Employees Provident Fund: EPF ಕುರಿತು ನೀವು ತಿಳಿಯಬೇಕಿರುವ ಪೂರ್ಣ ವಿವರ ಇಲ್ಲಿದೆ... (ಹಣಕ್ಲಾಸು)

ನಿವೃತ್ತಿ ನಂತರದ ಕಥೆಯೇನು? ಪೆನ್ಷನ್ ಕೂಡ ಇಲ್ಲದ ಮೇಲೆ ಮುಂದಿನ ಬದುಕನ್ನು ಸಾಗಿಸುವುದು ಹೇಗೆ? ಹೀಗಾಗಿ ಕೇಂದ್ರ ಸರಕಾರ ನವೆಂಬರ್ 15,1951 ರಿಂದ EPF ನ್ನು ಜಾರಿಗೆ ತಂದಿದೆ.
EPFO
ಇಪಿಎಫ್ಒonline desk
Updated on

ನೀವು ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ EPF ಅಥವಾ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಎನ್ನುವ ಪದವನ್ನು ಕೇಳದೆ ಇರಲು ಸಾಧ್ಯವಿಲ್ಲ. ಭಾರತದಲ್ಲಿ ಬಹುತೇಕರಿಗೆ ಪೆನ್ಷನ್ ಎನ್ನುವುದು ಇಲ್ಲ. ಇದರ ಜೊತೆಗೆ ಮೂಲಭೂತ ಸೌಕರ್ಯ ಎನ್ನಿಸಿಕೊಂಡಿರುವ ವೈದ್ಯಕೀಯ ಸೌಲಭ್ಯ ಮತ್ತು ಶಿಕ್ಷಣ ಕೂಡ ಇಲ್ಲಿ ದುಬಾರಿ. ಇದರರ್ಥ ನಮ್ಮಲ್ಲಿ ಸೋಶಿಯಲ್ ಸೆಕ್ಯುರಿಟಿ ಎನ್ನುವ ಕಾನ್ಸೆಪ್ಟ್ ಇಲ್ಲ. ಕೆಲಸ ಮಾಡುವ ಸಮಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮೆಡಿಕಲ್ ಇನ್ಶೂರೆನ್ಸ್ ನೀಡಿರುತ್ತವೆ. ನಿವೃತ್ತಿ ನಂತರದ ಕಥೆಯೇನು? ಪೆನ್ಷನ್ ಕೂಡ ಇಲ್ಲದ ಮೇಲೆ ಮುಂದಿನ ಬದುಕನ್ನು ಸಾಗಿಸುವುದು ಹೇಗೆ? ಹೀಗಾಗಿ ಕೇಂದ್ರ ಸರಕಾರ ನವೆಂಬರ್ 15,1951 ರಿಂದ ಇದನ್ನು ಜಾರಿಗೆ ತಂದಿದೆ.

ಏನಿದು EPF?

ಸರಕಾರ ಕಡ್ಡಾಯವಾಗಿ ಉಳಿಸಬೇಕು ಎಂದು ಜಾರಿಗೆ ತಂದಿರುವ ಯೋಜನೆಯಿದು. ಯಾವುದೇ ವಲಯದಲ್ಲಿ ಕೆಲಸ ಮಾಡುವ ಕೆಲಸಗಾರರ ಬೇಸಿಕ್ ಸ್ಯಾಲರಿ 15 ಸಾವಿರ ರೂಪಾಯಿ ತನಕವಿದೆ ಆ ಎಲ್ಲಾ ನೌಕರರು ತಮ್ಮ ಬೇಸಿಕ್ ಮತ್ತು ಡಿಯರ್ನೆಸ್ ಅಲ್ಲೋವನ್ಸ್(DA)ನ 12 ಪ್ರತಿಶತ ಹಣವನ್ನು ವೇತನದಲ್ಲಿ ಕಡಿತಗೊಳಿಸಿ ಈ ಪಿ ಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದು ಕಡ್ಡಾಯ. ಯಾರಿಗೆಲ್ಲಾ 15 ಸಾವಿರಕ್ಕಿಂತ ಹೆಚ್ಚಿನ ವೇತನವಿದೆ ಅವರಿಗೆ ಇದು ಕಡ್ಡಾಯವಲ್ಲ. ಬೇಕಿದ್ದಲ್ಲಿ ಇದನ್ನು ಮಾಡಬಹುದು. ಯಾವ ಸಂಸ್ಥೆಯಲ್ಲಿ 20 ಜನಕ್ಕಿಂತ ಹೆಚ್ಚಿನ ನೌಕರರು ಇದ್ದು ಅವರ ಸಂಬಳ ಮಾಸಿಕ 15 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ ಆ ಸಂಸ್ಥೆಗಳು ನೊಂದಾಯಿಸಿಕೊಳ್ಳುವುದು ಕಡ್ಡಾಯ. 20 ಕ್ಕಿಂತ ಕಡಿಮೆ ಇದ್ದವರು ಕೂಡ ನೋಂದಾಯಿಸಿ ಕೊಳ್ಳುವ ಅವಕಾಶವಿದೆ.

ಈ ರೀತಿ ಇದನ್ನು ಕಡ್ಡಾಯ ಮಾಡಿರುವ ಉದ್ದೇಶ ಬಹಳ ಸರಳ. ಒಬ್ಬ ವ್ಯಕ್ತಿ 25 ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದರೂ 60 ಕ್ಕೆ ನಿವೃತ್ತಿ ಹೊಂದುವ ಸಮಯದಲ್ಲಿ 35 ವರ್ಷ ಉಳಿತಾಯ ಮಾಡಿರುತ್ತಾನೆ. 35 ವರ್ಷದಲ್ಲಿ ಹೀಗೆ ಜಮಾ ಆದ ಹಣ ಉತ್ತಮ ಮೊತ್ತವಾಗಿರುತ್ತದೆ. ಹೀಗಾಗಿ ಅಂದಿನ ದಿನದಲ್ಲಿ ಅದು ನಿವೃತ್ತಿ ಜೀವನಕ್ಕೆ ಆಧಾರವಾಗುತ್ತದೆ. ಈ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಅಲ್ಲದೆ ಕೆಲಸಗಾರನಿಗೆ ಹಣ ವೇತನದಲ್ಲಿ ಕಡಿತವಾಗಿ ಸಿಗುವುದರಿಂದ ಇದು ಆತನ ಗಮನಕ್ಕೆ ಬರದೆ ಉಳಿತಾಯವಾಗುತ್ತದೆ. ಹಾಗೊಮ್ಮೆ ಈ ರೀತಿಯ ಕಡಿತವಾಗದೆ ಹಣ ಸಿಕ್ಕಿದ್ದರೆ ಅದನ್ನು 35 ವರ್ಷಗಳಷ್ಟು ಸುದೀರ್ಘ ಸಮಯ ಉಳಿಸುವುದು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಸೋಶಿಯಲ್ ಸೆಕ್ಯುರಿಟಿ ಇಲ್ಲದ ನಮ್ಮ ದೇಶದಲ್ಲಿ ಇದೊಂದು ವರದಾನ.

1995 ರಿಂದ ಯಾರೆಲ್ಲಾ EPF ನಲ್ಲಿ ಹಣ ತೊಡಗಿಸಲು ಅರ್ಹರಾಗಿದ್ದರು ಅವರಿಗೆ EPS ಅಂದರೆ ಎಂಪ್ಲಾಯೀಸ್ ಪೆನ್ಷನ್ ಸ್ಕೀಮ್ನ್ನು ಕೂಡ ಅಳವಡಿಸಿದೆ. ಉದಾಹರಣೆ ನೋಡೋಣ.

ಬೇಸಿಕ್ ಸ್ಯಾಲರಿ 15 ಸಾವಿರ ಇದ್ದಾಗ:

ಬೇಸಿಕ್ ಸ್ಯಾಲರಿ 15,000 ಪ್ಲಸ್ ಡಿಎ 3000 ಇದ್ದಾಗ ಒಟ್ಟು ಹಣ 18,000 ಇದರ ಮೇಲೆ 12 ಪ್ರತಿಶತ ಎಂದರೆ 2160 ರೂಪಾಯಿಯನ್ನು ಕಡಿತಗೊಳಿಸಲಾಗುತ್ತದೆ. ಇದಕ್ಕೆ ಮಾಲೀಕ ಕೂಡ 12 ಪ್ರತಿಶತ ಹಣವನ್ನು ನೀಡಲು ಒಪ್ಪಬಹುದು. ಅಥವಾ ಆತ ಕೇವಲ 15 ಸಾವಿರದ ಮೇಲೆ ಮಾತ್ರ 12 ಪ್ರತಿಶತ ನೀಡಲು ಒಪ್ಪಬಹುದು. ಆತ ಪೂರ್ಣ ಹಣದ ಮೇಲೆ ನೀಡಲು ಒಪ್ಪಿದರೆ ಆಗ ಒಟ್ಟು 2160 ಪ್ಲಸ್ 2160 ಸೇರಿ 4320/- ರೂಪಾಯಿಯನ್ನು ಇPಈ ಖಾತೆಗೆ ಜಮಾ ಮಾಡಲಾಗುತ್ತದೆ.

ಬೇಸಿಕ್ ಸ್ಯಾಲರಿ 15 ಸಾವಿರಕ್ಕಿಂತ ಕಡಿಮೆ ಇದ್ದಾಗ:

ಬೇಸಿಕ್ ಸ್ಯಾಲರಿ 9000 ಸಾವಿರ ರೂಪಾಯಿ ಎಂದುಕೊಳ್ಳೋಣ. ಆಗ ಕೆಲಸಗಾರನ ಸಂಬಳದಿಂದ 12 ಪ್ರತಿಶತ ಅಂದರೆ 1080 ರೂಪಾಯಿ ಕಡಿತವಾಗುತ್ತದೆ. ಮತ್ತು ಮಾಲೀಕ ಕೂಡ ಇಷ್ಟೇ ಹಣವನ್ನು ನೀಡುತ್ತಾನೆ. ಆದರೆ EPF ಖಾತೆಗೆ ಜಮಾ ಆಗುವುದು ಕೇವಲ 3.67 ಪ್ರತಿಶತ ಮಾತ್ರ. ಉಳಿದ 8.33 ಪ್ರತಿಶತ ಹಣವನ್ನು ಇಪಿಎಸ್ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮಗೆ ಗೊತ್ತಿರಲಿ ಸಂಬಳ ಎಷ್ಟೇ ಇರಲಿ ಇಪಿಎಸ್ ನಲ್ಲಿ 15 ಸಾವಿರದ ಮೇಲೆ 8.33 ಪ್ರತಿಶತ ಮಾತ್ರ ದೇಣಿಗೆ ನೀಡಲು ಸಾಧ್ಯ. ಅಂದರೆ ಮಾಸಿಕ 1250 ರೂಪಾಯಿಗಿಂತ ಹೆಚ್ಚಿನ ಹಣವನ್ನು ಇಪಿಎಸ್ ನಲ್ಲಿ ಹೂಡಲು ಸಾಧ್ಯವಿಲ್ಲ.

ಹೀಗಾಗಿ ಈ ನಿದರ್ಶನದಲ್ಲಿ:

EPF ಖಾತೆಗೆ ಎಂಪ್ಲಾಯೀ ಹಣ 1080 ಮತ್ತು ಎಂಪ್ಲಾಯರ್ ಹಣ 330 ಸೇರಿ ಒಟ್ಟು 1410 ರೂಪಾಯಿ ಜಮಾ ಆಗುತ್ತದೆ. ಎಪಿಎಸ್ ಖಾತೆಗೆ 9000 ರ ರೂಪಾಯಿಯ 8. 33 ಪ್ರತಿಶತ ಅಂದರೆ 750 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ. ಒಟ್ಟಾರೆ 9000 ಸಾವಿರದ ಮೇಲೆ 12 ಪ್ಲಸ್ 12 ಪ್ರತಿಶತ ಸೇರಿ 2160 ರೂಪಾಯಿ ಉಳಿತಾಯವಾಯ್ತು. ಅದರಲ್ಲಿ EPF ಖಾತೆಗೆ 1410 ಮತ್ತು EPS ಖಾತೆಗೆ 750 ಜಮಾ ಆಗುತ್ತದೆ. ಈ ರೀತಿ ಮಾಡುವುದರ ಉದ್ದೇಶ ಹತ್ತು ವರ್ಷಕ್ಕಿಂತ ಹೆಚ್ಚು ಇಪಿಎಸ್ ಖಾತೆಗೆ ಹಣ ಜಮಾ ಆಗಿದ್ದಾಗ ಆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಅದು ಪೆನ್ಷನ್ ಫಂಡ್ ಎನ್ನಿಸಿಕೊಳ್ಳುತ್ತದೆ. ಹತ್ತು ವರ್ಷಕ್ಕಿಂತ ಕಡಿಮೆ ಸಮಯ ಅದರಲ್ಲಿ ಉಳಿಸಿ ತಿಂಗಳಿಗಿಂತ ಹೆಚ್ಚಿನ ಅವಧಿ ಕೆಲಸವಿಲ್ಲ ಎಂದಾಗ ಈ ಹಣವನ್ನು ಹಿಂಪಡೆಯಲು ಸಾಧ್ಯಾವಿದೆ.

ಬೇಸಿಕ್ ಸ್ಯಾಲರಿ 15 ಸಾವಿರಕ್ಕಿಂತ ಹೆಚ್ಚಿದಾಗ:

ಬೇಸಿಕ್ ಸ್ಯಾಲರಿ 20 ಸಾವಿರ ಎಂದುಕೊಳ್ಳೋಣ. ಈ ಸನ್ನಿವೇಶದಲ್ಲಿ ಕೆಲಸಗಾರ 12 ಪ್ರತಿಶತ ಅಂದರೆ 2400 ರೂಪಾಯಿ ಉಳಿಸಬಹುದು. ಆದರೆ ಮಾಲೀಕನಿಗೆ 20 ಸಾವಿರದ ಮೇಲೆ 12 ಪ್ರತಿಶತ ನೀಡಬೇಕು ಎನ್ನುವ ನಿಯಮವಿಲ್ಲ. ಕಡ್ಡಾಯವಿರುವುದು 15 ಸಾವಿರದವರೆಗೆ ಮಾತ್ರ ಹೀಗಾಗಿ ಆತ 15 ಸಾವಿರದ ಮೇಲೆ 12 ಪ್ರತಿಶತ ಅಂದರೆ 1800 ರೂಪಾಯಿ ನೀಡಿದರೆ ಸಾಕು. ಇದರಲ್ಲಿ 8.33 ಪ್ರತಿಶತ ಹಣವನ್ನುಅಂದರೆ 1250 ರೂಪಾಯಿಯನ್ನು ಇಪಿಎಸ್ ಖಾತೆಗೆ ಹಾಕಲಾಗುತ್ತದೆ, ಉಳಿದ 550 ರೂಪಾಯಿ ಇPಈ ಖಾತೆಗೆ ಹಾಕಲಾಗುತ್ತದೆ. ಹಾಗೊಮ್ಮೆ ಮಾಲೀಕ 20 ಸಾವಿರದ ಮೇಲೆ 12 ಪ್ರತಿಶತ ಕೊಡಲು ಒಪ್ಪಿದರೆ ಆಗ 20 ಸಾವಿರದ 8.33 ಪ್ರತಿಶತ ಹಣ 1666 ರೂಪಾಯಿ ಆಗುತ್ತದೆ. ಆದರೆ ಎಪಿಎಸ್ ಖಾತೆಗೆ ಗರಿಷ್ಟ ಮೊತ್ತ 1250 ರೂಪಾಯಿ ಮಾತ್ರ ಹಾಕಲು ಸಾಧ್ಯ. ಹೀಗಾಗಿ 1250 ರೂಪಾಯಿ ಇಪಿಎಸ್ ಖಾತೆಗೆ ಹಾಕಿ ಉಳಿದ 1150 ರೂಪಾಯಿ ಇಪಿಎಫ್ ಖಾತೆಗೆ ಕೆಲಸಗಾರನ ಹಣವನ್ನು ಸೇರಿಸಿ ಹಾಕಲಾಗುವುದು.

ಸೆಪ್ಟೆಂಬರ್ 1, 2014 ರ ಮೇಲ ಕೆಲಸಕ್ಕೆ ಸೇರಿದ ಮತ್ತು ಮಾಸಿಕ ವೇತನ ಮತ್ತು ಡಿಎ 15 ಸಾವಿರಕ್ಕೂ ಮೇಲ್ಪಟ್ಟಿದ್ದರೆ ಆಗ ಅಂತಹ ಕೆಲಸಗಾರರನ್ನು ಇಪಿಎಸ್ ಯೋಜನೆಗೆ ಅರ್ಹರಲ್ಲ ಎಂದು ಹೇಳಾಗಿದೆ. ಹೀಗಾಗಿ ಪೂರ್ಣ ಹಣವನ್ನು EPF ಖಾತೆಗೆ ಹಾಕಲಾಗುತ್ತದೆ. 2021-22 ರಿಂದ ಇಲ್ಲಿ ವಾರ್ಷಿಕ ಎರಡೂವರೆ ಲಕ್ಷ ರೂಪಾಯಿ ಮೇಲಿನ ಬಡ್ಡಿಯನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಹಣವನ್ನು ಹೂಡಿದರೆ ಅದರ ಮೇಲಿನ ಬಡ್ಡಿಯನ್ನು ತೆರಿಗೆ ಲೆಕ್ಕಾಚಾರಕ್ಕೆ ತೆಗೆದುಕೊಳ್ಳಲಾಗುತ್ತದೆ. ಮತ್ತು ಆ ಮೊತ್ತದ ಮೇಲೆ ಟಿಡಿಎಸ್ ಕೂಡ ಮಾಡಲಾಗುತ್ತದೆ. ಅಂದರೆ ವಾರ್ಷಿಕ ಹೂಡಿಕೆ 3 ಲಕ್ಷವಿದ್ದಾಗ 2. 5 ಲಕ್ಷ ಕ್ಕೆ ತೆರಿಗೆ ವಿನಾಯತಿ ಇರುತ್ತದೆ. ಉಳಿದ 50 ಸಾವಿರದ ಮೇಲೆ ಬಂದ ಬಡ್ಡಿ ತೆರಿಗೆ ಲೆಕ್ಕಕ್ಕೆ ಬರುತ್ತದೆ. ಮತ್ತು ಇದರ ಮೇಲೆ 10 ಪ್ರತಿಶತ ಟಿಡಿಎಸ್ ಕೂಡ ಮಾಡಲಾಗುತ್ತದೆ.

ಅಂದರೆ ವಾರ್ಷಿಕ ಹೂಡಿಕೆ 3 ಲಕ್ಷವಿದ್ದಾಗ 2.5 ಲಕ್ಷ ಕ್ಕೆ ತೆರಿಗೆ ವಿನಾಯತಿ ಇರುತ್ತದೆ. ಉಳಿದ 50 ಸಾವಿರದ ಮೇಲೆ ಬಂದ ಬಡ್ಡಿ ತೆರಿಗೆ ಲೆಕ್ಕಕ್ಕೆ ಬರುತ್ತದೆ. ಮತ್ತು ಇದರ ಮೇಲೆ 10 ಪ್ರತಿಶತ ಟಿಡಿಎಸ್ ಕೂಡ ಮಾಡಲಾಗುತ್ತದೆ.

VPF, ವಾಲಂಟರಿ ಪ್ರಾವಿಡೆಂಟ್ ಫಂಡ್ ಎಂದರೆ ಹೆಸರೇ ಹೇಳುವಂತೆ ವಾಲಂಟರಿ ಅಂದರೆ ಸ್ವ ಇಚ್ಚೆಯಿಂದ 12 ಪ್ರತಿಶತಕ್ಕಿಂತ ಹೆಚ್ಚಿನ ಹಣವನ್ನು ಕೆಲಸಗಾರರು ಉಳಿಸಬಹುದು. ಆದರೆ ಎಂಪ್ಲಾಯರ್ ಹೆಚ್ಚಿನ ದೇಣಿಗೆಯನ್ನು ನೀಡುವುದಿಲ್ಲ. ಅಂದರೆ ಒಬ್ಬ ಕೆಲಸಗಾರ ಇಚ್ಛಿಸಿದರೆ 12 ಕ್ಕಿಂತ ಹೆಚ್ಚು 24 , 50 ಪ್ರತಿಶತ ಹಣವನ್ನು ಕೂಡ ಉಳಿಸಬಹುದು. ಗರಿಷ್ಟ ಬೇಸಿಕ್ ಸ್ಯಾಲರಿ ಮತ್ತು ಡಿಎ ಯ ನೂರು ಪ್ರತಿಶತವನ್ನು ಇಲ್ಲಿ ಉಳಿಸುವ ಅವಕಾಶವಿದೆ. EPF ನಲ್ಲಿ ಉಳಿಸಿದ 12 ಪ್ರತಿಶತ ಹಣಕ್ಕೆ ಯಾವ ಬಡ್ಡಿ ಸಿಗುತ್ತದೆ ಅದೇ ಬಡ್ಡಿ ಈ ಉಳಿಕೆಯ ಮೇಲೂ ಸಿಗುತ್ತದೆ. ಒಟ್ಟಾರೆ ಮೂಲ ವೇತನ 20 ಸಾವಿರ ಡಿಎ 5 ಸಾವಿರ ಎಂದುಕೊಂಡರೆ EPF 12 ಪ್ರತಿಶತ ಮತ್ತು ಉಳಿದ 88 ಪ್ರತಿಶತ ಹಣವನ್ನು VPF ಮೂಲಕ ಉಳಿಸಬಹುದು. ಒಟ್ಟು ಉಳಿಕೆ ಹಣ ಈ ಉದಾಹರಣೆಯಲ್ಲಿ 25 ಸಾವಿರ ಮೀರುವಂತಿಲ್ಲ.

EPFO
ನೌಕರರಿಗೆ ಸಿಹಿಸುದ್ದಿ: EPFO ಬಡ್ಡಿ ದರ ಶೇ.8.25ಕ್ಕೆ ಏರಿಕೆ, 3 ವರ್ಷಗಳಲ್ಲೇ ಗರಿಷ್ಠ

VPF , ವಾಲಂಟರಿ ಪ್ರಾವಿಡೆಂಟ್ ಫಂಡ್ ಎಂದರೆ ಹೆಸರೇ ಹೇಳುವಂತೆ ವಾಲಂಟರಿ ಅಂದರೆ ಸ್ವ ಇಚ್ಚೆಯಿಂದ 12 ಪ್ರತಿಶತಕ್ಕಿಂತ ಹೆಚ್ಚಿನ ಹಣವನ್ನು ಕೆಲಸಗಾರರು ಉಳಿಸಬಹುದು. ಆದರೆ ಎಂಪ್ಲಾಯರ್ ಹೆಚ್ಚಿನ ದೇಣಿಗೆಯನ್ನು ನೀಡುವುದಿಲ್ಲ. ಅಂದರೆ ಒಬ್ಬ ಕೆಲಸಗಾರ ಇಚ್ಛಿಸಿದರೆ 12 ಕ್ಕಿಂತ ಹೆಚ್ಚು 24 , 50 ಪ್ರತಿಶತ ಹಣವನ್ನು ಕೂಡ ಉಳಿಸಬಹುದು. ಗರಿಷ್ಟ ಬೇಸಿಕ್ ಸ್ಯಾಲರಿ ಮತ್ತು ಡಿಎ ಯ ನೂರು ಪ್ರತಿಶತವನ್ನು ಇಲ್ಲಿ ಉಳಿಸುವ ಅವಕಾಶವಿದೆ. EPF ನಲ್ಲಿ ಉಳಿಸಿದ 12 ಪ್ರತಿಶತ ಹಣಕ್ಕೆ ಯಾವ ಬಡ್ಡಿ ಸಿಗುತ್ತದೆ ಅದೇ ಬಡ್ಡಿ ಈ ಉಳಿಕೆಯ ಮೇಲೂ ಸಿಗುತ್ತದೆ. ಒಟ್ಟಾರೆ ಮೂಲ ವೇತನ 20 ಸಾವಿರ ಡಿಎ 5 ಸಾವಿರ ಎಂದುಕೊಂಡರೆ EPF 12 ಪ್ರತಿಶತ ಮತ್ತು ಉಳಿದ 88 ಪ್ರತಿಶತ ಹಣವನ್ನು VPF ಮೂಲಕ ಉಳಿಸಬಹುದು. ಒಟ್ಟು ಉಳಿಕೆ ಹಣ ಈ ಉದಾಹರಣೆಯಲ್ಲಿ 25 ಸಾವಿರ ಮೀರುವಂತಿಲ್ಲ.

ಇಲ್ಲಿ ಹಣವನ್ನು ಉಳಿಸುವ ಪ್ರತಿಯೊಬ್ಬ ಕೆಲಸಗಾರರೂ ತಿಳಿದುಕೊಂಡಿರಬೇಕಾದ ಅಂಶಗಳು ಹೀಗಿವೆ:

  1. ಇಲ್ಲಿ ಉಳಿಸಿರುವ ಹಣವನ್ನು ಸೆಕ್ಷನ್ 80ಸಿ ಅಡಿಯಲ್ಲಿ ಕ್ಲೇಮ್ ಮಾಡಬಹುದು. ಹೊಸ ಟ್ಯಾಕ್ಸ್ ರಿಜಿಮ್ ಬಳಸಿದವರಿಗೆ ಈ ಸೌಲಭ್ಯ ಇರುವುದಿಲ್ಲ.

  2. ವೈದ್ಯಕೀಯ ಕಾರಣ, ಮನೆ ಕಟ್ಟುವುದು, ಸಾಲ ಮರುಪಾವತಿಗೆ ಅಥವಾ ಬೇರೆ ತುರ್ತು ಪರಿಸ್ಥಿತಿಯಲ್ಲಿ ಇಲ್ಲಿನ ಹಣವನ್ನು ವಾಪಸ್ಸು ಪಡೆಯಬಹುದು.

  3. ವೈದ್ಯಕೀಯ ಕಾರಣವಲ್ಲದೆ ಬೇರಾವ ಕಾರಣಕ್ಕೂ ಖಾತೆ ಶುರುವಾಗಿ ಐದು ವರ್ಷಕ್ಕೆ ಮುಂಚೆ ಹಣವನ್ನು ತೆಗೆಯಲು ಬರುವುದಿಲ್ಲ.

  4. ಖಾತೆ ಆಕ್ಟಿವ್ ಆಗಿ 7 ವರ್ಷವಾಗಿದ್ದರೆ ಖಾತೆಯಲ್ಲಿ ಜಮಾ ಆಗಿರುವ ಹಣದ 50 ಪ್ರತಿಶತ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ತೆಗೆಯುವ ಅವಕಾಶವಿದೆ.

  5. ಖಾತೆದಾರನ ವಯಸ್ಸು 54 ಆಗಿದ್ದು ಇನ್ನೂ ಸರ್ವಿಸ್ ಇದ್ದು, ಕೆಲಸ ಮಾಡುತ್ತಿದ್ದರೂ ಕೂಡ 90 ಪ್ರತಿಶತದ ವರೆಗೆ ಜಮಾ ಆಗಿರುವ ಹಣವನ್ನು ತೆಗೆದುಕೊಳ್ಳಬಹುದು.

  6. ಕೆಲಸ ಮಾಡುತ್ತಿದ್ದ ಸಂಸ್ಥೆ 15 ದಿನಕ್ಕಿಂತ ಹೆಚ್ಚು ಸಮಯ ಮುಚ್ಚಿ ಹೋದರೆ ಅಥವಾ ಎರಡು ತಿಂಗಳಿಗೂ ಹೆಚ್ಚು ಸಮಯ ಸಂಬಳ ನೀಡದಿದ್ದಾಗ ಪೂರ್ಣ ಹಣವನ್ನು ಅಂದರೆ 100 ಪ್ರತಿಶತ ಹಣವನ್ನು ವಾಪಸ್ಸು ಪಡೆದುಕೊಳ್ಳಬಹುದು.

  7. ಮಹಿಳಾ ಕಾರ್ಮಿಕರು ರಾಜೀನಾಮೆ ನೀಡಿ ಮದುವೆಯಾಗುವ ಕಾರಣ ನೀಡಿದಾಗ ತಕ್ಷಣ ಹಣವನ್ನು ಪೂರ್ಣವಾಗಿ ವಾಪಸ್ಸು ಪಡೆಯಬಹುದು.

  8. ಐದು ವರ್ಷಕ್ಕೂ ಮುಂಚೆ ಹಣವನ್ನು ತೆಗೆಯುವುದರಿಂದ ಎಲ್ಲಾ ತೆರಿಗೆ ವಿನಾಯತಿಗಳೂ ಹೋಗುತ್ತವೆ. ಅಂದಿನ ದಿನದಲ್ಲಿ ಇರುವ ತೆರಿಗೆ ಲಾಗೂ ಆಗುತ್ತದೆ.

  9. ಒಂದು ಸಂಸ್ಥೆ ಬಿಟ್ಟು ಇನ್ನೊಂದು ಸಂಸ್ಥೆಗೆ ಸೇರಿಕೊಂಡು ಅಲ್ಲಿಯೂ ಹಣವನ್ನು ತೊಡಗಿಸುತ್ತ ಬರಬಹುದು. ಹಾಗೊಮ್ಮೆ ಹೊಸ ಸಂಸ್ಥೆಯಲ್ಲಿ EPF ಸೌಲಭವಿಲ್ಲದಿದ್ದರೆ VPF ಮೂಲಕ ಖಾತೆಯನ್ನು ಜೀವಂತವಿಡಬಹುದು.

  10. ಖಾತೆದಾರನಲ್ಲದ್ದೆ ಬೇರಾರೂ ಈ ಹಣವನ್ನು ಕ್ಲೇಮ್ ಮಾಡಲು ಬರುವುದಿಲ್ಲ. ಹಣವನ್ನು ವಾಪಸ್ಸು ಪಡೆಯಲು ಸಮಯದ ಮಿತಿಯಿಲ್ಲ. ಆದರೆ 36 ತಿಂಗಳಿಗೂ ಹೆಚ್ಚು ಕಾಲ ಇದರಲ್ಲಿ ಯಾವುದೇ ಚಲನೆಯಿಲ್ಲದೆ ಹೋದರೆ ಇದರ ಮೇಲೆ ಬಡ್ಡಿ ಕೂಡ ನಿಂತು ಹೋಗುತ್ತದೆ.

EPFO
SBIನ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸರಿಯೇ? (ಹಣಕ್ಲಾಸು)

ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಭಾರತದಂತಹ ಸಾಮಾಜಿಕ ಭದ್ರತೆ ಇಲ್ಲದ ದೇಶದಲ್ಲಿ ಇದು ಅತ್ಯುತ್ತಮ ಯೋಜನೆಯಾಗಿದೆ. ಇದರಲ್ಲಿ ಯಾವುದೇ ಅಪಾಯವಿಲ್ಲದ ಕಾರಣ ಇದು ಭದ್ರತೆಯನ್ನು ಒದಗಿಸುತ್ತದೆ. ಅಲ್ಲದೆ ಮೆಚುರಿಟಿ ಹಣದ ಬಗ್ಗೆ ನಿಖರತೆ ಇರುತ್ತದೆ. ಇಲ್ಲಿನ ಉಳಿಕೆ ಹಣವನ್ನು ವಾಪಸ್ಸು ಪಡೆಯಲು ಬಹಳಷ್ಟು ಅವಕಾಶಗಳನ್ನು ಕೂಡ ಮಾಡಿಕೊಡಲಾಗಿದೆ. ಆದರೆ ಇದನ್ನು ನಿವೃತ್ತಿ ನಿಧಿ ಎಂದು ಪರಿಗಣಿಸಿ ನಿವೃತ್ತಿಯ ತನಕ ಮುಟ್ಟದೆ ಹಾಗೆ ಉಳಿಸಿಕೊಂಡರೆ ಇದೊಂದು ಉತ್ತಮ ನಿಧಿಯಾಗಿ ಕೈಸೇರುತ್ತದೆ. ಷೇರು ಮಾರುಕಟ್ಟೆ ಮತ್ತಿತರ ಅಪಾಯ ಇರುವ ಹೂಡಿಕೆಗಿಂತ ಮತ್ತು ಅದರ ಬಗ್ಗೆ ಜ್ಞಾನವಿರದ ಸಾಮಾನ್ಯ ನೌಕರರ ಪಾಲಿಗೆ ಖಂಡಿತ ಇದು ಉತ್ತಮ ಯೋಜನೆ. ಇದನ್ನು ಮಧ್ಯದಲ್ಲಿ ಬ್ರೇಕ್ ಮಾಡದೆ 30 ರಿಂದ 35 ವರ್ಷ ಉಳಿಸಿಕೊಂಡು ಬಂದರೆ ಇದು ನಿಜಕ್ಕೂ ವರದಾನವಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com