ಐಪಿಎಲ್: ಹ್ಯಾಟ್ರಿಕ್ ಗೆಲುವು ಸಾಧಿಸಿದ ಹೈದರಾಬಾದ್

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ನಿರ್ಹವಹಣೆ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಹ್ಯಾಟ್ರಿಕ್ ಗೆಲುವಿನ ಉಡುಗೊರೆ ನೀಡಿದೆ...
ಗೆಲುವಿನ ಸಂಭ್ರಮದಲ್ಲಿ ಹೈದರಾಬಾದ್ ತಂಡ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಗೆಲುವಿನ ಸಂಭ್ರಮದಲ್ಲಿ ಹೈದರಾಬಾದ್ ತಂಡ (ಚಿತ್ರಕೃಪೆ: ಕ್ರಿಕ್ ಇನ್ಫೋ)
Updated on

ಹೈದರಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ನಿರ್ಹವಹಣೆ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಹ್ಯಾಟ್ರಿಕ್ ಗೆಲುವಿನ ಉಡುಗೊರೆ ನೀಡಿದೆ.

ಶನಿವಾರ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ ಬರೊಬ್ಬರಿ 5 ವಿಕೆಟ್ ಗಳ ಅಂತರದ ಜಯ  ದಾಖಲಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಟೂರ್ನಿ ಆರಂಭದ ವೇಳೆ ಸತತ 2 ಪಂದ್ಯಗಳನ್ನು ಸೋಲುವ ಮೂಲಕ ಒತ್ತಡದಲ್ಲಿದ್ದ ವಾರ್ನರ್ ಪಡೆ ಬಳಿಕ ತಿರುಗಿ ಬಿದ್ದು ಸತತ ಮೂರು  ಪಂದ್ಯಗಳನ್ನು ಜಯಿಸಿದೆ.

ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರಕ್ಕೆ ಬಂತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್  ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 143 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ ಮುಸ್ತುಫಿಜುರ್ ಅವರು ಒಟ್ಟು  ನಾಲ್ಕು ಓವರ್ ಎಸೆದು ಕೇವಲ 9 ರನ್ ನೀಡಿ 2 ಮಹತ್ವದ ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡದ ಮೇಲೆ ಒತ್ತಡ ಹೇರಿದರು. ಉಳಿದಂತೆ ಹೆನ್ರಿಕ್ಸ್ 2 ವಿಕೆಟ್ ಗಳಿಸದರಾದರೂ 33  ರನ್ ನೀಡುವ ಮೂಲಕ ದುಬಾರಿಯಾದರು.

ಅತ್ತ ಕಿಂಗ್ಸ್ ತಂಡ ಹೈದರಾಬಾದ್ ತಂಡದ ಸಂಘಟಿತ ಬೌಲಿಂಗ್ ಪ್ರದರ್ಶನದ ಎದುರು ಮಂಕಾಗಿತ್ತು. ಶಾನ್ ಮಾರ್ಷ್ (40 ರನ್)ರನ್ನು ಹೊರತು ಪಡಿಸಿದರೆ ಪಂಜಾಬ್ ತಂಡದ ಮತ್ತಾವ  ಆಟಗಾರನೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಅಂತಿಮವಾಗಿ ಪಂಜಾಬ್ ತಂಡ ವಾರ್ನರ್ ಬಳಗಕ್ಕೆ ಗೆಲ್ಲಲು 144 ರನ್ ಗಳ ಗುರಿ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ  ಹೈದರಾಬಾದ್ ಗೆ ನಾಯಕ ವಾರ್ನರ್ ಅವರ ಅಮೋಘ ಅರ್ಧಶತಕ ಮತ್ತು ಶಿಖರ್ ಧವನ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಾಯಿತು.

ಕೇವಲ 31 ಎಸೆತಗಳನ್ನೆದುರಿಸಿದ ವಾರ್ನರ್  ಭರ್ಜರಿ 59 ರನ್ ಗಳಿಸಿದರೆ, ಧವನ್ 45 ರನ್ ಗಳಿಸಿ ಹೈದರಾಬಾದ್ ಗೆಲುವನ್ನು ಖಚಿತ ಪಡಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ಕೇವಲ 17.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146  ರನ್ ಗಳಿಸಿ ಪಂಜಾಬ್ ವಿರುದ್ಧ ಐದು ವಿಕೆಟ್ ಗಳ ಗೆಲುವು ಸಾಧಿಸಿತು. ಪ್ರಭಾವಿ ಬೌಲಿಂಗ್ ಮಾಡಿ ಪಂಜಾಬ್ ಅಲ್ಪ ಮೊತ್ತಕ್ಕೆ ಕಾರಣರಾದ ಮುಸ್ತಫಿಜುರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ  ಭಾಜನರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com