ಈಡನ್ ನಲ್ಲಿ ರೋಹಿತ್ ಅಬ್ಬರಕ್ಕೆ ವಿಂಡೀಸ್ ತತ್ತರ

ಏಷ್ಯಾಕಪ್ ಗೆಲುವಿನ ಸರಣಿಯನ್ನು ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ನಲ್ಲಿಯೂ ಮುಂದುವರೆಸುವ ಸೂಚನೆ ನೀಡಿದ್ದು, ಗುರುವಾರ ಕೋಲ್ಕಾತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 45 ರನ್ ಗಳ ಭರ್ಜರಿ ಜಯ ಸಾಧಿಸಿದೆ...
ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ (ಸಂಗ್ರಹ ಚಿತ್ರ)
ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ (ಸಂಗ್ರಹ ಚಿತ್ರ)

ಕೋಲ್ಕತಾ: ಏಷ್ಯಾಕಪ್ ಗೆಲುವಿನ ಸರಣಿಯನ್ನು ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ನಲ್ಲಿಯೂ ಮುಂದುವರೆಸುವ ಸೂಚನೆ ನೀಡಿದ್ದು, ಗುರುವಾರ ಕೋಲ್ಕಾತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ  ನಡೆದ ಅಭ್ಯಾಸ ಪಂದ್ಯದಲ್ಲಿ 45 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಕೋಲ್ಕತಾದ ಈಡನ್ ಗಾರ್ಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್  ಇಂಡೀಸ್ ವಿರುದ್ಧ 45 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಏಷ್ಯಾಕಪ್ ನಲ್ಲಿ ಮಂಕಾಗಿದ್ದ ರೋಹಿತ್ ಶರ್ಮಾ ಟಿ20 ವಿಶ್ವಕಪ್ ನಲ್ಲಿ ಮಿಂಚುವ ಸೂಚನೆ ನೀಡಿದ್ದು, ಏಕದಿನ ಕ್ರಿಕೆಟ್ ಚರಿತ್ರೆಯ  ಸರ್ವಾಧಿಕ ರನ್ (264) ಸಿಡಿಸಿದ್ದ ಈಡನ್ ಗಾರ್ಡನ್ಸ್ ಮೈದಾನದಲ್ಲೇ ರೋಹಿತ್ ಶರ್ಮ ವಿಂಡೀಸ್ ವಿರುದ್ಧ (98 ರನ್) ಮತ್ತೊಮ್ಮೆ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದಾರೆ. ಒಟ್ಟು 57 ಎಸೆತಗಳನ್ನು  ಎದುರಿಸಿದ ರೋಹಿತ್, 9 ಬೌಂಡರ್ ಹಾಗೂ 7 ಸಿಕ್ಸರ್ ಗಳ ಸಹಾಯದಿಂದ 987 ರನ್ ಗಳಿಸಿದರು. ರೋಹಿತ್ ಉತ್ತಮ ಸಾಥ್ ನೀಡಿದ ಯುವರಾಜ್ ಸಿಂಗ್ (31 ರನ್) ಗಳಿಸುವ ಮೂಲಕ  ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನುಹತ್ತಿದ ವೆಸ್ಟ್ ಇಂಡೀಸ್ ಆರಂಭದಿಂದಲೂ ಕುಸಿಯುತ್ತಾ ಸಾಗಿತು. ವಿಂಡೀಸ್ ತಂಡದ ಸ್ಟಾರ್ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ (20 ರನ್), ಜಾನ್ಸನ್ ಚಾರ್ಲ್ಸ್  (18ರನ್),  ಆಂಡ್ರೆ ರಸೆಲ್ (19 ರನ್), ಬಿರುಸಿನ ಆಟವಾಡಲು ಯತ್ನಿಸಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಟಿ20 ಸ್ಪೆಷಲಿಸ್ಟ್‌ಗಳಾದ ಮರ್ಲಾನ್ ಸ್ಯಾಮ್ಯುಯೆಲ್ಸ್ (17) ಹಾಗೂ ಡ್ವೇನ್  ಬ್ರಾವೊ (13) ಕೂಡ ವಿಫಲರಾದರು. ಅಂತಿಮವಾಗಿ ವಿಂಡೀಸ್ ತಂಡ ನಿಗದಿತ 19.2 ಓವರ್ ಗಳಲ್ಲಿ ತನ್ನೆಲ್ಲಾ ವಿರೆಟ್ ಕಳೆದುಕೊಂಡು 140 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ  ಭಾರತ ತಂಡ 45 ರನ್ ಗಳ ಭರ್ಜರಿ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com