
ಮೈಂಡ್ ದ ವಿಂಡೋಸ್: ಮೈ ಸ್ಟೋರಿ ಎಂಬ ಆತ್ಮಕತೆಯಲ್ಲಿ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಗ ಟಿನೊ ಬೆಸ್ಟ್ ತಾನು 500ಕ್ಕೂ ಹೆಚ್ಚು ಮದನೆಯರ ಜತೆ ಮಲಗಿದ್ದಾಗೆ ಜಗಜ್ಜಾಹೀರು ಮಾಡಿದ್ದಾರೆ.
ಟಿನೊ ತನ್ನ ಬದುಕಿನ ರಸಿಕತನದ ರಸ ಕ್ಷಣಗಳನ್ನು ತಮ್ಮ ಆತ್ಮಕತೆಯಲ್ಲಿ ಬಿಡಿ ಬಿಡಿಯಾಗಿ ವರ್ಣಿಸಿದ್ದಾರೆ. ಪತ್ನಿ ಮೆಲಿಸ್ಸಾರಿಂದ ವಿಚ್ಛೇದನ ಪಡೆದ ನಂತರವಷ್ಟೇ ರಾಸಲೀಲೆಗಳಲ್ಲಿ ಮಿಂದೆದಿದ್ದಾಗಿ ಹೇಳಿಕೊಂಡಿದ್ದಾರೆ.
ಪುಸ್ತಕದಲ್ಲಿ ತಮ್ಮನ್ನು ತಾವು ಗಂಡು ವೇಶ್ಯೆ ಎಂದು ಟಿನೊ ಕರೆದುಕೊಂಡಿದ್ದಾರೆ. ಇಲ್ಲಿಯವರೆಗೂ ತನ್ನ ರಾಸಲೀಲೆಗಳನ್ನು ಪಾಪಪ್ರಜ್ಞೆಯಂಥ ಭಾವದಡಿ ಎಲ್ಲೂ ಹೇಳಿಕೊಂಡಿರಲಿಲ್ಲವಂತೆ. ಆದರೆ ತಮ್ಮ ಪುಸ್ತಕದಲ್ಲಿ ಸಹಜವಾಗಿ, ತೀರಾ ಲವಲವಿಕೆಯಿಂದಲೇ ಆಪ್ತರೊಂದಿಗೆ ತಮ್ಮ ಆಪ್ತ ವಿಚಾರಗಳನ್ನು ಹೇಳಿಕೊಂಡಂತೆ ಕಥಾವಸ್ತು ಸಾಗುತ್ತದೆ ಎಂದು ಹೇಳಿದ್ದಾರೆ.
ಕ್ರಿಕೆಟಿಗನಾಗಿದ್ದರಿಂದ ಇಷ್ಟೊಂದು ಹುಡುಗಿಯರ ಜತೆ ಪಲ್ಲಂಗ ಹಂಚಿಕೊಳ್ಳಲು ಸಾಧ್ಯವಾಯಿತು. ಪ್ರತಿ ಬಾರಿ ವೆಸ್ಟ್ ಇಂಡೀಸ್ ಅಥವಾ ಬಾರ್ಬಡಾಸ್ ತಂಡಗಳ ಜತೆ ಪ್ರವಾಸ ಕೈಗೊಳ್ಳುವಾಗಲೆಲ್ಲಾ ಈ ಬಾರಿ ಎಷ್ಟು ಹುಡುಗಿಯರ ಜತೆ ಮಲಗಬಲ್ಲೆ ಎಂಬುದನ್ನು ಯೋಚಿಸಿಯೇ ರೋಮಾಂಚನಗೊಳ್ಳುತ್ತಿದ್ದೆ. 2005ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಸುಮಾರು 40 ಹುಡುಗಿಯರೊಂದಿಗೆ ಡೇಟಿಂಗ್ ನಡೆಸಿದ್ದೆ ಎಂಬ ಪ್ರತಿಯೊಂದು ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ.
Advertisement