4ನೇ ಟೆಸ್ಟ್: ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್, ತನ್ನ ಮೊದಲ ಪಂದ್ಯದಲ್ಲೇ ಜೆನ್ನಿಂಗ್ಸ್ ಆಕರ್ಷಕ ಶತಕ!

4ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಆರಂಭಿಕ ಹಿನ್ನಡೆಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಂಗ್ಲರು ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿ ಮತ್ತು ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ)
ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿ ಮತ್ತು ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ)

ಮುಂಬೈ: 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಆರಂಭಿಕ ಹಿನ್ನಡೆಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಂಗ್ಲರು ಉತ್ತಮ  ಬ್ಯಾಟಿಂಗ್ ನಡೆಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕುಕ್ ಮತ್ತು ಜೆನ್ನಿಂಗ್ಸ್ ಇಂಗ್ಲೆಂಡ್ ತಂಡಕ್ಕೆ  ಉತ್ತಮ ಅಡಿಪಾಯ ಹಾಕಿದರು. ಈ ಪೈಕಿ ಕುಕ್ 46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾಗ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರೆ, ಮೊತ್ತೊಂದು ತುದಿಯಲ್ಲಿ ಜೆನ್ನಿಂಗ್ಸ್ ಜೊತೆಗೂಡಿದ ಜೋರೂಟ್ 21 ರನ್ ಗಳಿಸಿ ಔಟ್  ಆದರು. ಬಳಿಕ ಅಲಿ ಜೊತೆಗೂಡಿದ ಜೆನ್ನಿಂಗ್ಸ್ ಉತ್ತಮ ಬ್ಯಾಟಿಂಗ್ ಮೂಲಕ ಆಕರ್ಷಕ ಶತಕ ಸಿಡಿಸಿದರು. ಈ ಹಂತದಲ್ಲಿ ದಾಳಿಗಿಳಿದ ಅಶ್ವಿನ್ ಅರ್ಧಶತಕ ಗಳಿಸಿದ್ದ ಅಲಿ ಅವರನ್ನು ಔಟ್ ಮಾಡಿದರು.

ಬಳಿಕ ಅದೇ ಓವರ್ ನಲ್ಲಿ ಜೆನ್ನಿಂಗ್ಸ್ ರನ್ನು ಕೂಡ ಔಟ್ ಮಾಡುವ ಮೂಲಕ ಅಶ್ವಿನ್ ಭಾರತಕ್ಕೆ ಮೇಲುಗೈ ಸಾಧಿಸಿಕೊಟ್ಟರು. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದು, ಬೇರ್ ಸ್ಟೋವ್  (5ರನ್) ಮತ್ತು ಸ್ಟೋಕ್ಸ್ (01) ಕ್ರೀಸ್ ಕಾಯ್ದುಕೊಂಡಿದ್ದು, ಮೊದಲ ದಿನದಾಟ ಅಂತ್ಯಗೊಳ್ಳಲು ಇನ್ನೂ 15 ಓವರ್ ಗಳ ಆಟ ಬಾಕಿ ಇದೆ.

ಭಾರತದ ಪರ ಆರ್ ಅಶ್ವಿನ್ 3 ವಿಕೆಟ್ ಕಬಳಿಸಿ ದಿನದ ಯಶಸ್ವೀ ಬೌಲರ್ ಎನಿಸಿಕೊಂಡರೆ, ಜಡೇಜಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com