ನೋವಿನಿಂದ ಹೊರಬರಲು ಸಮಯಬೇಕು: ಇಯಾನ್ ಮಾರ್ಗನ್

ಇನ್ನೇನು ಗೆಲುವು ನಮ್ಮದೇ ಎಂದು ಭಾವಿಸಿದ್ದ ಹೊತ್ತಲ್ಲೇ ವಿಂಡೀಸ್ ತಂಡ ಬ್ರಾಥ್ ವೇಟ್ ಸತತ ನಾಲ್ಕು ಸಿಕ್ಸರ್ ಗಳ ಮೂಲಕ ಗೆಲುವನ್ನು ಕಸಿದುಕೊಂಡಿದ್ದರು. ಈ ನೋವನ್ನು ಮರೆಯಲು ನಮಗೆ ಸಮಯ ಬೇಕು..
ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (ಸಂಗ್ರಹ ಚಿತ್ರ)
ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (ಸಂಗ್ರಹ ಚಿತ್ರ)
Updated on

ಲಂಡನ್: ಇನ್ನೇನು ಗೆಲುವು ನಮ್ಮದೇ ಎಂದು ಭಾವಿಸಿದ್ದ ಹೊತ್ತಲ್ಲೇ ವಿಂಡೀಸ್ ತಂಡ ಬ್ರಾಥ್ ವೇಟ್ ಸತತ ನಾಲ್ಕು ಸಿಕ್ಸರ್ ಗಳ ಮೂಲಕ ಗೆಲುವನ್ನು ಕಸಿದುಕೊಂಡಿದ್ದರು. ಈ ನೋವನ್ನು ಮರೆಯಲು  ನಮಗೆ ಸಮಯ ಬೇಕು ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಯಾನ್ ಮಾರ್ಗನ್ ಅವರು, ಅನಿರೀಕ್ಷಿತ ಸೋಲು ನಮಗೆ ತುಂಬಾ ನೋವು ತಂದಿದ್ದು, ಇದರಿಂದ ಹೊರಬರಲು ಕೆಲ ದಿನಗಳ ಸಮಯಬೇಕು. ಒಂದು  ಯಶಸ್ಸನ್ನು ಹೇಗೆ ಎಲ್ಲರ ಜೊತೆ ಹಂಚಿಕೊಳ್ಳುತ್ತೆವೆಯೋ ಅದೇ ರೀತಿ ಸೋಲಿನ ನೋವನ್ನೂ ಹಂಚಿಕೊಂಡು ಮರೆಯುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

‘ನಮ್ಮ ತಂಡವನ್ನು ಬೆಂಬಲಿಸಲು ಈಡನ್ ಅಂಗಳದಲ್ಲಿ ಹೆಚ್ಚು ಜನ ಸೇರಿದ್ದರು. ಪಂದ್ಯದ ಕೊನೆಯವರೆಗೂ ಅವರು ನಮಗೆ ಪ್ರೋತ್ಸಾಹಿಸಿದರು. ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗ ಬಹುದು ಎನ್ನುವುದಕ್ಕೆ  ಫೈನಲ್‌ ಪಂದ್ಯ ಅತ್ಯುತ್ತಮ ಉದಾಹರಣೆ. ಆದರೂ ನಮ್ಮ ತಂಡದ ಆಟಗಾರರ ಬಗ್ಗೆ ಹೆಮ್ಮೆಯಿದೆ. ಫೈನಲ್‌ ಪಂದ್ಯಕ್ಕೂ ಮೊದಲೇ ಈ ಮಾತನ್ನು ಹೇಳಿದ್ದೆ. ವಿಶ್ವ ಟೂರ್ನಿಯಲ್ಲಿ ಫೈನಲ್ ಹಂತದ  ವರೆಗೂ ಬರಲು ಪ್ರತಿಯೊಬ್ಬರೂ ಶ್ರಮಿಸಿದ್ದಾರೆ. ಎಲ್ಲ ಆಟಗಾರರಿಗೆ ನಾನು ಧನ್ಯವಾದ ಹೇಳುತ್ತೇನೆ’ ಎಂದು ಮಾರ್ಗನ್ ಹೇಳಿದರು.

ಬೆನ್ ಸ್ಟೋಕ್ಸ್ ದುಃಖವನ್ನು ಹಂಚಿಕೊಳ್ಳುತ್ತೇವೆ
ಇದೇ ವೇಳೆ ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ಚಚ್ಚಿಸಿಕೊಂಡ ತಂಡದ ಬೌಲರ್ ಬೆನ್ ಸ್ಟೋಕ್ಸ್ ಬಗ್ಗೆ ಮಾತನಾಡಿದ ಮಾರ್ಗನ್, ಸ್ಟೋಕ್ಸ್ ಅವರ ದುಃಖ ನಮಗೆ ತಿಳಿದಿದೆ. ಅವರ ದುಃಖದಲ್ಲಿ  ನಾವು ಕೂಡ ಪಾಲುದಾರರಾಗಿದ್ದು, ಅವರೊಂದಿಗೆ ನಾವಿದ್ದೇವೆ ಎಂದು ಮಾರ್ಗನ್ ಬೆಂಬಲ ಸೂಡಿಸಿದರು.

ಈಡನ್ ಗಾರ್ಡನ್ ನಲ್ಲಿ ಭಾನುವಾರ ರಾತ್ರಿ ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಕೊನೆಯ ಓವರ್‌ನಲ್ಲಿ ವಿಂಡೀಸ್‌ ಜಯಕ್ಕೆ 19 ರನ್ ಅಗತ್ಯವಿತ್ತು. ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನ ಮೊದಲ ನಾಲ್ಕೂ  ಎಸೆತಗಳನ್ನು ಚಾರ್ಲೊಸ್‌ ಬ್ರಾಥ್‌ವೈಟ್‌ ಸಿಕ್ಸರ್ ಸಿಡಿಸುವ ಮೂಲಕ ಆಂಗ್ಲರ ತಂಡದ ಗೆಲುವಿನ ಆಸೆಯನ್ನು ನುಚ್ಚು ನೂರು ಮಾಡಿದ್ದರು.ಇಂಗ್ಲೆಂಡ್ ಪಂದ್ಯ ಸೋಲುತ್ತಿದ್ದಂತೆಯೇ ಬೆನ್‌ ಸ್ಟೋಕ್ಸ್‌  ಕಂಗಾಲಾಗಿ ಕುಳಿತರು. ಈ ತಂಡದ ಆಟಗಾರರು ಏನೂ ತೋಚದವರಂತೆ ನಿಂತು ಬಿಟ್ಟಿದ್ದರು. ಕೆಲ ನಿಮಿಷಗಳ ಬಳಿಕ ಸ್ಟೋಕ್ಸ್‌ ಬಳಿ ಬಂದ ನಾಯಕ ಎಯಾನ್ ಮಾರ್ಗನ್‌ ಅವರನ್ನು ಸಮಾಧಾನ  ಪಡಿಸುವ ಯತ್ನ ಮಾಡುತ್ತಲೇ ಸ್ಟೋಕ್ಸ್‌ ಜೊತೆ ಕಣ್ಣೀರು ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com