
ಪಲ್ಲೆಕಿಲೆ: ಸಂಪೂರ್ಣ ಅನನುಭವಿಗಳಿಂದ ಕೂಡಿದ್ದರು ಶ್ರೀಲಂಕಾ 17 ವರ್ಷಗಳ ಬಳಿಕ ಬಲಾಡ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಂಗನಾ ಹೆರಾತ್ 2ನೇ ಇನ್ನಿಂಗ್ಸ್ ನಲ್ಲಿ ತೋರಿದ ಕರಾರುವಾಕ್ ಸ್ಪಿನ್ ದಾಳಿಯಿಂದ ಲಂಕಾ 106 ರನ್ ಗಳಿಂದ ಆಸೀಸ್ ತಂಡವನ್ನು ಮಣಿಸಿ ಶಾಕ್ ನೀಡಿದೆ. ಇದರೊಂದಿಗೆ ಲಂಕಾ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮುತ್ತಯ್ಯ ಮುರುಳೀಧರನ್, ಜಯವರ್ಧನೆ, ಜಯಸೂರ್ಯ, ಸಂಗಕ್ಕರ, ದಿಲ್ಶಾನ್ ಒಳಗೊಂಡ ಬಲಿಷ್ಠ 17 ವರ್ಷಗಳ ಹಿಂದೆ ಅಂದರೆ 1999ರ ಸೆಪ್ಟೆಂಬರ್ ನಲ್ಲಿ ಕ್ಯಾಂಡಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು.
Advertisement