕೀಯ ದಾಳ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಗುಪ್ತ ಸಭೆಗಳನ್ನು ನಡೆಸುತ್ತಿದ್ದ ಮೂವರು ಪ್ರಮುಖ ಸಚಿವರು ಸದ್ಯಕ್ಕೆ ತಣ್ಣಗಾಗಿದ್ದಾರೆ.
ಇಂಥದೊಂದು ದಾಳ ಉರುಳಿಸಿದ್ದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಹೀಗೆ ಗುಪ್ತ ಸಭೆಗಳನ್ನು ನಡೆಸುತ್ತಿದ್ದ ಸಚಿವರಾದ ಸತೀಶ ಜಾರಕಿಹೊಳಿ, ಡಾ. ಜಿ.ಪರಮೇಶ್ವರ್, ಡಾ. ಮಹದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು ಹಾಗೂ ಬೆಂಬಲಿಗರು.
ಮೈಸೂರಿನ ಭೂ ಹಗರಣದ ವಿವಾದ ಆರಂಭವಾಗಿ, ತನಿಖೆ ಪ್ರಕ್ರಿಯೆ ಆರಂಭವಾದಂದಿನಿಂದ ಆರೋಪ ಹೊತ್ತಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬ ವದಂತಿಗಳು ಕಾಂಗ್ರೆಸ್ ನಲ್ಲೇ ಹಬ್ಬಿವೆ. ಒಂದು ಕಡೆ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ದಿನಕ್ಕೊಂದು ಹೇಳಿಕೆ ಪ್ರತಿಭಟನೆ ನಡೆಸುತ್ತಿದ್ದರೆ ಕಾಂಗ್ರೆಸ್ ನಲ್ಲೇ ಆಂತರಿಕವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಪ್ರಯತ್ನಗಳು ನಡೆಯುತ್ತಿರುವುದು ಈಗಾಗಲೇ ಬಹಿರಂಗವಾಗಿರುವ ಸಂಗತಿ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಇಂಥದೊಂದು ಚಟುವಟಿಕೆಗೆ ಮುಂದಾಗಬಹುದೆಂಬ ನಿರೀಕ್ಷೆ ಇತ್ತಾದರೂ ಅವೆಲ್ಲವನ್ನೂ ಮೀರಿ ಅವರು ಸಿದ್ದರಾಮಯ್ಯ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲುವ ಮೂಲಕ ರಾಜಕೀಯ ವಿರೋಧಿಗಳ ನಿರೀಕ್ಷೆಗಳನ್ನು ತಲೆ ಕೆಳಗು ಮಾಡಿದ್ದರು. ಶಿವಕುಮಾರ್ ನಿರ್ಧಾರದ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳು ಇವೆಯಾದರೂ ಅವರು ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ನಿಲುವಿನಿಂದ ಆಚೆ ಸರಿದಿಲ್ಲ. ಹಾಗೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲಿಗರು, ಸ್ವಜಾತಿಯ ಶಾಸಕರ ಗುಪ್ತ ಸಭೆ ನಡೆಸುವುದು, ಅಥವಾ ಒತ್ತಡ ರಾಜಕೀಯ ತಂತ್ರ ಅನುಸರಿಸುವುದೂ ಸೇರಿದಂತೆ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ. ಆದರೆ ಕುತೂಹಲದ ಸಂಗತಿ ಎಂದರೆ ಮೊದಲಿನಿಂದಲೂ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇಂತಹ ಗುಪ್ತ ಸಭೆಗಳ ಸೂತ್ರಧಾರರಾಗಿ ನೇತೃತ್ವ ವಹಿಸಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಲು ಕಾರಣರಾಗಿರುವುದು.

ಕಳೆದ ಕೆಲವು ತಿಂಗಳುಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಿಂದ ನಿಧಾನವಾಗಿ ದೂರಾಗುತ್ತಿದ್ದು ತಮ್ಮದೇ ಆದ ಬೆಂಬಲಿಗರ ಸಭೆಗಳನ್ನು ನಡೆಸುವ ಮೂಲಕ ಸ್ವತಂತ್ರ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಅವರು ದಿಲ್ಲಿಗೆ ಭೇಟಿ ನೀಡುವುದು, ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸುವುದು, ಅಲ್ಲದೇ ಬಿಜೆಪಿಯ ದಿಲ್ಲಿ ನಾಯಕರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸುವುದು ನಡೆದೇ ಇದೆ. ಅವರ ಬೆಂಬಲಕ್ಕೆ ಕಾಂಗ್ರೆಸ್ ನ 24 ಶಾಸಕರು ಇದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ರಚನೆ ವಿಚಾರ ಚರ್ಚೆ ಹುಟ್ಟುಹಾಕಿದಾಗಲೂ ಸತೀಶ್ ಮುಂಚೂಣಿಯಲ್ಲಿದ್ದರು. ಅವರ ಇಬ್ಬರು ಸೋದರರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ಮತ್ತೊಬ್ಬ ಸೋದರ ಲಖನ್ ವಿಧಾನ ಪರಿಷತ್ ಸದಸ್ಯರು. ಕುಟುಂಬದ ರಾಜಕೀಯ ಅಸ್ತಿತ್ವದ ವಿಚಾರ ಬಂದಾಗ ಪಕ್ಷ ಬೇಧ ಮರೆತು ಎಲ್ಲ ಸೋದರರು ಒಂದಾದ ಉದಾಹರಣೆಗಳು ಸಾಕಷ್ಟಿವೆ.
ಹೀಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್ ಬಹಿರಂಗವಾಗಿ ಸದ್ಯಕ್ಕೆ ತಾನು ಸಿಎಂ ಪಟ್ಟದ ರೇಸ್ ನಲ್ಲಿ ಇಲ್ಲ. ಆದರೆ 2028 ರ ಚುನಾವಣೆಗೆ ತಾನು ಈ ಪಟ್ಟಕ್ಕೆ ಸ್ಪರ್ಧಿ ಎಂದೂ ಹೇಳುತ್ತಿದ್ದಾರೆ. ಆದರೂ ಸಮಾನ ಮನಸ್ಕ ಸಚಿವರ ಗುಪ್ತ ಸಭೆಗಳನ್ನು ನಡೆಸವುದು ನಿಲ್ಲಿಸಿಲ್ಲ. ಯಾವಾಗ ಆಗಾಗ್ಗೆ ಈ ತ್ರಿಮೂರ್ತಿಗಳು ಸಭೆ ನಡೆಸುವುದು ಹೆಚ್ಚಾಯಿತೋ ಆಗ ರಾಜಕೀಯ ವಲಯಗಳಲ್ಲಿ ಕುತೂಹಲ ಹೆಚ್ಚಾದರೂ ಬಹಿರಂಗವಾಗೇ ನಡೆಯುತ್ತಿದ್ದ ಈ ಗುಪ್ತ ಚಟುವಟಿಕೆಗಳು,ಅವುಗಳ ಸವಿವರ ಮಾಹಿತಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದೇ ಇಲ್ಲ, ಅಥವಾ ಅಂತಹ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸದಷ್ಟು ಅವರು ಅಮಾಯಕರು ಎಂದೇನೂ ಅಲ್ಲ. ಗುರುವಾರ ನಡೆದ ಸಚಿವ ಸಂಫುಟ ಸಭೆಯಲ್ಲಿ ಗುಪ್ತ ಸಭೆಗಳ ಬಗ್ಗೆ ಸಿದ್ದರಾಮಯ್ಯ ನೇರವಾಗೇ ಸಚಿವರನ್ನು ತರಾಟೆಗೆ ತೆಗೆದುಕೊಂಡು ತಮಗೆ ಈ ಬಗ್ಗೆ ಪೂರ್ಣ ಮಾಹಿತಿ ಇದೆ ಎಂದೂ ಎಚ್ಚರಿಸಿದರು ಎಂಬ ವರದಿಗಳನ್ನು ನಂಬಲು ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗೆ ರಾಜ್ಯದಲ್ಲಿನ ಪ್ರತಿ ಚಟುವಟಿಕೆಗಳ ಮಾಹಿತಿ ಪೊಲೀಸ್ ಗುಪ್ತ ಚರ ವಿಭಾಗದ ಮೂಲಕ ನೇರವಾಗಿ ತಲಪುತ್ತದೆ.
ಈ ವಿಭಾಗದ ಮುಖ್ಯಸ್ಥರ ಹುದ್ದೆಯಲ್ಲಿ ಮುಖ್ಯಮಂತ್ರಿಗೆ ನಂಬಿಕಸ್ಥರಾದ ಮತ್ತು ನಿಷ್ಠರಾದ ಹಿರಿಯ ಪೊಲೀಸ್ ಅಧಿಕಾರಿ ಇರುತ್ತಾರೆ. ಇದಲ್ಲದೇ ಮುಖ್ಯಮಂತ್ರಿಗೆ ತಮ್ಮದೇ ಆದ ಪ್ರತ್ಯೇಕ ನಂಬಿಕಸ್ಥ ಖಾಸಗಿ ಬಾತ್ಮೀದಾರರ ಪಡೆಯೂ ಇರುತ್ತದೆ.
ಹೀಗಿರುವಾಗ ಕೆಲವು ಸಚಿವರು ಆಗಾಗ್ಗೆ ಸಭೆ ಸೇರಿ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆಗಳನ್ನು ನಡೆಸುವ ವಿಚಾರ ಸಿದ್ದರಾಮಯ್ಯ ಅವರಿಗೆ ಗೊತ್ತೇ ಇಲ್ಲ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ. ಹಾಗಿದ್ದೂ ಅದನ್ನು ಅವರು ನಿರ್ಲಕ್ಷಿಸಿದರೆ? ಎಂಬ ಪ್ರಶ್ನೆಗೆ ಸಿಗುವ ಉತ್ತರ ಎಂಥದೇ ಸಂದರ್ಭದಲ್ಲಿ ತಮ್ಮ ಕುರ್ಚಿಗೆ ಮತ್ತೊಬ್ಬ ಪ್ರತಿ ಸ್ಪರ್ಧಿ ಎದುರಾಗದಂತೆ ನೋಡಿಕೊಳ್ಳುವ ಮತ್ತು ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸುವ ಗುರಿ ಅವರದ್ದು.
ಸಂಪುಟ ಸಭೆಯಲ್ಲಿ ಆಪ್ತ ಸಚಿವರಿಗೆ ಅವರು ಏನೇ ಎಚ್ಚರಿಕೆ ನೀಡಿರಲಿ ಅದೊಂದು ಪ್ರಾಯೋಜಿತ ಮತ್ತು ವ್ಯವಸ್ಥಿತ ರಾಜಕೀಯ ನಾಟಕ ಎಂಬುದನ್ನು ಕಾಂಗ್ರೆಸ್ ನ ನಾಯಕರೂ ಒಪ್ಪುತ್ತಾರೆ.

ಹೈಕಮಾಂಡ್ ಮಟ್ಟದಲ್ಲಿ ಆಗಿದೆ ಎಂದು ಹೇಳಲಾಗುತ್ತಿರುವ ಒಪ್ಪಂದದ ಪ್ರಕಾರ ಮುಂದಿನ ಮೇ ತಿಂಗಳಿಗೆ ಸರ್ಕಾರಕ್ಕೆ ಎರಡು ವರ್ಷ ತುಂಬಲಿದೆ. ಆ ಸಂದರ್ಭದಲ್ಲಿ ರಾಜೀನಾಮೆ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ದರಾಮಯ್ಯ ಸಹಕರಿಸಬೇಕು. ಆದರೆ ಇದಕ್ಕೆ ಸಿದ್ದರಾಮಯ್ಯ ತಯಾರಿಲ್ಲ. ಈ ಒಪ್ಪಂದದ ಬಗ್ಗೆ ಹೈಕಮಾಂಡ್ ಕೂಡಾ ಬಾಯಿ ಬಿಡುತ್ತಿಲ್ಲ. ಸತೀಶ್ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿರುವ ಸಚಿವರನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಅಸ್ತ್ರವಾಗಿ ಸಿದ್ದರಾಮಯ್ಯ ಬಳಸಿಕೊಳ್ಳುತ್ತಿದ್ದಾರೆ ಎಂಬುದೂ ಕಾಂಗ್ರೆಸ್ ನ ಬೆಳವಣಿಗೆಗಳ ಆಳಕ್ಕಿಳಿದು ನೋಡಿದರೆ ಗೋಚರವಾಗುತ್ತದೆ.
ಈ ಸೂಕ್ಷ್ಮ ಅರಿತಿರುವ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ದಿಢೀರನೆ ದಿಲ್ಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಕಂಡು ಸಚಿವರ ಈ ಗುಪ್ತ ಸಭೆಗಳ ಬಗ್ಗೆ ಸಂಫೂರ್ಣ ವಿವರ ನೀಡಿದ್ದಲ್ಲದೇ, ``ಇದು ಸಿದ್ದರಾಮಯ್ಯ ಅವರ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಇದನ್ನು ತಡೆಯದೇ ಇದ್ದರೆ ಮುಂದೆ ಕಷ್ಟ’’ ಎಂಬ ಎಚ್ಚರಿಕೆಯ ಮಾತುಗಳನ್ನೂ ಸೂಕ್ಷ್ಮವಾಗೇ ಹೇಳಿದ್ದಾರೆ. ದಿಲ್ಲಿಯಿಂದ ಅವರು ಮರಳಿದ ನಂತರ ಖರ್ಗೆಯವರೇ ನೇರವಾಗಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಸಚಿವರ ಸಭೆಗಳ ಬಗ್ಗೆ ಗೊತ್ತಿದ್ದೂ ಸುಮ್ಮನಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕೂಡಲೇ ಇದನ್ನು ತಡೆಯದಿದ್ದರೆ ನಾವೇ ನೇರವಾಗಿ ರಂಗಕ್ಕಿಳಿಯಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
"ಸಚಿವರ ಸಭೆಗಳ ಬಗ್ಗೆ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು ಇದು ಹೀಗೇ ಮುಂದುವರಿಯಲು ನೀವು ಬಿಟ್ಟರೆ ನಾಳೆ ಒಕ್ಕಲಿಗರೂ ಸೇರಿದಂತೆ ಇತರ ಜಾತಿಯ ಸಚಿವರೂ ಇಂತಹ ಸಭೆಗಳನ್ನು ನಡೆಸಬಹುದು. ಒಮ್ಮೆ ಇಂತಹ ಜಾತಿವಾರು ಸಚಿವರ ಸಭೆಗಳು ಹೆಚ್ಚಾದರೆ ನಾಳೆ ನಿಮಗೇ ಸಮಸ್ಯೆ ಆಗಬಹುದು. ಅದೇನಾದರೂ ಅತಿರೇಕಕ್ಕೆ ಹೋದರೆ ನಾನೂ ಕೂಡಾ ಅಸಹಾಯಕನಾಗುವ ಪರಿಸ್ಥಿತಿ ಬರಬಹುದು. ನಾನಂತೂ ನಿಮ್ಮ ಬೆಂಬಲಕ್ಕೆ ನಿಂತಿದ್ದೇನೆ. ಆದರೆ ಮುಂದೆ ಪರಿಸ್ಥಿತಿಗಳು ಹೀಗೇ ಮುಂದುವರಿದರೆ ಅದರ ಜವಾಬ್ದಾರಿ ನೀವೇ ಹೊರಬೇಕಾಗುತ್ತದೆ. ವರಿಷ್ಠರೂ ಈ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ’’ ಎಂದೂ ಎಚ್ಚರಿಸಿದ್ದಾರೆ. ಇದಾದ ನಂತರ ಸಚಿವ ಸಂಪುಟದ ಸಭೆಯಲ್ಲಿ ತಮ್ಮ ಆಪ್ತ ಸಚಿವರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಜಾತಿ ಗಣತಿ ವರದಿ ಮುಂದಿನ ವಾರ ಸಚಿವ ಸಂಪುಟ ಸಭೆಯ ಮುಂದೆ ಚರ್ಚೆಗೆ ಬರಲಿದೆ.ಅದರಲ್ಲಿನ ಅಂಶಗಳು ಪೂರ್ಣವಾಗಿ ಬಹಿರಂಗವಾಗಿಲ್ಲವಾದರೂ ವರದಿ ವಿರುದ್ಧ ಪ್ರಬಲ ಸಮುದಾಯಗಳಾದ ಲಿಂಗಾಯಿತರು ಮತ್ತು ಒಕ್ಕಲಿಗರು ಧ್ವನಿ ಎತ್ತಿದ್ದಾರೆ. ಸಿದ್ದರಾಮಯ್ಯ ಅವರೇನೋ ವರದಿ ಜಾರಿಗೊಳಿಸುವ ಮೂಲಕ ತಾನು ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕ ಎಂಬ ಪಟ್ಟ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ಆ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಶಾಸಕರ ಸಭೆಗಳನ್ನೂ ನಡೆಸಿದ್ದಾರೆ. ಆದರೆ ಅಧಿಕಾರವೇ ಪ್ರಧಾನವಾಗಿರುವ ರಾಜ್ಯ ರಾಜಕಾರಣದಲ್ಲಿ ತಮ್ಮ ನಿಲುವಿಗೇ ಅಂಟಿಕೊಂಡರೆ ಎಷ್ಟು ಮಂದಿ ಶಾಸಕರು ಅವರನ್ನು ಬೆಂಬಲಿಸುತ್ತಾರೆ ಎಂಬುದು ಸದ್ಯಕ್ಕೆ ಪ್ರಶ್ನೆಯಾಗೇ ಉಳಿದಿದೆ.
ಮೂಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಸದ್ಯ ನಿವೇಶನಗಳನ್ನು ಕಡೆಗೂ ವಾಪಸು ನೀಡಿದ್ದಾರೆ ಎಂಬುದೇನೋ ನಿಜ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ಅದೊಂದು ಸಮಸ್ಯೆ ಆಗಬಹುದು. ಕಾನೂನೂ ಹೊರಾಟವನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮನೋ ಸ್ಥಿತಿಯಲ್ಲಿ ಇಲ್ಲ.
"ಮೂರನೆಯವರ ಕೈಲಿ ಕೋಲು ಕೊಟ್ಟು ಎದುರಿಗಿದ್ದವನಿಗೆ ಹೊಡೆಸಿದರು" ಎಂಬುದೊಂದು ಗಾದೆ ಮಾತು ಚಾಲ್ತಿಯಲ್ಲಿದೆ. ಡಿ.ಕೆ.ಶಿವಕಮಾರ್ ಇದೇ ತಂತ್ರ ಅನುಸರಿಸಿದ್ದಾರೆ. ಹೈಕಮಾಂಡ್ ನ ಎಚ್ಚರಿಕೆಯ ಸೂಚನೆಯನ್ನು ಸಿದ್ದರಾಮಯ್ಯ ಅವರ ಮೂಲಕವೇ ಬಹಿರಂಗವಾಗೇ ಅವರ ಆಪ್ತ ಸಚಿವರಿಗೆ ಹೇಳಿಸಿ, ತಾನು ಮೌನವಾಗಿರುವ ಮೂಲಕ ಸಂಪುಟ ಸಭೆಯಲ್ಲಿ 'ನಿಗೂಢ ಜಾಣತನ' ಮೆರೆದಿದ್ದಾರೆ. ಅವರ ತಂತ್ರ ಫಲ ಕೊಟ್ಟಿದೆ. ಮುಂದಿನದನ್ನು ಕಾದು ನೋಡಬೇಕು.
Advertisement