ಐಪಿಎಲ್-9: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ದೆಹಲಿ ಗೆ ಭರ್ಜರಿ ಜಯ

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ದೆಹಲಿ ಡೇರ್ ಡೆವಿಲ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ..
ಅಮಿತ್ ಮಿಶ್ರಾ ಬೌಲಿಂಗ್ ಕ್ಷಣ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಅಮಿತ್ ಮಿಶ್ರಾ ಬೌಲಿಂಗ್ ಕ್ಷಣ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನವದೆಹಲಿ: ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ದೆಹಲಿ ಡೇರ್ ಡೆವಿಲ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತ್ ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಮಿತ್ ಮಿಶ್ರಾ ಅವರ ಮಾರಕ ಬೌಲಿಂಗ್ ಗೆ ತತ್ತರಿಸಿ ಹೋಯಿತು. ಆರಂಭಿಕ ಆಟಗಾರ ವ್ಹೋರಾ (32 ರನ್) ಅವರನ್ನು  ಹೊರತು ಪಡಿಸಿದರೆ ಕಿಂಗ್ಸ್ ಇಲೆವೆನ್ ನ ಇನ್ನಾವುದೇ ಆಟಗಾರ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರು ಪ್ರಯತ್ನ ಮಾಡಲಿಲ್ಲ. ಪರಿಣಾಮ ಪಂಜಾಬ್ ತಂಡ ನಿಗದಿತ 20 ಓರ್ ಗಳಲ್ಲಿ 9 ವಿಕೆಟ್  ಕಳೆದುಕೊಂಡು ಕೇವಲ 111 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.

ದೆಹಲಿ ಪರ ಅಮಿತ್ ಮಿಶ್ರಾ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಜಹೀರ್ ಖಾನ್, ಮಾರಿಸ್ ಮತ್ತು ಯಾದವ್ ತಲಾ 1 ವಿಕೆಟ್ ಪಡೆದರು.

ಪಂಜಾಬ್ ನೀಡಿದ 111 ರನ್ ಗಳ ಅಲ್ಪಮೊತ್ತವನ್ನು ಬೆನ್ನುಹತ್ತಿದ ದೆಹಲಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಇನ್ನಿಂಗ್ಸ್ ನ 3ನೇ ಓವರ್ ನಲ್ಲಿಯೇ ಎಸ್ ಎಸ್ ಐಯ್ಯರ್ ಔಟ್ ಆಗುವ  ಮೂಲಕ ದೆಹಲಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಆದರೆ ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಡಿಕಾಕ್ ಉತ್ತಮ ಆರಂಭ ಒದಗಿಸಿಕೊಟ್ಟರು. ಸ್ಯಾಮ್ಸನ್ ಜೊತೆಗೂಡಿದ  ಡಿಕಾಕ್ 42 ಎಸೆತಗಳನ್ನು ಎದುರಿಸಿ ಅಜೇಯ 59 ರನ್ ಸಿಡಿಸಿದರು.

ಸ್ಯಾಮಸನ್ ಕೂಡ 32 ಎಸೆತಗಳಲ್ಲಿ 33 ರನ್ ಗಳಿಸುವ ಮೂಲಕ ಕಾಕ್ ಗೆ ಉತ್ತಮ ಸಾಥ್ ನೀಡಿದರು. ಇನ್ನೇನು ದೆಹಲಿ ಪಂದ್ಯ ಗೆದ್ದೇ ಬಿಟ್ಟಿತು ಎನ್ನು ಸಂದರ್ಭದಲ್ಲಿ ಸ್ಯಾಮ್ಸನ್ ಪಟೇಲ್ ಗೆ  ವಿಕೆಟ್ ಒಪ್ಪಿಸಿದರು. ನಂತರ ಬಂದ ನೇಗಿ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು.

ಪಂಜಾಬ್ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ ಮಿಶ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com