ಮಹಿಳಾ ಕ್ರಿಕೆಟ್ ತಂಡಕ್ಕೆ ಅಗ್ರಪಟ್ಟ ನನ್ನ ಪ್ರಮುಖ ಗುರಿ: ಅನುರಾಗ್ ಠಾಕೂರ್

ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು 2020ರ ಒಳಗೆ ನಂ.1 ಪಟ್ಟಕ್ಕೆ ಏರಿಸುವುದೇ ನನ್ನ ಗುರಿ ಎಂದು ನೂತನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ ಹೇಳಿದ್ದಾರೆ...
ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)
ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು 2020ರ ಒಳಗೆ ನಂ.1 ಪಟ್ಟಕ್ಕೆ ಏರಿಸುವುದೇ ನನ್ನ ಗುರಿ ಎಂದು ನೂತನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಠಾಕೂರ್‌, ಪುರುಷರ ವಿಭಾಗದಲ್ಲಿ ಭಾರತ ತಂಡ ಸಾಕಷ್ಟು ಬಲಿಷ್ಠವಾಗಿದೆ. ಇದೇ ರೀತಿ ಮಹಿಳಾ ಕ್ರಿಕೆಟ್ ತಂಡ ಕೂಡ   ಅದೇ ಮಟ್ಟದ ಪ್ರದರ್ಶನ ನೀಡುವತ್ತ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಮೇಲೆ ಕೂಡ ಹೆಚ್ಚಿನ ಗಮನ ಹರಿಸಲಾಗುವುದು. ಈ ನಿಟ್ಟಿನಲ್ಲಿ  ಆಟಗಾರರಿಗೆ ಸೂಕ್ತ ತರಬೇತಿ ನೀಡಿ 2020ರ ಒಳಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಅಗ್ರ ಸ್ಥಾನ ಅಲಂಕರಿಸುವಂತಾಗಬೇಕು ಎಂದು ಹೇಳಿದರು.

ಅಂತೆಯೇ "ಮಹಿಳಾ ಟಿ20 ಪಂದ್ಯಗಳಿಗೂ ಹೆಚ್ಚಿನ ಗಮನ ನೀಡಿ, ಮಹಿಳೆಯರು ಇಚ್ಛಿಸಿದರೆ ಆಸ್ಟ್ರೇಲಿಯಾದ ಬಿಗ್​ಬ್ಯಾಶ್ ಮಾದರಿಯಲ್ಲಿ ದೇಶಿಯ ಟೂರ್ನಿ ಆಯೋಜನೆ ಮಾಡುವ ಕುರಿತು  ನಿರ್ಧರಿಸುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಠಾಕುರ್ ತಿಳಿಸಿದರು.

ನಿನ್ನೆಯಷ್ಟೇ ಭಾರತೀಯ ಮಹಿಳಾ ಕ್ರಿಕೆಟ್ ಕಮಿಟಿ ವಿದೇಶಿ ಕ್ರಿಕೆಟ್ ಲೀಗ್​ಗಳಲ್ಲಿ ಪಾಲ್ಗೊಳ್ಳುವ ಕುರಿತು ಬಿಸಿಸಿಐನ ಅನುಮತಿ ಪಡೆದಿತ್ತು. ನಾಯಕಿ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ  ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಂತರದ ಸ್ಥಾನವನ್ನು ಅಲಂಕರಿಸಿವೆ. ಭಾರತದಲ್ಲೇ ನಡೆದ  ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಹೊರನಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com