ಆಫ್ಘಾನಿಸ್ತಾನಕ್ಕೆ ದ.ಆಫ್ರಿಕಾ ವಿರುದ್ಧ ವಿರೋಚಿತ ಸೋಲು

ದಕ್ಷಿಣ ಆಫ್ರಿಕಾ ನೀಡಿದ 209 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಮುಟ್ಟುವಲ್ಲಿ ವಿಫಲವಾದ ಆಫ್ಘಾನಿಸ್ತಾನ ತಂಡ 37 ರನ್ ಗಳ...
ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕ್ರಿಸ್ ಮಾರಿಸ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕ್ರಿಸ್ ಮಾರಿಸ್ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಮುಂಬೈ: ದಕ್ಷಿಣ ಆಫ್ರಿಕಾ ನೀಡಿದ 209 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಮುಟ್ಟುವಲ್ಲಿ ವಿಫಲವಾದ ಆಫ್ಘಾನಿಸ್ತಾನ ತಂಡ 37 ರನ್ ಗಳ ವಿರೋಚಿತ ಸೋಲು ಕಂಡಿದೆ.

ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ ಡಿಕಾಕ್ (45 ರನ್),  ಫಾಫ್ ಡುಪ್ಲೆಸಿಸ್ (41 ರನ್) ಮತ್ತು ಎಬಿ ಡಿವಿಲಿಯರ್ಸ್ (64 ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ 5 ವಿಕೆಟ್ ನಷ್ಟಕ್ಕೆ 209 ರನ್ ಗಳ ಬೃಹತ್ ಮೊತ್ತನ್ನು ಪೇರಿಸಿತು.  ಆಫ್ಘಾನಿಸ್ತಾನದ ಪರ ಅಮೀರ್ ಹಮ್ಜಾ, ಝಡ್ರಾನ್, ಶಪೂರ್ ಝಡ್ರಾನ್ ಮತ್ತು ಮಹಮದ್ ನಬಿ ತಲಾ 1 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಮೇಲೆ ಒತ್ತಡ ಹೇರುವ ಪ್ರಯತ್ನ  ನಡೆಸಿದರಾದರೂ, ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಆಫ್ಘಾನಿಸ್ತಾನದ ಎಲ್ಲ ತಂತ್ರಗಳನ್ನು ನುಚ್ಚು ನೂರು ಮಾಡಿತು. ಆ ಮೂಲಕ 209 ರನ್ ಗಳ ಬೃಹತ್ ಮೊತ್ತವನ್ನು  ಪೇರಿಸಿತು.

ಈ ಮೊತ್ತವನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ಮಹಮದ್ ಶಹಜಾದ್ (44 ರನ್), ನೂರ್ ಅಲಿ ಝಡ್ರಾನ್ (25 ರನ್), ನೈಬ್ (26 ರನ್), ಸಮೀಉಲ್ಲಾ ಶೆನ್ವಾರಿ (25 ರನ್) ಅವರ ಸಂಘಟಿತ  ಬ್ಯಾಟಿಂಗ್ ನೆರವಿನಿಂದ ಉತ್ತಮ ಹೋರಾಟ ನಡೆಸಿತಾದರೂ ಅಂತಿಮವಾಗಿ 20 ಓವರ್ ಗಳಲ್ಲಿ 172 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 37 ರನ್ ಗಳ ಅಂತರದಿಂದ ವಿರೋಚಿತ ಸೋಲು  ಕಂಡಿತು.

ಆಫ್ರಿಕಾ ಪರ ಕ್ರಿಸ್ ಮಾರಿಸ್ 4 ವಿಕೆಟ್ ಪಡೆದರೆ, ಇಮ್ರಾನ್ ತಾಹಿರ್, ರಬಾಡಾ ಮತ್ತು ಅಬಾಟ್ ತಲಾ 2 ವಿಕೆಟ್ ಕಬಳಿಸಿದರು. ಆಫ್ಘಾನಿಸ್ತಾನದ ನಾಲ್ಕು ಪ್ರಮುಖ ವಿಕೆಟ್ ಗಳನ್ನ ಕಬಳಿಸಿ ದಕ್ಷಿಣ  ಆಫ್ರಿಕಾ ತಂಡ ಗೆಲುವಿಗೆ ಕಾರಣರಾದ ಕ್ರಿಸ್ ಮಾರಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com