ಬಾಂಗ್ಲಾದೇಶ ಜನತೆಯ ಕ್ಷಮೆ ಯಾಚಿಸಿದ ಶಹಾದತ್ ಹುಸೇನ್

ಮನೆ ಕೆಲಸದ ಅಪ್ರಾಪ ಬಾಲಕಿ ಮೇಲೆ ಹಲ್ಲೆ ನಡೆಸಿ ಬಾಂಗ್ಲಾದೇಶ ಕ್ರಿಕೆಟ್‌ನಿಂದ ಅಮಾನತುಗೊಂಡಿದ್ದ ಕ್ರಿಕೆಟಿಗ ಶಹಾದತ್ ಹುಸೇನ್ ದೇಶದ ಜನತೆಯಲ್ಲಿ ಕ್ಷಮೆ ಕೇಳಿದ್ದು, ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ...
ಕ್ರಿಕೆಟಿಗ ಶಹಾದತ್ ಹುಸೇನ್ (ಸಂಗ್ರಹ ಚಿತ್ರ)
ಕ್ರಿಕೆಟಿಗ ಶಹಾದತ್ ಹುಸೇನ್ (ಸಂಗ್ರಹ ಚಿತ್ರ)

ಢಾಕಾ: ಮನೆ ಕೆಲಸದ ಅಪ್ರಾಪ ಬಾಲಕಿ ಮೇಲೆ ಹಲ್ಲೆ ನಡೆಸಿ ಬಾಂಗ್ಲಾದೇಶ ಕ್ರಿಕೆಟ್‌ನಿಂದ ಅಮಾನತುಗೊಂಡಿದ್ದ ಕ್ರಿಕೆಟಿಗ ಶಹಾದತ್ ಹುಸೇನ್ ದೇಶದ ಜನತೆಯಲ್ಲಿ ಕ್ಷಮೆ ಕೇಳಿದ್ದು, ಮತ್ತೆ   ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಹುಸೇನ್, "ಪ್ರಕರಣದ ಬಗ್ಗೆ ನನಗೆ ಅಗಾಧ ವಿಷಾಧವಿದ್ದು, ನನ್ನ ತಪ್ಪಿನ ಬಗ್ಗೆ ನನಗೆ ಅರಿವಾಗಿದೆ. ನನಗರಿವಿದ್ದೋ  ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದೆ. ಇದಕ್ಕಾಗಿ ರಾಷ್ಟ್ರದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ. ಕ್ರಿಕೆಟ್‌ಗಾಗಿ ನಾನು ಎಲ್ಲವನ್ನೂ ಅರ್ಪಿಸಿದ್ದೇನೆ. ನನ್ನ ಜೀವನದಲ್ಲಿ ಕ್ರಿಕೆಟ್  ಅತೀಮುಖ್ಯವಾಗಿದ್ದು, ನಾನು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಂಡಬೇಕು ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಹುಸೇನ್ ಮತ್ತು ಅವರ ಪತ್ನಿ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿ ಮೇಲೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ್ದರು. ಬಾಲಕಿಯಗಳನ್ನು ಸುಟ್ಟು  ಮನಬಂದಂತೆ ಆಕೆಯನ್ನು ಥಳಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ದಂಪತಿಗಳು ನಾಪತ್ತೆಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಾಂಗ್ಲಾ  ಕ್ರಿಕೆಟ್ ಮಂಡಳಿ ಶಹಾದತ್ ಹುಸೇನ್ ರನ್ನು 11 ವರ್ಷಗಳ ಅಮಾನತು ಮಾಡಿತ್ತು,

ನ್ಯಾಯಾಲಯದಲ್ಲೂ ಕೂಡ ಪ್ರಕರಣದ ವಿಚಾರಣೆ ನಡೆದಿತ್ತು. ಶಹಾದತ್ ಹುಸೇನ್ ದಂಪತಿ ನ್ಯಾಯಾಲಯಕ್ಕೆ ಶರಣಾದ ಬಳಿಕ ಅವರಿಗೆ ಶಿಕ್ಷೆಯಾಗಿತ್ತು. 29 ವರ್ಷದ ಶಹದತ್‌ ಬಾಂಗ್ಲಾ ಪರ  38 ಟೆಸ್ಟ್‌ ಮತ್ತು 51 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com