ಕೊಹ್ಲಿ ಫಾರ್ಮ್ ಹೀಯಾಳಿಸಿದ್ದ ಆಂಡರ್ಸನ್ಗೆ ಪಾಕ್ ಮಾಜಿ ನಾಯಕ ಇಂಜಮಾಮ್ ತಿರುಗೇಟು

ಸದ್ಯ ಪ್ರಚಂಡ ಫಾರ್ಮ್ ನಲ್ಲಿರುವ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ತಾಂತ್ರಿಕತೆಯನ್ನೇ ಪ್ರಶ್ನಿಸಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್...
ಇಂಜಮಾಮ್ ಉಲ್ ಹಕ್, ಆಂಡರ್ಸನ್
ಇಂಜಮಾಮ್ ಉಲ್ ಹಕ್, ಆಂಡರ್ಸನ್
ನವದೆಹಲಿ: ಸದ್ಯ ಪ್ರಚಂಡ ಫಾರ್ಮ್ ನಲ್ಲಿರುವ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ತಾಂತ್ರಿಕತೆಯನ್ನೇ ಪ್ರಶ್ನಿಸಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ಗೆ ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ತಿರುಗೇಟು ನೀಡಿದ್ದಾರೆ. 
ವಿರಾಟ್ ಕೊಹ್ಲಿಯನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಅವರೊಬ್ಬ ಅತ್ಯುತ್ತಮ ಗುಣಮಟ್ಟದ ಆಟಗಾರ. ತಮ್ಮ ತಂಡವನ್ನು ಗೆಲ್ಲಿಸಲು ರನ್ ಹೊಳೆಯನ್ನೇ ಹರಿಸುತ್ತಾರೆ ಎಂದರು. ಇದೇ ವೇಳೆ ಇಂಗ್ಲೆಂಡ್ ನೆಲದಲ್ಲಿ ಅತ್ಯುತ್ತಮವಾಗಿ ಆಟವಾಡಿದರೆ ಮಾತ್ರ ಅವರನ್ನು ಉತ್ತಮ ಆಟಗಾರ ಎನ್ನವುದಕ್ಕೆ ಆಗುತ್ತದೆಯೇ. ಉಪ ಖಂಡದಲ್ಲಿ ವಿಫಲರಾಗುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರನ್ನು ಕಳಪೆ ಆಟಗಾರರು ಅಥವಾ ದುರ್ಬಲ ತಂಡ ಎನ್ನಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಕಳಪೆ ಪ್ರದರ್ಶನವನ್ನು ತೋರುತ್ತಿವೆ. ಇದಕ್ಕೆ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಮೇಲೆ ಸರಣಿ ಸೋತಾಗಲೇ ಅದು ಸಾಬೀತಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com