ಮತ್ತೆ ವಿವಾದದಲ್ಲಿ ಇಂಡೋ-ಪಾಕ್ ಪಂದ್ಯ: ಎಟಿಎಫ್ಐನಿಂದ ಬೆದರಿಕೆ

ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕೋಲ್ಕತಾಗೆ ರವಾನೆಯಾಗಿದ್ದರೂ, ವಿವಾದ ಮಾತ್ರ ಇನ್ನೂ ಬೆನ್ನು ಬಿಟ್ಟಿಲ್ಲ.
ಇಂಡೋ-ಪಾಕ್ ಪಂದ್ಯ (ಸಂಗ್ರಹ ಚಿತ್ರ)
ಇಂಡೋ-ಪಾಕ್ ಪಂದ್ಯ (ಸಂಗ್ರಹ ಚಿತ್ರ)

ಕೋಲ್ಕತಾ: ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕೋಲ್ಕತಾಗೆ ರವಾನೆಯಾಗಿದ್ದರೂ, ವಿವಾದ ಮಾತ್ರ ಬೆನ್ನು ಬಿಟ್ಟಿಲ್ಲ.

ಮೂಲಗಳ ಪ್ರಕಾರ ಕೋಲ್ಕತಾದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೂ ವಿವಾದದ ಕರಿನೆರಳು ಹಬ್ಬಿದ್ದು, ಕೋಲ್ಕತಾದಲ್ಲಿ ನಡೆಯಲಿರುವ ಪಂದ್ಯಕ್ಕೆ  ಅಡ್ಡಿಪಡಿಸುವ ಕುರಿತು ಸಂಘಟನೆಯೊಂದು ಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಈ ಹಿಂದೆ ಧರ್ಮಶಾಲಾದಲ್ಲಿ ನಡೆಯುವ ಪಂದ್ಯಕ್ಕೆ ಪಿಚ್ ಅಗೆಯುವ ಬೆದರಿಕೆ  ಹಾಕಿದ್ದ ಅದೇ ಆ್ಯಂಟಿ ಟೆರರಿಸ್ಟ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಇದೀಗ ಕೋಲ್ಕತಾ ಪಂದ್ಯಕ್ಕೂ ಬೆದರಿಕೆ ಹಾಕಿದೆ ಎಂದು ಹೇಳಲಾಗುತ್ತಿದೆ.

ಕೋಲ್ಕತಾದಲ್ಲಿ ನಡೆಯಲಿರುವ ಪಂದ್ಯಕ್ಕೂ ಎಟಿಎಫ್ಐ ಬೆದರಿಕೆ ಹಾಕಿದ್ದು, ಮುಂಬೈ ಮತ್ತು ಪಠಾಣ್ ಕೋಟ್ ದಾಳಿಕೋರರಾದ ಹಫೀಜ್ ಸಯ್ಯೀದ್ ಮತ್ತು ಮಸೂದ್ ಅಜರ್ ರನ್ನು ಭಾರತದ  ವಶಕ್ಕೆ ನೀಡದ ಹೊರತು ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್ ಆಡಲು ತಾನು ಅವಕಾಶ ನೀಡುವುದಿಲ್ಲ. ಒಂದು ವೇಳೆ ಪಾಕಿಸ್ತಾನಿ ಕ್ರಿಕೆಟಿಗರು ಭಾರತದಲ್ಲಿ ಕ್ರಿಕೆಟ್ ಆಡಿದರೆ ಅದು ನಮ್ಮ ಯೋಧರಿಗೆ  ಮಾಡುವ ಅವಮಾನವಾಗುತ್ತದೆ. ಹೀಗಾಗಿ ಈಡನ್ ಗಾರ್ಡೆನ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೆ ಅಲ್ಲಿ ಕೂಡ ಪಿಚ್ ಅನ್ನು ನಾಶ ಪಡಿಸುತ್ತೇವೆ ಎಂದು ಎಟಿಎಫ್ಐ ಬೆದರಿಕೆ ಹಾಕಿದೆ ಎಂದು  ತಿಳಿದುಬಂದಿದೆ.

ನಿನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ-ಐಸಿಸಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಐಸಿಸಿಟಿ20 ವಿಶ್ವಕಪ್ ಪಂದ್ಯವನ್ನು ಕೋಲ್ಕತಾಗೆ  ಸ್ಥಳಾಂತರಿಸಲು ಅನುಮತಿ ನೀಡಿತ್ತು. ಇದೇ ಮಾರ್ಚ್ 19ರಂದು ಪಂದ್ಯ ನಿಗದಿಯಾಗಿದ್ದು, ಇದೀಗ ಈ ಪಂದ್ಯಕ್ಕೂ ಬೆದರಿಕೆಗಳು ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com