ಆಕರ್ಷಕ ಅರ್ಧಶತಕ ಗಳಿಸಿದ ಜೋ ರೂಟ್ ಆಟದ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಆಕರ್ಷಕ ಅರ್ಧಶತಕ ಗಳಿಸಿದ ಜೋ ರೂಟ್ ಆಟದ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ವಿಂಡೀಸ್ ಗೆ 156ರನ್ ಗಳ ಸವಾಲಿನ ಗುರಿ ನೀಡಿದ ಇಂಗ್ಲೆಂಡ್

ಐಸಿಸಿ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಗೆ 156 ರನ್ ಸವಾಲಿನ..

ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಗೆ 156 ರನ್ ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸಾಮಿ ಪಡೆ ಇಂಗ್ಲೆಂಡ್ ಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ಆರಂಭಿಕನಾಗಿ ಕಣಕ್ಕಿಳಿದ ಇಂಗ್ಲೆಂಡ್ ನ ಸೆಮಿಫೈನಲ್ ಹೀರೋ ಜೇಸನ್ ರಾಯ್ ಶೂನ್ಯಕ್ಕೆ ಔಟ್ ಆದರು. ಬಳಿಕ ಹೇಲ್ಸ್ ಕೂಡ 1 ರನ್ ಗೆ ಔಟ್ ಆಗುವ ಮೂಲಕ ಇಂಗ್ಲೆಂಡ್ ತಂಡವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದರು. ಆದರೆ ಆ ಬಳಿಕ ಬಂದ ಜೋ ರೂಟ್ ಸಮಯೋಚಿತವಾಗಿ ಆಡಿ 36 ಎಸೆತಗಳಲ್ಲಿ 54 ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು.

ರೂಟ್ ಗೆ ಮಧ್ಯಮ ಕ್ರಮಾಂಕದ ಆಟಗಾರ ಜೋಸ್ ಬಟ್ಲರ್ (36 ರನ್ ) ಉತ್ತಮ ಸಾಥ್ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಬಟ್ಲರ್ ಬ್ರಾಥ್ ವೇಟ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಟೋಕ್ಸ್ 13 ರನ್ ಗಳಿಸಿ ಔಟ್ ಆದರೆ, ಅಲಿ ಶೂನ್ಯಕ್ಕೆ ನಿರ್ಗಮಿಸಿದರು. ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 111 ರನ್ ಗಳಾಗಿದ್ದಾಗ ಬ್ರಾಥ್ ವೇಟ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ರೂಟ್ ವಿಂಡೀಸ್ ತಂಡದ ಬೆನ್ ಗೆ ಕ್ಯಾಚಿತ್ತು ಔಟ್ ಆದರು.

ಅಂತಿಮವಾಗಿ ವಿಂಡೀಸ್ ಪ್ರಭಾವಿ ಬೌಲಿಂಗ್ ನ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಿದ ಬಾಲಂಗೋಚಿಗಳಾದ ಜೋರ್ಡಾನ್ (12), ವಿಲ್ಲೆ (21) ಅವರ ನೆರವಿನಿಂದಾಗಿ ಇಂಗ್ಲೆಂಡ್ ತಂಡ 150 ರನ್ ಗಳ ಗುರಿ ದಾಟಿತು. ಅಲ್ಲದೆ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳನ್ನು ಕಲೆಹಾಕಿತು. ವೆಸ್ಟ್ ಇಂಡೀಸ್ ಪರ ಮೊದಲ ಓವರ್ ಎಸೆದ ಸ್ಪಿನ್ನರ್ ಬದ್ರಿ 2 ವಿಕೆಟ್ ಕಬಳಿಸಿದರೆ, ರಸೆಲ್ 1 ಮತ್ತು ಬ್ರಾಥ್ ವೇಟ್ ಮತ್ತು ಬ್ರಾವೋ ತಲಾ 3 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಒತ್ತಡದಲ್ಲಿ ಸಿಲುಕಿಸಿದರು.

ಅಂತಿಮವಾಗಿ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳ ಮೊತ್ತ ಪೇರಿಸಿತು. ಆ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ 156 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com