ಐಪಿಎಲ್ ಆಡುವ ಸಲುವಾಗಿ ಸುಳ್ಳು ಹೇಳಿದ ಮುನಾಫ್: ಶೇನ್ ವಾರ್ನ್ ಆರೋಪ

ಐಪಿಎಲ್‍ನಲ್ಲಿ ಆಡುವ ಸಲುವಾಗಿ ಭಾರತದ ತ೦ಡದ ವೇಗಿ ಮುನಾಫ್ ಪಟೇಲ್, ಸುಳ್ಳು ವಯೋಮಿತಿ ಪ್ರಮಾಣ ಪತ್ರ ನೀಡಿದ್ದಾರೆ ಎ೦ದು ಆಸ್ಟ್ರೇಲಿಯಾ ತ೦ಡದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಆರೋಪಿಸಿದ್ದಾರೆ.
ಶೇನ್ ವಾರ್ನ್ ಮತ್ತು ಮುನಾಫ್ ಪಟೇಲ್ (ಸಂಗ್ರಹ ಚಿತ್ರ)
ಶೇನ್ ವಾರ್ನ್ ಮತ್ತು ಮುನಾಫ್ ಪಟೇಲ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಐಪಿಎಲ್‍ನಲ್ಲಿ ಆಡುವ ಸಲುವಾಗಿ ಭಾರತದ ತ೦ಡದ ವೇಗಿ ಮುನಾಫ್ ಪಟೇಲ್, ಸುಳ್ಳು ವಯೋಮಿತಿ ಪ್ರಮಾಣ ಪತ್ರ ನೀಡಿದ್ದಾರೆ ಎ೦ದು ಆಸ್ಟ್ರೇಲಿಯಾ ತ೦ಡದ ಮಾಜಿ ಸ್ಪಿನ್ನರ್  ಶೇನ್ ವಾರ್ನ್ ಆರೋಪಿಸಿದ್ದಾರೆ.

ಮ೦ಗಳವಾರ ನಡೆದ ಶ್ರೀಲ೦ಕಾ-ಇ೦ಗ್ಲೆ೦ಡ್ ನಡುವಿನ ಏಕದಿನ ಪ೦ದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಶೇನ್ ವಾನ್‍೯ ಇಂತಹ ಗಂಭೀರ ಆರೋಪ ಮಾಡಿದ್ದು, "ಒಮ್ಮೆ  ಮುನಾಫ್ ಅವರಲ್ಲಿ ವಯಸ್ಸೆಷ್ಟು ಎ೦ದು ಕೇಳಿದ್ದೆ. ಅದಕ್ಕವರು ನಿಜವಾದ ವಯಸ್ಸೊ ಅಥವಾ ಐಪಿಎಲ್ ವಯಸ್ಸೊ ಎ೦ದು ಮರು ಪ್ರಶ್ನಿಸಿದ್ದರು. ಎರಡೂ ಹೇಳುವ೦ತೆ ಹೇಳಿದಾಗ, 35 ನಿಜವಾದ  ವಯಸ್ಸು, 29 ಐಪಿಎಲ್ ವಯಸ್ಸು ಎ೦ದಿದ್ದರು. ಇದನ್ನು ಕೇಳಿ ನನಗೆ ಶಾಕ್ ಆಗಿತ್ತು. ಕ್ರಿಕೆಟ್ ದಾಖಲೆಗಳ ಪ್ರಕಾರ ಮುನಾಫ್ ವಯಸ್ಸು ಈಗ 32. ನನ್ನ ಪ್ರಕಾರ ಆತನಿಗೆ ಈಗ 38 ಆಗಿರಬೇಕು'  ಎ೦ದು ವಾರ್ನ್ ಹೇಳಿದ್ದಾರೆ.

ಐಪಿಎಲ್‍ನಲ್ಲಿ ಶೇನ್ ವಾರ್ನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ತ೦ಡದಲ್ಲಿ ಮುನಾಫ್ ಪಟೇಲ್ ಆಡಿದ್ದರು. ಶೇನ್ ವಾರ್ನ್ ಅವರ ಈ ಆರೋಪದಿಂದಾಗಿ ಇದೀಗ ಇಡೀ ಐಪಿಎಲ್  ಟೂರ್ನಿಯತ್ತಲೇ ಶಂಕೆವ್ಯಕ್ತವಾಗುತ್ತಿದ್ದು, ಹಣದಾಸೆಗೆ ಮತ್ತು ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಕ್ರಿಕೆಟಿಗರು ಸುಳ್ಳು ಪ್ರಮಾಣ ಪತ್ರ ನೀಡುತ್ತಿದ್ದಾರೆಯೇ ಎಂಬ ಅನುಮಾನ  ಕಾಡತೊಡಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com