
ನವದೆಹಲಿ: ಟೀಂ ಇಂಡಿಯಾ ವಿಶ್ವಕಪ್ ಟಿ20 ಗೆಲ್ಲುವ ಫೇವರಿಟ್ ತಂಡವಾಗಿದ್ದು, ತಂಡವು ಸಮತೋಲಿತವಾಗಿದೆ ಎಂದು ಟೀಂ ಇಂಡಿಯಾದ ಆಲ್ರೌಂಡರ್ ಯೂಸುಫ್ ಪಠಾಣ್ ಹೇಳಿದ್ದಾರೆ.
ಇನ್ನು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದು ಅವರ ಆಟ ನೋಡಲು ಸೊಗಸಾಗಿರುತ್ತದೆ ಎಂದು ಪಠಾಣ್ ಬಣ್ಣಿಸಿದ್ದಾರೆ.
ತಂಡ ಎಂತಹ ಒತ್ತಡದಲ್ಲಿದ್ದರು ವಿರಾಟ್ ಅದ್ಬುತವಾಗಿ ಬ್ಯಾಟ್ ಬೀಸುತ್ತಾರೆ. ಅವರ ಬ್ಯಾಟಿಂಗ್ ಶೈಲಿ ಎಲ್ಲರನ್ನೂ ಮುದಗೊಳಿಸುತ್ತದೆ. ನಾನು ಅವರ ಬ್ಯಾಟಿಂಗ್ ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ.
Advertisement