ಏಕದಿನಕ್ಕೆ ಕಿವೀಸ್ ಆಟಗಾರ ಗ್ರಾಂಟ್ ಎಲಿಯಟ್ ವಿದಾಯ

ನ್ಯೂಜಿಲೆಂಡ್ ತಂಡ ಸ್ಫೋಟಕ ಬ್ಯಾಟ್ಸಮನ್ ಗ್ರಾಂಟ್ ಎಲಿಯಟ್ ಏಕದಿನ ಕ್ರಿಕೆಟ್ ಗೆ ಶುಕ್ರವಾರ ವಿದಾಯ ಘೋಷಣೆ ಮಾಡಿದ್ದು, ಟಿ20ಯಲ್ಲಿ..
ನ್ಯೂಜಿಲೆಂಡ್ ಕ್ರಿಕೆಟಿಗ ಗ್ರಾಂಟ್ ಎಲಿಯಟ್ (ಸಂಗ್ರಹ ಚಿತ್ರ)
ನ್ಯೂಜಿಲೆಂಡ್ ಕ್ರಿಕೆಟಿಗ ಗ್ರಾಂಟ್ ಎಲಿಯಟ್ (ಸಂಗ್ರಹ ಚಿತ್ರ)

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡ ಸ್ಫೋಟಕ ಬ್ಯಾಟ್ಸಮನ್ ಗ್ರಾಂಟ್ ಎಲಿಯಟ್ ಏಕದಿನ ಕ್ರಿಕೆಟ್ ಗೆ ಶುಕ್ರವಾರ ವಿದಾಯ ಘೋಷಣೆ ಮಾಡಿದ್ದು, ಟಿ20ಯಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

83 ಏಕದಿನಗಳಲ್ಲಿ 2 ಶತಕ ಒಳಗೊಂಡಂತೆ 1,976 ರನ್ ಸಿಡಿಸಿರುವ ಎಲಿಯಟ್ ಬೌಲಿಂಗ್ ನಲ್ಲಿ 39 ವಿಕೆಟ್ ಗಳನ್ನು ಕೂಡ ಕಬಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್  ನಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಮಣಿಸಿ ತಂಡವನ್ನು ಪ್ರಶಸ್ತಿ ಸುತ್ತಿಗೇರಿಸಿದ್ದ ನ್ಯೂಜಿಲೆಂಡ್ ತಂಡದ ಹೀರೋ ಗ್ರಾಂಟ್ ಎಲಿಯಟ್  ಅವರ ಏಕದಿನ ಕ್ರಿಕೆಟ್ ಜೀವನ ಇದೀಗ ಅಂತ್ಯವಾಗಿದೆ.

ಟಿ20 ವಿಶ್ವಕಪ್ ಸೆಮಿ-ಫೈನಲ್‌ನಲ್ಲಿ ಕಿವೀಸ್ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡ 2 ದಿನಗಳ ನಂತರ 37 ವರ್ಷದ ಎಲಿಯಟ್ ನಿವೃತ್ತಿ ನಿರ್ಧಾರ ಕೈಗೊಂಡಿದ್ದು, ಟಿ20 ಮಾದರಿ ಕ್ರಿಕೆಟ್  ನಲ್ಲಿ ಮುಂದವರೆಯುವುದಾಗಿ ತಿಳಿಸಿದ್ದಾರೆ. ‘ನಾನು ಈಗಾಗಲೇ ನನ್ನ ಕೊನೆಯ ಏಕದಿನ ಪಂದ್ಯವನ್ನಾಡಿದ್ದೇನೆ. ನಾನು ಆಡಿರುವ ಟೆಸ್ಟ್ ಪಂದ್ಯ ಕಡಿಮೆಯಾದರೂ ಟಿ20 ಮಾದರಿ ಆಟವನ್ನು  ಎಂಜಾಯ್ ಮಾಡುತ್ತಿದ್ದೇನೆ’ ಎಂದು ಎಲಿಯಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com