ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್, ವಿಕೆಟ್ ಪಡೆದ 5 ಆಟಗಾರರು

ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಜಯ ಗಳಿಸುವ ಮೂಲಕ ಟೂರ್ನಿಗೆ ತೆರೆ ಬಿದ್ದಿದೆ...
ತಮೀಮ್ ಇಕ್ಬಾಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ನಬಿ, ರಶೀದ್ ಖಾನ್
ತಮೀಮ್ ಇಕ್ಬಾಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ನಬಿ, ರಶೀದ್ ಖಾನ್

ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಜಯ ಗಳಿಸುವ ಮೂಲಕ ಟೂರ್ನಿಗೆ ತೆರೆ ಬಿದ್ದಿದೆ.

2016ರ ಟಿ20 ವಿಶ್ವಕಪ್ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಹಲವು ಆಟಗಾರರು ಹೆಚ್ಚು ರನ್ ಪಡೆದು ಅಗ್ರಮಾನ್ಯ ಸ್ಥಾನಕ್ಕೇರಿದರೆ, ವಿಕೆಟ್ ಪಡೆಯುವ ಮೂಲಕ ಬೌಲರ್ ಗಳು ಮಿಂಚಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಪಡೆದ ಐವರು ಆಟಗಾರರು

ತಮೀಮ್ ಇಕ್ಬಾಲ್(ಬಾಂಗ್ಲಾದೇಶ)
ಪ್ರಸ್ತುತ ಟಿ20 ವಿಶ್ವಕಪ್ ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಅಗ್ರಮಾನ್ಯ ಆಟಗಾರರಾಗಿದ್ದಾರೆ. 6 ಪಂದ್ಯಗಳನ್ನಾಡಿರುವ ಇಕ್ಬಾಲ್ 73.57 ಸರಾಸರಿಯಲ್ಲಿ 295 ರನ್ ಗಳಿಸಿದ್ದಾರೆ. ಅಜೇಯ 103 ರನ್ ಗಳ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ(ಟೀಂ ಇಂಡಿಯಾ)
ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಪ್ರಸ್ತುತ ಟಿ20ಯಲ್ಲೂ ತಮ್ಮ ಚಾರ್ಮ್ ಅನ್ನು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಸರಣಿ ಹಾಗೂ ಏಷ್ಯಾಕಪ್ ನ ಉತ್ತಮ ಬ್ಯಾಟಿಂಗ್ ಪ್ರದರ್ಶನ ಭಾರತ ಸರಣಿ ಗೆಲುವಿಗೆ ಕಾರಣವಾಗಿತ್ತು. ಅದೇ ಚಾರ್ಮ್ ನಲ್ಲಿ ಆಡಿದ್ದ ಕೊಹ್ಲಿ 5 ಪಂದ್ಯಗಳನ್ನು ಆಡಿದ್ದು, 136.50ರ ಸರಾಸರಿಯಲ್ಲಿ 273 ರನ್ ಸಿಡಿಸಿದ್ದಾರೆ. ಅದರಲ್ಲಿ ಅಜೇಯ 89 ರನ್ ಪಂದ್ಯವೊಂದರಲ್ಲಿ ಸಿಡಿಸಿದ ಅತಿ ಹೆಚ್ಚು ರನ್ ಆಗಿದೆ.

ಮೊಹಮ್ಮದ್ ಶಹಜಾದ್(ಆಫ್ಘಾನಿಸ್ತಾನ)
ಕ್ರಿಕೆಟ್ ನ ಶಿಶು ಎಂದೇ ಬಿಂಬಿತವಾಗಿದ್ದ ಆಫ್ಘಾನಿಸ್ತಾನ ಪ್ರಸ್ತುತ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆಫ್ಘಾನಿಸ್ತಾನದ ಆಟಗಾರ ಮೊಹಮ್ಮದ್ ಶಹಜಾದ್ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. 7 ಪಂದ್ಯಗಳನ್ನಾಡಿರುವ ಶಹಜಾದ್ 31.71ರ ಸರಾಸರಿಯಲ್ಲಿ 222 ರನ್ ಗಳಿಸಿದ್ದಾರೆ. 61 ರನ್ ಪಂದ್ಯವೊಂದರಲ್ಲಿ ಗಳಿಸಿ ವ್ಯಯಕ್ತಿಕ ರನ್ ಆಗಿದೆ.

ಜೋ ರೂಟ್(ಇಂಗ್ಲೆಂಡ್)
ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಜೋ ರೂಟ್ ಟಿ20 ವಿಶ್ವಕಪ್ ನಲ್ಲಿ ಐದು ಪಂದ್ಯಗಳನ್ನು ಆಡಿದ್ದು, 48.75ರ ಸರಾಸರಿಯಲ್ಲಿ 195 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಜೋಸನ್ ರಾಯ್(ಇಂಗ್ಲೆಂಡ್)
ಇನ್ನು ಇಂಗ್ಲೆಂಡ್ ತಂಡದ ಮತ್ತೊಬ್ಬ ಆಟಗಾರ ಜೋಸನ್ ರಾಯ್ ಅತಿ ಹೆಚ್ಚು ರನ್ ಪಡೆದ ಐದನೇ ಆಟಗಾರರಾಗಿದ್ದಾರೆ. ಐದು ಪಂದ್ಯಗಳನ್ನಾಡಿರುವ ಜೋಸನ್ ರಾಯ್ 36.60ರ ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ಹೆಚ್ಚು ವಿಕೆಟ್ ಪಡೆದ ಆಟಗಾರರು
2016ರ ವಿಶ್ವಕಪ್ ನಲ್ಲಿ ಅತೆ ಹೆಚ್ಚು ವಿಕೆಟ್ ಪಡೆದ ಆಟಗಾರರ ಪೈಕಿ ಆಫ್ಘಾನಿಸ್ತಾನದ ಇಬ್ಬರು ಆಟಗಾರರು ಅಗ್ರಮಾನ್ಯ ಸ್ಥಾನದಲ್ಲಿದ್ದಾರೆ.

ಮೊಹಮ್ಮದ್ ನಬಿ(ಆಫ್ಘಾನಿಸ್ತಾನ)
ಆಫ್ಘಾನಿಸ್ತಾನದ ಮೊಹಮ್ಮದ್ ನಬಿ 7 ಪಂದ್ಯಗಳನ್ನು ಆಡಿದ್ದು, 27 ಓವರ್ ಗಳನ್ನು ಮಾಡಿದ್ದಾರೆ. ಈ ಪೈಕಿ 12 ವಿಕೆಟ್ ಪಡೆಯುವ ಮೂಲಕ ಅಗ್ರಸ್ತಾನದಲ್ಲಿದ್ದಾರೆ.

ರಶೀದ್ ಖಾನ್(ಆಫ್ಘಾನಿಸ್ತಾನ)
ಆಫ್ಘಾನಿಸ್ತಾನ ರಶೀದ್ ಖಾನ್ 7 ಪಂದ್ಯಗಳಲ್ಲಿ 11 ವಿಕೆಟ್ ಪಡೆಯುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

ಇಸಾ ಸೋಧಿ(ನ್ಯೂಜಿಲೆಂಡ್)
ನ್ಯೂಜಿಲೆಂಡ್ ನ ಇಸಾ ಸೋಧಿ ಐದು ಪಂದ್ಯಗಳ ಪೈಕಿ 10 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಮಿಚೇಲ್ ಸ್ಟಾನ್ನರ್(ನ್ಯೂಜಿಲೆಂಡ್)
ನ್ಯೂಜಿಲೆಂಡ್ ನ ಮಿಚೇಲ್ ಸ್ಟಾನ್ನರ್ ಐದು ಪಂದ್ಯಗಳ ಪೈಕಿ 10 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶಕೀಬ್ ಅಲ್ ಹಸನ್(ಬಾಂಗ್ಲಾದೇಶ)
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಟೂರ್ನಿಯಲ್ಲಿ 7 ಪಂದ್ಯಗಳ ಪೈಕಿ 6 ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಮಾಡಿದ್ದು, 10 ವಿಕೆಟ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com