ಡ್ರ್ಯಾಗನ್ ಮತ್ತು ಆನೆ: ಡಾಲರ್ ಡ್ಯಾನ್ಸ್ ಸುತ್ತ ಅನುಮಾನಗಳ ಹುತ್ತ (ಜಾಗತಿಕ ಜಗಲಿ)

ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಅವರು ಸೌಹಾರ್ದಯುತವಾಗಿ ಮಾತನಾಡಿದ್ದರೂ, ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಖಂಡಿತವಾಗಿಯೂ ಉಳಿದಿವೆ.
ಡ್ರ್ಯಾಗನ್ ಮತ್ತು ಆನೆ: ಡಾಲರ್ ಡ್ಯಾನ್ಸ್ ಸುತ್ತ ಅನುಮಾನಗಳ ಹುತ್ತ (ಜಾಗತಿಕ ಜಗಲಿ)
Updated on

ಭಾರತ ಈಗ ತನ್ನ ಭದ್ರತೆಯ ಕುರಿತು ಬಹಳಷ್ಟು ಜಾಗರೂಕವಾಗಿರಬೇಕಿದ್ದು, ಅದೇ ಸಮಯದಲ್ಲಿ ಸ್ಮಾರ್ಟ್‌ ಆಗಿ ತನ್ನ ಆಯ್ಕೆಗಳನ್ನು ಕೈಗೊಳ್ಳಬೇಕು. ಅಮೆರಿಕಾದಿಂದ ಎದುರಾಗುವಂತಹ ಅಪಾಯವನ್ನು ಕಡಿಮೆಗೊಳಿಸಲು ಭಾರತದ ಮುಂದಿರುವ ಇಂತಹ ಒಂದು ಆಯ್ಕೆ ಎಂದರೆ, ಬ್ರಿಕ್ಸ್‌ ಸ್ಟೇಬಲ್‌ ಕಾಯಿನ್.‌

ಸಹಕಾರ, ಜಾಗರೂಕತೆ ಮತ್ತು ಬದಲಾಗಲಿರುವ ಹಣ

ಸಿಂಗಾಪುರದ ಲೀ ಕನ್‌ ಯೀ ಅವರು “ಆನೆಗಳು ಪ್ರೀತಿಸುವಾಗ ಅವುಗಳ ಕೆಳಗಿನ ಹುಲ್ಲೂ ನಜ್ಜುಗುಜ್ಜಾಗುತ್ತದೆ” ಎಂದಿದ್ದಾರೆ. ಒಂದು ಹಳೆಯದಾದ ಕೀನ್ಯಾದ ಗಾದೆಯೂ ಇದೇ ಧ್ವನಿಯನ್ನು ಹೊಂದಿದ್ದು, “ಆನೆಗಳು ಕಾದಾಡುವಾಗ ನಿಜವಾಗಲೂ ನರಳುವುದು ನೆಲದಲ್ಲಿರುವ” ಎಂದು ಆ ಗಾದೆ ಹೇಳುತ್ತದೆ.

ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಸಭೆಯಲ್ಲಿ, ಭಾರತ ಮತ್ತು ಚೀನಾಗಳು ಪರಸ್ಪರ ಸಹಕಾರ ಹೊಂದಿ, ಜೊತೆಯಾಗಿ ಕಾರ್ಯಾಚರಿಸಲು ಒಪ್ಪಿಗೆ ಸೂಚಿಸಿದವು. ಈ ಬೆಳವಣಿಗೆಯನ್ನು ಆನೆ ಮತ್ತು ಡ್ರ್ಯಾಗನ್‌ ಜೊತೆಯಾಗಿ ನರ್ತಿಸಲು ಸಿದ್ಧವಾಗುವುದಕ್ಕೆ ಹೋಲಿಸಲಾಗುತ್ತಿದೆ.

ಭಾರತ – ಚೀನಾ ಸಂಬಂಧದಲ್ಲಿ ಏನಾದರೂ ಈ ಬದಲಾವಣೆ ಉಂಟಾದರೆ, ಇದು ಎರಡೂ ದೇಶಗಳ ಉದ್ಯಮಗಳಿಗೂ ಲಾಭದಾಯಕವಾಗಿ ಪರಿಣಮಿಸಲಿದೆ.

ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಅವರು ಸೌಹಾರ್ದಯುತವಾಗಿ ಮಾತನಾಡಿದ್ದರೂ, ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಖಂಡಿತವಾಗಿಯೂ ಉಳಿದಿವೆ. ಅದರಲ್ಲೂ ಗಡಿ ವಿಚಾರದಲ್ಲಿ ಎರಡೂ ದೇಶಗಳು ಭಿನ್ನಾಭಿಪ್ರಾಯ ಹೊಂದಿವೆ. ಈಗ ನಮ್ಮ ಮುಂದಿರುವ ವ್ಯಾಪಾರ ಅನಿಶ್ಚಿತತೆಯಂಹ ಬೃಹತ್ ಸವಾಲನ್ನು ಎದುರಿಸುವ ಸಲುವಾಗಿ ಭಾರತ – ಚೀನಾ ಜೊತೆಯಾಗಿ ಕಾರ್ಯಾಚರಿಸಬೇಕಿದ್ದು, ಅದಕ್ಕಾಗಿ ಪರಸ್ಪರರ ನಡುವಿನ ವಿವಾದಗಳು ಕೊನೆಗೊಳ್ಳುವುದನ್ನು ಕಾದು ಕುಳಿತಿರಬಾರದು ಎಂದು ಕ್ಸಿ ಜಿನ್‌ಪಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೂ ಕ್ಸಿ ಮಾತಿಗೆ ಕೊಂಚ ಮಟ್ಟಿನ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಗಡಿ ವಿಚಾರ ಸಂಪೂರ್ಣವಾಗಿ ಪರಿಹಾರ ಕಾಣದಿದ್ದರೆ, ಅದು ಎಂದಿಗೂ ಜಂಟಿ ಪ್ರಯತ್ನಗಳಿಗೆ ತೊಂದರೆ ನೀಡಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಡ್ರ್ಯಾಗನ್ ಮತ್ತು ಆನೆ: ಡಾಲರ್ ಡ್ಯಾನ್ಸ್ ಸುತ್ತ ಅನುಮಾನಗಳ ಹುತ್ತ (ಜಾಗತಿಕ ಜಗಲಿ)
ಪಂಚಶೀಲ ಒಪ್ಪಂದಗಳ ಹಾದಿಯಲ್ಲಿ ಸಾಗಿಬಂದ ಭಾರತ – ಚೀನಾ ಸಂಬಂಧಗಳತ್ತ ಒಂದು ನೋಟ (ಜಾಗತಿಕ ಜಗಲಿ)

ಉಭಯ ದೇಶಗಳ ನಡುವೆ ಭಯೋತ್ಪಾದನೆಯ ವಿಚಾರದಲ್ಲೂ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಎಸ್‌ಸಿಒ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಸ್‌ಸಿಒ ಭಯೋತ್ಪಾದನೆಯ ವಿರುದ್ಧ ಸ್ಪಷ್ಟವಾಗಿ ಸೆಣಸಬೇಕು ಎಂದು ಕರೆ ನೀಡಿದ್ದರು. ಆದರೆ ಚೀನಾ ನಿರಂತರವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದು, ಇದು ಭಯೋತ್ಪಾದನಾ ನಿಗ್ರಹದ ಕುರಿತು ಚೀನಾದ ಬದ್ಧತೆಯ ಕೊರತೆಯಂತೆ ತೋರುತ್ತಿದೆ.

ಏಷ್ಯಾದ ಎರಡು ಬೃಹತ್‌ ಶಕ್ತಿಗಳಾದ ಭಾರತ ಮತ್ತು ಚೀನಾಗಳು ಪರಸ್ಪರ ಜೊತೆಯಾಗಿ ಕಾರ್ಯಾಚರಿಸಲು ಆರಂಭಿಸಿದರೆ, ಇದರಿಂದ ಎರಡು ದೇಶಗಳಿಗೆ ಮಾತ್ರವಲ್ಲದೆ, ಜಗತ್ತಿಗೂ ಪ್ರಯೋಜನ ಲಭಿಸಲಿದೆ. ಇದಕ್ಕಾಗಿ ಭಾರತ ಮತ್ತು ಚೀನಾ ಪರಸ್ಪರರೊಡನೆ ಮಾತ್ರವಲ್ಲದೆ, ಇತರ ಬ್ರಿಕ್ಸ್‌ ದೇಶಗಳೊಡನೆಯೂ ಕಾರ್ಯಾಚರಿಸಬೇಕು.

ಒಂದು ವೇಳೆ ಗಡಿಯಲ್ಲಿ ಸ್ಥಿರತೆ ಕಾಣಿಸಿಕೊಂಡರೆ, ಆಗ ಭಾರತ ಮತ್ತು ಚೀನಾ ಎರಡೂ ವ್ಯಾಪಾರ ಮತ್ತು ಹೂಡಿಕೆಗಳ ಕುರಿತು ತಮ್ಮ ನಿಯಮಗಳನ್ನು ಒಂದಷ್ಟು ಸಡಿಲಿಸಬಹುದು.

ಆರ್ಥಿಕ ಲಾಭಗಳು ನಮಗೆ ಆಕರ್ಷಕವಾಗಿ ಕಾಣಿಸಿದರೂ, ಭಾರತ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬೇಕು. ವ್ಯಾಪಾರದ ಕಾರಣಕ್ಕಾಗಿ ದೇಶದ ಹಿತಾಸಕ್ತಿಗಳಿಗೆ ತೊಂದರೆಯಾಗುವುದಾಗಲಿ, ಅವುಗಳನ್ನು ಕಡೆಗಣಿಸುವುದಾಗಲಿ ಸಾಧ್ಯವಿಲ್ಲ.

ವಿದ್ಯುತ್‌, ಆರ್ಥಿಕತೆ, ಆರೋಗ್ಯ, ಮಾಹಿತಿ ವ್ಯವಸ್ಥೆಗಳು, ಟ್ರಾಫಿಕ್‌, ರೈಲ್ವೇ, ವಿಮಾನ ನಿಲ್ದಾಣಗಳು ಮತ್ತು ನೀರಿನ ಹರಿವು ನಿಯಂತ್ರಣದಂತಹ ಮಹತ್ವದ ಕ್ಷೇತ್ರಗಳಲ್ಲಿ ಚೀನಾದ ಉಪಕರಣಗಳು ಮತ್ತು ಸಾಫ್ಟ್‌ವೇರ್‌ ಬಳಸಿ ಭಾರತ ದ್ರೋಹ ಅನುಭವಿಸುವಂತೆ ಆಗಬಾರದು.

ಇನ್ನು ಟ್ರಂಪ್‌ ಕೈಗೊಳ್ಳುತ್ತಿರುವ ನೀತಿಗಳು ಈಗಾಗಲೇ ಜಾಗತಿಕ ಹಣವಾಗಿ ಅಮೆರಿಕನ್‌ ಡಾಲರ್‌ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿವೆ. ಡಾಲರ್‌ ಸದೃಢವಾಗಿ ಉಳಿದರೂ, ಬ್ರಿಕ್ಸ್‌ ಯುಎಸ್ ಡಿಜಿಟಲ್‌ ಕರೆನ್ಸಿ ನಿಯಮಗಳನ್ನು ಸರಿದೂಗಿಸಲು, ಐಎಂಎಫ್‌ನ ಡಾಲರ್‌, ಯೂರೋ, ಯೆನ್‌ ಮತ್ತು ಇತರ ಹಣಗಳ ಬೆಂಬಲವಿರುವ ಎಸ್‌ಡಿಆರ್‌ ಗೆ ಸಂಪರ್ಕ ಹೊಂದಿರುವ ಒಂದು ʼಸ್ಟೇಬಲ್‌ ಕಾಯಿನ್‌ʼ ಆರಂಭಿಸಬಹುದು. ಈ ಹಣವನ್ನು ಆರಂಭದಲ್ಲಿ ಬ್ರಿಕ್ಸ್‌ ದೇಶಗಳ ಒಳಗಿನ ವ್ಯವಹಾರಗಳಿಗೆ ಬಳಸುವ ಸಾಧ್ಯತೆಗಳಿವೆ.

ಡ್ರ್ಯಾಗನ್ ಮತ್ತು ಆನೆ: ಡಾಲರ್ ಡ್ಯಾನ್ಸ್ ಸುತ್ತ ಅನುಮಾನಗಳ ಹುತ್ತ (ಜಾಗತಿಕ ಜಗಲಿ)
ಭಾರತದ ಸಾಮರ್ಥ್ಯ ಅರಿಯದೆ, ರಾಜಕೀಯ ಹಿನ್ನಡೆಗೆ ತುತ್ತಾದ 'ದೊಡ್ಡಣ್ಣ' ಅಮೆರಿಕಾ! (ಜಾಗತಿಕ ಜಗಲಿ)
  • ಎಸ್‌ಡಿಆರ್‌ (ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್)‌ ಎನ್ನುವುದು ಐಎಂಎಫ್‌ ಸ್ಥಾಪಿಸಿರುವ ಒಂದು ಅಂತಾರಾಷ್ಟ್ರೀಯ ಮೀಸಲು ನಿಧಿಯಾಗಿದ್ದು, ಜಾಗತಿಕ ಆರ್ಥಿಕ ಸ್ಥಿರತೆಗೆ ನೆರವಾಗಲು ಮತ್ತು ಸದಸ್ಯ ರಾಷ್ಟ್ರಗಳಿಗೆ ನಗದು ನೆರವು ನೀಡಲು ಬಳಕೆಯಾಗುತ್ತದೆ.

  • ಯುಎಸ್ ಡಿಜಿಟಲ್‌ ಕರೆನ್ಸಿ ನಿಯಮಗಳೆಂದರೆ, ಕ್ರಿಪ್ಟೋ ಕರೆನ್ಸಿಗಳು ಮತ್ತು ಡಿಜಿಟಲ್‌ ಆಸ್ತಿಗಳನ್ನು ನಿಯಂತ್ರಿಸಲು ಜಾರಿಗೆ ತಂದಿರುವ ನೂತನ ನಿಯಮಗಳಾಗಿವೆ. ಈ ನಿಯಮಗಳು ಇಂತಹ ನೂತನ ಕರೆನ್ಸಿಗಳು ಜಾಗತಿಕವಾಗಿ ಒಪ್ಪಿತವಾಗುವ ಮುನ್ನ ಪಾರದರ್ಶಕತೆ, ಭದ್ರತೆ, ಅಕ್ರಮ ಹಣ ವರ್ಗಾವಣೆ ವಿರೋಧಿ ಕ್ರಮಗಳು ಮತ್ತು ಆರ್ಥಿಕ ವ್ಯವಸ್ಥೆಗಳೊಡನೆ ಹೊಂದಿಕೊಳ್ಳುವಿಕೆಗಳನ್ನು ಒದಗಿಸುತ್ತವೆ.‌

  • ಬ್ರಿಕ್ಸ್‌ ರಿ ಇನ್ಷೂರೆನ್ಸ್‌ ಆರ್ಮ್‌ ಮತ್ತು ಕ್ಲಿಯರಿಂಗ್‌ ಹೌಸ್‌ಗಳ ಜೊತೆಗೆ, ಈ ವ್ಯವಸ್ಥೆ ಒಂದು ಉಪಯುಕ್ತ ಆಯ್ಕೆಯಾಗಬಹುದು. ಪಾಶ್ಚಾತ್ಯ ದೇಶಗಳು ಚೀನಾ ಕುರಿತು ಅಪನಂಬಿಕೆ ಹೊಂದಿದ್ದರೂ, ಭಾರತದ ಬೆಂಬಲ ಹೊಂದಿರುವ ಪ್ರಸ್ತಾವನೆಗಳು ಗ್ಲೋಬಲ್‌ ಸೌತ್‌ ರಾಷ್ಟ್ರಗಳನ್ನು ಸೆಳೆಯುವ ಸಾಧ್ಯತೆಗಳಿವೆ. ಅಮೆರಿಕಾದ ಸಹಕಾರದ ಕೊರತೆಯಿಂದ ರೋಸಿ ಹೋಗಿರುವ ಅದರ ಮಿತ್ರ ರಾಷ್ಟ್ರಗಳೂ ಇದರತ್ತ ಆಕರ್ಷಿತರಾಗಬಹುದು.

  • ಬ್ರಿಕ್ಸ್‌ ರಿ ಇನ್ಷೂರೆನ್ಸ್‌ ಆರ್ಮ್‌ ಎನ್ನುವುದು ಸದಸ್ಯ ರಾಷ್ಟ್ರಗಳು ಅಪಾಯವನ್ನು ಹಂಚಿಕೊಳ್ಳುವಂತಹ ಒಂದು ಸಮಾನ ವಿಮಾ ಬೆಂಬಲ ವ್ಯವಸ್ಥೆಯಾಗಿದೆ. ಇದರಿಂದಾಗಿ ಉದ್ಯಮಗಳಿಗೆ ನಷ್ಟದಿಂದ ರಕ್ಷಣೆ ಲಭಿಸುತ್ತದೆ.

  • ಕ್ಲಿಯರಿಂಗ್‌ ಹೌಸ್‌ ಎನ್ನುವುದು ಒಂದು ಆರ್ಥಿಕ ಮಧ್ಯಸ್ಥಿಕೆದಾರನಂತಿದ್ದು, ವಿವಿಧ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಪಾವತಿಯನ್ನು ಸುರಕ್ಷಿತವಾಗಿ ಮತ್ತು ವೇಗವಾಗಿ ಅಂತಿಮಗೊಳಿಸಲು ನೆರವಾಗುತ್ತದೆ. ಇದು ವಂಚನೆ ಅಥವಾ ಬಾಕಿದಾರನಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com