
ಕೆಲವು ಜನರಿಗೆ ಖಿನ್ನತೆ, ಆತಂಕ, ಗೀಳು ವ್ಯಾಧಿ (ಒಸಿಡಿ- ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಮತ್ತಿತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟ ಔಷಧಿ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ.
ಇಂತಹ ಕೆಲವು ಔಷಧಿಗಳನ್ನು ಸೆಲೆಕ್ಟಿವ್ ಸೆರೊಟೋನಿನ್ ರೀಅಪ್ಟೇಕ್ ಇನ್ಹಿಬಿಟರ್ಸ್ (ಎಸ್.ಎಸ್.ಆರ್.ಐ.) ಎಂದು ಕರೆಯುತ್ತಾರೆ (ಇಲ್ಲಿ ಸೆರೆಟೋನಿನ್ ಮೆದುಳಿನ ಒಂದು ನರ ರಾಸಾಯನಿಕ ಸಂದೇಶವಾಹಕ. ಇದು ವಿಶೇಷವಾಗಿ ಮನಸ್ಥಿತಿ, ಭಾವನೆ, ನಿದ್ರೆ, ಹಸಿವು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದೆ). ಹೀಗೆ ಮಾನಸಿಕ ಸಮಸ್ಯೆಯ ನಿವಾರಕ ಔಷಧಿಗಳನ್ನು ನಿಲ್ಲಿಸಿದ ನಂತರ ಕೆಲವರಿಗೆ ಲೈಂಗಿಕ ಕ್ರಿಯೆಯನ್ನು ಸಾಮಾನ್ಯ ರೀತಿಯಲ್ಲಿ ನಡೆಸಲು ತೊಂದರೆಯುಂಟಾಗಬಹುದು. ಈ ಸಮಸ್ಯಾತ್ಮಕ ಪರಿಸ್ಥಿತಿಯನ್ನು ಪಿ.ಎಸ್.ಎಸ್.ಡಿ. ಅಂದರೆ ಪೋಸ್ಟ್-ಎಸ್.ಎಸ್.ಎಸ್.ಡಿ ಸೆಕ್ಷುವಲ್ ಡಿಸಾರ್ಡರ್ ಎಂದು ಕರೆಯುತ್ತಾರೆ.
ಮಾನಸಿಕ ಸಮಸ್ಯೆಗಳಿಂದ ಹೊರಬಂದ ಜನರಿಗೆ ಕೆಲವೊಮ್ಮೆ ಕಾಮಾಸಕ್ತಿ ಕಡಿಮೆಯಾಗುತ್ತದೆ. ಕೆಲವರಿಗೆ ಜನನಾಂಗ ಉದ್ರೇಕಗೊಳ್ಳದಿರುವ ಸಮಸ್ಯೆಗಳು ಕಂಡುಬರಬಹುದು ಮತ್ತು ಇನ್ನು ಕೆಲವರಿಗೆ ಲೈಂಗಿಕ ತೃಪ್ತಿ ದೊರಕದಿರಬಹುದು. ಇದಲ್ಲದೇ ಸಾಮಾನ್ಯವಾಗಿ ಕೆಲವು ವ್ಯಕ್ತಿಗಳು ಮಾನಸಿಕ ಸಮಸ್ಯೆಗಳ ನಿವಾರಕ ಔಷಧಿಗಳನ್ನು ನಿಲ್ಲಿಸಿದ ನಂತರ ದಿನನಿತ್ಯದ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಕೆಲವು ಜನರಿಗೆ ದಿನನಿತ್ಯದ ಜೀವನ ಮೊದಲಿನಂತಾಗಲು ಕೆಲ ವರ್ಷಗಳೇ ಹಿಡಿಯಬಹುದು.
ಪಿ.ಎಸ್.ಎಸ್.ಡಿ.ಯ ರೋಗ ಲಕ್ಷಣಗಳಲ್ಲಿ ಜನನಾಂಗಗಳಲ್ಲಿ ಸಂವೇದನೆ ಕಡಿಮೆಯಾಗುವುದು ಅಥವಾ ಸಂವೇದನೆಯೇ ಇಲ್ಲದಿರುವುದು, ಲೈಂಗಿಕ ಬಯಕೆ ಕಡಿಮೆಯಾಗುವುದು, ಜನನಾಂಗದ ಉದ್ರೇಕ ಕಡಿಮೆಯಾಗುವುದು, ಲೈಂಗಿಕ ತೃಪ್ತಿ (ಆರ್ಗಾಸಂ) ಸಾಧಿಸಲು ತೊಂದರೆ, ಪುರುಷರಲ್ಲಿ ಶೀಘ್ರ ಸ್ಖಲನ, ಸ್ತ್ರೀಯರಲ್ಲಿ ಯೋನಿ ತೇವ ಇಲ್ಲದಿರುವುದು ಮತ್ತು ಸ್ತನದ ತೊಟ್ಟುಗಳಲ್ಲಿ ಸಂವೇದನೆ ಕಡಿಮೆಯಾಗುವುದು ಅಥವಾ ಸಂವೇದನೆಯೇ ಇಲ್ಲದಿರುವುದು ಸೇರಿವೆ.
ನರ ರಾಸಾಯನಿಕ ಅಸಮತೋಲನ: ಎಸ್.ಎಸ್.ಆರ್.ಐ. ಔಷಧಿಗಳು ಲೈಂಗಿಕ ಕ್ರಿಯೆಯಲ್ಲಿ ಪಾತ್ರ ವಹಿಸುವ ಸಿರೊಟೋನಿನ್ ಮತ್ತು ಡೋಪಮೈನ್ ಮೇಲೆ ಪರಿಣಾಮ ಬೀರಬಹುದು.
ಗ್ರಾಹಕ ನರ ನಿಯಂತ್ರಣ ಕಡಿತ: ದೀರ್ಘಕಾಲೀನ ಎಸ್.ಎಸ್.ಆರ್.ಐ. ಔಷಧಿಗಳ ಬಳಕೆಯು ಸಿರೊಟೋನಿನ್ ಗ್ರಾಹಕಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು, ಇದು ಲೈಂಗಿಕ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ.
ಹಾರ್ಮೋನುಗಳ ಬದಲಾವಣೆಗಳು: ಈ ಔಷಧಿಗಳು ಹಾರ್ಮೋನ್ ಮಟ್ಟವನ್ನು ಪ್ರಭಾವಿಸಬಹುದು, ಇದು ಲೈಂಗಿಕ ಕ್ರಿಯೆಯ ಮೇಲೆ ಸಂಭಾವ್ಯವಾಗಿ ಪರಿಣಾಮ ಬೀರುತ್ತದೆ.
ಕೆಲವರು ಬೇರೆಯವರಿಗಿಂತ ಹೆಚ್ಚು ಸಮಸ್ಯೆಗಳನ್ನು ಅನುಭವಿಸಬಹುದು. ಈ ಸಮಸ್ಯೆಗಳು ಜೀವನದ ಮತ್ತು ಸಂಬಂಧಗಳ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಇಂತಹ ಸಮಸ್ಯೆಗಳು ಕಂಡುಬಂದರೆ ವೈದ್ಯರನ್ನು ತಡಮಾಡದೇ ಕಾಣಬೇಕು.
ಪಿ.ಎಸ್.ಎಸ್.ಡಿ. ಸಮಸ್ಯೆಗೆ ಪ್ರಸ್ತುತ ಸಾರ್ವತ್ರಿಕ ಮಾನ್ಯತೆ ಇರುವ ಯಾವುದೇ ಚಿಕಿತ್ಸೆ ಇಲ್ಲ, ಆದರೂ ಇದನ್ನು ನಿರ್ವಹಿಸಬಹುದು. ಕೆಲವು ಜನರಿಗೆ ಕ್ರಮೇಣ ಈ ಸಮಸ್ಯೆಗಳು ತಾವಾಗಿಯೇ ಹೋಗುತ್ತವೆ. ವೈದ್ಯರ ಬಳಿಗೆ ಹೋಗಿ ಸಮಾಲೋಚನೆ ನಡೆಸಿದರೆ ಅವರು ಕಾಮಾಸಕ್ತಿಯನ್ನು ಸುಧಾರಿಸಿಕೊಳ್ಳಲು ಸೂಕ್ತ ಔಷಧಿ ಮತ್ತು ಮಾತ್ರೆಗಳನ್ನು ನೀಡಬಹುದು. ಪುರುಷರಿಗೆ ಟೆಸ್ಟೊಸ್ಟಿರಾನ್ ಹಾರ್ಮೋನು ಸುಧಾರಕಗಳನ್ನು ತೆಗೆದುಕೊಳ್ಳಲು ಸಲಹೆ ನೀಡಬಹುದು. ವರ್ತನೆಯ ಚಿಕಿತ್ಸೆಯು ಆಪ್ತ ಸಮಾಲೋಚನೆ ಅಥವಾ ಲೈಂಗಿಕ ಚಿಕಿತ್ಸೆಯು ಈ ಸಮಸ್ಯೆಯಿಂದ ಉಂಟಾಗುವ ಮಾನಸಿಕ ತೊಂದರೆಯನ್ನು ನಿಭಾಯಿಸಲು ಮತ್ತು ಅನ್ಯೋನ್ಯತೆ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡಬಹುದು.
ಈ ಸಮಸ್ಯೆಯನ್ನು ತಡೆಗಟ್ಟಲು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಚಿಕಿತ್ಸೆ ಆರಂಭಿಸುವ ಮೊದಲು ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಚಿಕಿತ್ಸೆಯ ನಿರ್ಧಾರ ಕೈಗೊಳ್ಳಬೇಕು. ಎಸ್.ಎಸ್.ಆರ್.ಐ. ಔಷಧಿಗಳನ್ನು ಕೊಡುವ ಮುನ್ನ ರೋಗಿಗಳಿಗೆ ನಂತರ ಉಂಟಾಗುವ ಪರಿಣಾಮಗಳು ಮತ್ತು ಅಡ್ಡ ಪರಿಣಾಮಗಳ ಬಗ್ಗೆ ವಿವರಗಳನ್ನು ವೈದ್ಯರು ನೀಡಬೇಕು. ಇಂತಹ ಔಷಧಿಗಳನ್ನು ಕಡಿಮೆ ಪರಿಣಾಮಕಾರಿ ಡೋಸ್ ರೋಪದಲ್ಲಿ ಮತ್ತು ಅಗತ್ಯವಿರುವ ಕಡಿಮೆ ಅವಧಿಗೆ ರೋಗಿಗಳು ಬಳಸಬೇಕು. ಚಿಕಿತ್ಸೆಯ ಸಮಯದಲ್ಲಿ ರೋಗಲಕ್ಷಣಗಳ ನಿಯಮಿತ ಪರಿಶೀಲನೆಯು ಲೈಂಗಿಕ ಅಡ್ಡಪರಿಣಾಮಗಳನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ. ಆಗ ಸೂಕ್ತವಾಗಿ ಚಿಕಿತ್ಸೆ/ಔಷಧಿಗಳನ್ನು ಹೊಂದಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಎಸ್.ಎಸ್.ಆರ್.ಐ, ಅಲ್ಲದ ಖಿನ್ನತೆ/ಮಾನಸಿಕ ಸಮಸ್ಯೆಯ ಶಮನಕಾರಿಗಳನ್ನು ಸೂಕ್ತವೆನಿಸಿದಾಗ ಪರಿಗಣಿಸಬೇಕು.
ಒಟ್ಟಾರೆ ಹೇಳುವುದಾದರೆ ಪಿ.ಎಸ್.ಎಸ್.ಐ. ಸಮಸ್ಯೆ ಒಂದು ಗಂಭೀರ ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಸಮಸ್ಯೆಯಾಗಿದೆ. ಇದು ಜೀವನದ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆದ್ದರಿಂದ ಇದರ ಬಗ್ಗೆ ಅರಿವು, ಆರಂಭಿಕ ಗುರುತಿಸುವಿಕೆ, ಮಾನಸಿಕ ಸಮಸ್ಯೆಯ ಪರಿಹಾರಕ್ಕೆ ಬಳಸುವ ಔಷಧಿ/ಚಿಕಿತ್ಸೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ಸಮಸ್ಯೆ ಇದೆ ಎಂದು ಗೊತ್ತಾದರೆ ಮಾನಸಿಕ ಆರೋಗ್ಯ ವೃತ್ತಿಪರ ಅಥವಾ ಲೈಂಗಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಮತ್ತು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಆಯುರ್ವೇದಲ್ಲಿ ಈ ಸಮಸ್ಯೆಗೆ ರಸೌಷಧಿಗಳು, ಪಂಚಕರ್ಮ ಮತ್ತು ಉತ್ತಮ ಸಲಹೆ-ಸಮಾಲೋಚನೆಗಳು ಲಭ್ಯವಿವೆ.
ಸಾರಾಂಶ
ವಿಟಮಿನ್ ಬಿ 12 ಆರೋಗ್ಯದ ಮೇಲೆ ವ್ಯಾಪಕ ಪರಿಣಾಮ ಬೀರುವ ಒಂದು ಸಣ್ಣ ಆದರೆ ಪ್ರಬಲ ಪೋಷಕಾಂಶವಾಗಿದೆ. ಆಹಾರ, ಬಲವರ್ಧಿತ ಆಹಾರಗಳು ಅಥವಾ ಪೂರಕಗಳ ಮೂಲಕ ಸಾಕಷ್ಟು ವಿಟಮಿನ್ ಬಿ 12 ಸೇವನೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
Advertisement