"ಬುದ್ದಿ ಹೀನರು" ಇದೀಗ ವಿಶ್ವವಿಜೇತರು: ಡರೇನ್ ಸಾಮಿ

ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಗೆದ್ದ ವೆಸ್ಟ್ ಇಂಡೀಸ್ ತಂಡ ಅತ್ತ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಪಂದ್ಯದ ಆ ತಂಡದ ನಾಯಕ..
ವಿಂಡೀಸ್ ನಾಯಕ ಡರೇನ್ ಸಾಮಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
ವಿಂಡೀಸ್ ನಾಯಕ ಡರೇನ್ ಸಾಮಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಕೋಲ್ಕತಾ: ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಗೆದ್ದ ವೆಸ್ಟ್ ಇಂಡೀಸ್ ತಂಡ ಅತ್ತ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಪಂದ್ಯದ ಆ ತಂಡದ ನಾಯಕ ಮಾತ್ರ ನಿಜಕ್ಕೂ  ಭಾವೋದ್ವೇಗಕ್ಕೆ ಒಳಗಾಗಿದ್ದರು.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ವಿವಾದಗಳು ಒಂದೆಡೆಯಾದರೆ ಟೂರ್ನಿಗೂ ಆರಂಭಕ್ಕೂ ಮೊದಲು ತಂಡದ ವಿರುದ್ಧ ಕೇಳಿಬಂದಿದ್ದ ಟೀಕೆಗಳು ನಿಜಕ್ಕೂ ಡರೇನ್ ಸಾಮಿ ಅವರನ್ನು  ಆಕ್ರೋಶ ಭರಿತರಾಗಿ ಮಾತನಾಡುವಂತೆ ಮಾಡಿತ್ತು. ತಮ್ಮ ಭಾಷಣದುದ್ದಕ್ಕೂ ವಿಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ವಿಕ್ಷಕ ವಿವರಣೆಗಾರ ಮಾರ್ಕ್ ನಿಕೋಲಸ್ ಅವರನ್ನು ತಿವಿದ ಡರೇನ್  ಸಾಮಿ, ಟೂರ್ನಿಯ ಆರಂಭದಲ್ಲಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ಅದರೂ ಅವುಗಳನ್ನೆಲ್ಲಾ ಮೆಟ್ಟಿ ನಿಂತು ಜಯ ಸಾಧಿಸಿದ್ದೇವೆ. ನಾವೀಗ ವಿಶ್ವ ಚಾಂಪಿಯನ್ನರು ಎಂದು  ಹೇಳಿದರು.

ನಮ್ಮಲ್ಲಿ ಸಾಕಷ್ಟು ಮ್ಯಾಚ್ ವಿನ್ನರ್ ಗಳಿದ್ದು, ಪ್ರತಿಯೊಂದು ಪಂದ್ಯದಲ್ಲಿ ಒಬ್ಬೊಬ್ಬರು ಸಿಡಿದು ಪಂದ್ಯಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ಬ್ರಾತ್ ವೇಟ್ ತಮ್ಮ ಮೊದಲ ವಿಶ್ವಕಪ್ ಟೂರ್ನಿಯಲ್ಲೇ  ಸಿಡಿಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ವಿಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ನಾವು ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿದ್ದೇವೆ. ನಾವು ಟೂರ್ನಿಯಲ್ಲಿ  ಪಾಲ್ಗೊಳ್ಳುವುದೇ ಅನುಮಾನ ಎಂಬಂತಹ ಪರಿಸ್ಥಿತಿಗಳು ನಿರ್ಮಾಣವಾಗಿತ್ತು. ನಮ್ಮದೇ ಕ್ರಿಕೆಟ್ ಮಂಡಳಿ ನಮ್ಮನ್ನು ಗೌರವಿಸುತ್ತಿಲ್ಲ ಎಂಬ ಭಾವನೆ ಇದೆ. ಹಿರಿಯರಾದ ಮಾರ್ಕ್ ನಿಕೋಲಸ್  ಅವರು ನಮ್ಮನ್ನು ಬುದ್ದಿಹೀನ ಆಟಗಾರರು ಎಂದು ಟೀಕಿಸಿದ್ದರು.

ನಿಕೋಲಸ್ ಅವರ ಬಗ್ಗೆ ನಮಗೆ ಸಾಕಷ್ಟು ಗೌರವವಿದೆ. ಇದೀಗ ಇದೇ ಬುದ್ದಿ ಹೀನರು ವಿಶ್ವಚಾಂಪಿಯನ್ಸ್ ಗಳಾಗಿದ್ದಾರೆ. ಈ ಗೆಲುವಿನಲ್ಲಿ ಕೇವಲ ತಂಡದ 11 ಮಂದಿ ಮಾತ್ರವಲ್ಲದೆ ತಂಡದ  ಕೋಚ್ ಫಿಲ್, ಮ್ಯಾನೇಜರ್ ರಾಲ್ ಲೂಯಿಸ್ ಮತ್ತು ಕೋಚಿಂಗ್ ಸಿಬ್ಬಂದಿಗಳು ನನ್ನ ನೆಚ್ಚಿನ ತಂಡ  15 ಮಂದಿ ಆಟಗಾರರು ಎಲ್ಲರೂ ಗೆಲುವಿನಲ್ಲಿ ಭಾಗಿಯಾಗಿದ್ದರು. ಹೀಗಾಗಿ  ಅವರೆಲ್ಲರಿಗೂ  ಅಭಿನಂದನೆ ಸಲ್ಲಿಸುತ್ತೇನೆ. ಪ್ರಮುಖವಾಗಿ ಮ್ಯಾನೇಜರ್ ರಾಲ್ ಲೂಯಿಸ್ ಅವರ ಕಾರ್ಯವನ್ನುಶ್ಲಾಘಿಸಲೇಬೇಕು. ನಾವು ತಂಡದೊಂದಿಗೆ ದುಬೈನಲ್ಲಿದ್ದಾಗ ನಮಗೆ ತಂಡದ ಜೆರ್ಸಿ ಕೂಡ  ದೊರೆತಿರಲಿಲ್ಲ. ಹೀಗಾಗಿ ರಾಲ್ ಲೂಯಿಸ್ ಕೂಡಲೇ ಕೋಲ್ಕತಾಗೆ ಆಗಮಿಸಿ ಇಲ್ಲಿಂದೆ ಜೆರ್ಸಿಗಳನ್ನು ತಂದು ನೀಡಿದ್ದರು.

ಇನ್ನು ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ವೆಸ್ಟ್ ಇಂಡೀಸ್ ಅಧ್ಯಕ್ಷ ಮಿಚೆಲ್ ಅವರು ನಮಗೊಂದು ಸ್ಪೂರ್ತಿ ದಾಯಕ ಸಂದೇಶ ರವಾನಿಸಿದ್ದರು. ಸಾಕಷ್ಟು ಮಂದಿ ನಮಗೆ ಬೆಂಬಲ  ನೀಡಿದ್ದಾರೆ. ಅದರೆ ನಮ್ಮದೇ ಕ್ರಿಕೆಟ್ ಮಂಡಳಿಯಿಂದ ನಮಗೆ ಬೇಸರವಾಗಿದೆ. ಬಹುಶಃ ಮಂಡಳಿಯೊಂದಿಗಿನ ತಗಾದೆಯಿಂದಾಗಿ ನಾನು ಮತ್ತೆ ಈ ತಂಡದೊಂದಿಗೆ ಯಾವಾಗ ಏಕದಿನ  ಕ್ರಿಕೆಟ್ ನಲ್ಲಿ ಕಣಕ್ಕಿಳಿಯುತ್ತೇನೆಯೋ ಗೊತ್ತಿಲ್ಲ. ಅಂತೆಯೇ ಯಾವಾಗ ಟಿ20 ಆಡುತ್ತೇವೆಯೋ ಅದೂ ತಿಳಿದಿಲ್ಲ. ಹೀಗಾಗಿ ಇಂದು ಈ ನನ್ನ ನೆಚ್ಚಿನ ತಂಡದೊಂದಿಗೆ ಇಡೀ ದಿನ  ಸಂಭ್ರಮಿಸುತ್ತೇನೆ ಎಂದು ಸಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com