ಕುಮಾರ ಧರ್ಮಸೇನ-ವೀರೇಂದ್ರ ಸೆಹ್ವಾಗ್
ಕ್ರಿಕೆಟ್
ಟ್ವೀಟರ್‌ನಲ್ಲಿ ಅಂಪೈರ್ ಧರ್ಮಸೇನ ತಪ್ಪು ತೀರ್ಪನ್ನು ಅಣುಕಿಸಿದ ಸೆಹ್ವಾಗ್
ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಟ್ವೀಟ್ ಗಳ ಮೂಲಕ ಜನಪ್ರಿಯರಾಗಿದ್ದು ಇದೀಗ ಅವರು...
ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಟ್ವೀಟ್ ಗಳ ಮೂಲಕ ಜನಪ್ರಿಯರಾಗಿದ್ದು ಇದೀಗ ಅವರು ಶ್ರೀಲಂಕಾದ ಅಂಪೈರ್ ಕುಮಾರ ಧರ್ಮಸೇನ ಅವರ ಕಾಲೆಳೆದಿದ್ದಾರೆ.
ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ರನ್ನು ಔಟ್ ಎಂದು ಧರ್ಮಸೇನ ತೀರ್ಪು ನೀಡಿದ್ದರು. ಆದರೆ ಡಿಆರ್ಎಸ್ ನಲ್ಲಿ(ಡಿಸಿಷನ್ ರಿವ್ಯೂ ಸಿಸ್ಟಂ) ಆ ತೀರ್ಪು ತಪ್ಪೆಂದು ಸಾಬೀತಾಗಿತ್ತು. ಇದನ್ನು ಸೆಹ್ವಾಗ್ ಧರ್ಮಸೇನ ರಿವ್ಯೂ ಸಿಸ್ಟಂ ಎಂದು ಅಣಕವಾಡಿದ್ದಾರೆ.
ಈ ಹಿಂದೆ ಭಾರತ-ಬಾಂಗ್ಲಾದೇಶ ನಡುವೆ ಟೆಸ್ಟ್ ಪಂದ್ಯ ನಡೆದಿದ್ದಾಗ ಧರ್ಮಸೇನಾ ತಪ್ಪು ತೀರ್ಪು ನೀಡಿದ್ದರು. ಆದಲೇ ವೀರೂ ಧರ್ಮಸೇನ ರಿವ್ಯೂ ಸಿಸ್ಟಂ ಎಂಬ ಪದ ಬಳಕೆಯನ್ನು ಮೊದಲ ಬಾರಿಗೆ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ