ನವದೆಹಲಿ: ಒಂದು ಕಡೆ ಕೋಲ್ಕತಾದಲ್ಲಿ ಭಾರತ-ಪಾಕಿಸ್ತಾನ ಹೈ ವೋಲ್ಟೋಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದೆಹಲಿಯಲ್ಲಿ ನಡೆದ ಟಿ20 ವಿಶ್ವಕಪ್ ಮಹಿಳೆಯರ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 2ರನ್ ಗಳಿಂದ ಪರಾಭವಗೊಂಡಿದೆ.
ಪಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, 7 ವಿಕೆಟ್ ನಷ್ಟಕ್ಕೆ 96 ರನ್ಗಳ ಟಾರ್ಗೆಟ್ ನೀಡಿತ್ತು. ಭಾರತ ವನಿತೆಯರ ಗುರಿ ಬೆನ್ನತ್ತಿದ್ದ ಪಾಕ್ ವನಿತೆಯರು, 16 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 77ರನ್ ಗಳಿಸಿದರು.
ಮಹಿಳೆಯರ ಪಂದ್ಯಕ್ಕೂ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಡಕ್ ವರ್ಥ್ ಲೂಯಿಸ್ ನಿಯಮದಂತೆ ಪಾಕ್ ತಂಡ ಗೆಲವು ಸಾಧಿಸಿತು.
ಪಾಕ್ ಪರ ನಹಿದಾ ಖಾನ್ 14, ಸಿದ್ರಾ ಆಮಿನ್ 26 ರನ್ಗಳನ್ನು ಪೇರಿಸಿದರು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡ್ಯಾ, ಜುಲನ್ ಗೋಸ್ವಾಮಿ, ಹರ್ಮನ್ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದರು
ಭಾರತದ ಮಿಥಲಿ ರಾಜ್ 16, ಹರ್ಪ್ರೀತ್ ಸಿಂಗ್ ಕೌರ್ 16, ವೇದ ಕೃಷ್ಣಮೂರ್ತಿ 24, ಜೆ. ಗೋಸ್ವಾಮಿ 14 ರನ್ ಗಳಿಸಿದ್ದರು.
ಪಾಕ್ ಪರ ಅನಮ್ ಆಮಿನ್, ಅಸ್ಮಾವಿಯಾ ಇಕ್ಬಲ್, ಸನಾ ಮಿರ್, ಸಾದಿಯಾ ಯೂಸೊಫ್ ಹಾಗೂ ನಿದಾ ದಾರ್ ತಲಾ ಒಂದು ವಿಕೆಟ್ ಪಡೆದರು.