ನ್ಯೂಜಿಲೆಂಡ್ ಆಟಗಾರ ಬ್ರೂಮ್ 8 ವರ್ಷಗಳ ಬಳಿಕ ಚೊಚ್ಚಲ ಶತಕ ಸಾಧನೆ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 8 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮನ್ ನೀಲ್ ಬ್ರೂಮ್ ಚೊಚ್ಚಲ ಶತಕ ಸಿಡಿಸಿ ದಾಖಲೆ...
ನೀಲ್ ಬ್ರೂಮ್
ನೀಲ್ ಬ್ರೂಮ್
Updated on: 
ನೆಲ್ಸನ್: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 8 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮನ್ ನೀಲ್ ಬ್ರೂಮ್ ಚೊಚ್ಚಲ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. 
1973ರಲ್ಲಿ ಇಂಗ್ಲೆಂಡ್ ವಿರುದ್ಧ ಲೀಡ್ಸ್ ನಲ್ಲಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಭಾರತದ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 13 ವರ್ಷದ 110 ದಿನಗಳ ಬಳಿಕ ಏಕದಿನ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದು ಇಲ್ಲಿಯವರೆಗಿನ ವಿಶ್ವದಾಖಲೆಯಾಗಿದೆ. 
33 ವರ್ಷದ ನೀಲ್ ಬ್ರೂಮ್ 2009ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಕ್ಲೆಂಡ್ ನಲ್ಲಿ ನಡೆದ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ನಂತರ ಇತ್ತೀಚೆಗಷ್ಟೇ ತಂಡಕ್ಕೆ ವಾಪಸಾಗಿದ್ದರು. ಚೊಚ್ಚಲ ಶತಕಕ್ಕಾಗಿ ಅತಿಹೆಚ್ಚು ಸಮಯ ಕಾದ ವಿಶ್ವದ 3ನೇ ಹಾಗೂ ನ್ಯೂಜಿಲೆಂಡ್ ನ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 
ನ್ಯೂಜಿಲೆಂಡ್ ತಂಡದ ಜಾನ್ ರೈಟ್ 9 ವರ್ಷ 244 ದಿನಗಳ ಬಳಿಕ ಚೊಚ್ಚಲ ಶತಕ ಸಿಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com