ತಮ್ಮ ಬ್ಯಾಟ್ ಮೇಲೆ ಪ್ರತಿಷ್ಠಿತ ಸಂಸ್ಥೆ ಚಿನ್ಹೆ ಬಳಸಲು ಭಾರತ ಆಟಗಾರರು ಪಡೆದ ಸಂಭಾವನೆ

ಭಾರತದ ಮಟ್ಟಿಗೆ ಕ್ರಿಕೆಟ್ ಧಾರ್ಮಿಕ ಕ್ರೀಡೆಯಾಗಿದೆ. ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ಕ್ರಿಕೆಟ್ ತುಂಬಿ ಹೋಗಿದೆ. ಅಂತೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗಿರುವಂತ ಅಮೋಘ
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತದ ಮಟ್ಟಿಗೆ ಕ್ರಿಕೆಟ್ ಧಾರ್ಮಿಕ ಕ್ರೀಡೆಯಾಗಿದೆ. ಪ್ರತಿಯೊಬ್ಬರ ರಕ್ತದ ಕಣಕಣದಲ್ಲೂ ಕ್ರಿಕೆಟ್ ತುಂಬಿ ಹೋಗಿದೆ. ಅಂತೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗಿರುವಂತ ಅಮೋಘ ಅವಕಾಶಗಳು ಬೇರ್ಯಾವ ದೇಶದ ಆಟಗಾರರಿಗಿಲ್ಲ.

ಹೀಗೆ 90ರ ದಶಕದಲ್ಲಿ ಕಮರ್ಶಿಯಲ್ ಆಗಿ ಗುರುತಿಸಿಕೊಂಡವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ತಮ್ಮ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಕಂಪನಿಗಳು ತೂದಿಗಾಲಿನಲ್ಲಿ ನಿಂತಿದ್ದವು. ಅವರ ಬಳಿಕ ಆ ಜಾಗಕ್ಕೆ ಬಂದವರು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ.

ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸುವ ಆಟಗಾರರ ಬ್ಯಾಟ್ ಗಳ ಮೇಲೆ ತಮ್ಮ ಸಂಸ್ಥೆಯ ಚಿಹ್ನೆಗಳನ್ನು ಅಂಟಿಸಿಕೊಳ್ಳಲು ಭಾರತೀಯ ಬ್ಯಾಸ್ಟ್ ಮನ್ ಗಳಿಗೆ ಪ್ರತಿಷ್ಥಿತ ಸಂಸ್ಥೆಗಳು ಅತೀ ಹೆಚ್ಚು ಮೊತ್ತ ನೀಡುತ್ತೀವೆ. ಅದರಂತೆ ಇದೀಗ ಟಾಪ್ ಒಂದನೇ ಸ್ಥಾನದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದ್ದಾರೆ.

2011ರ ವಿಶ್ವಕಪ್ ಗೆಲುವಿಗೆ ಕಾರಣರಾದ ಎಂಎಸ್ ಧೋನಿಗೆ ಸ್ಪಾರ್ಥನ್ ಸಂಸ್ಥೆ 6 ಕೋಟಿ ನೀಡಿದೆ. ಇದೀಗ ಧೋನಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಎಂಆರ್ಎಫ್ ಸಂಸ್ಥೆಯ ಸ್ಟಿಕರ್ ಅಂಟಿಸಿಕೊಳ್ಳಲು 8 ಕೋಟಿ ನೀಡಿದೆ.

ಇನ್ನು ಯುವರಾಜ್ ಸಿಂಗ್ ಗೆ ಪುಮಾ ಸಂಸ್ಥೆ 4 ಕೋಟಿ. ರೋಹಿತ್ ಶರ್ಮಾಗೆ ಸೆಟಾ ಸಂಸ್ಥೆ 3 ಕೋಟಿ. ಶಿಖರ್ ಧವನ್ ಗೆ ಎಂಆರ್ಎಫ್ ಸಂಸ್ಥೆ 3 ಹಾಗೂ ಸುರೇಶ್ ರೈನಾಗೆ ಸೆಟಾ ಸಂಸ್ಥೆ 2.5ರಿಂದ 3 ಕೋಟಿ ನೀಡಿದೆ.

ಭಾರತೀಯ ಕ್ರಿಕೆಟಿಗರಂತೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಎಬಿಡಿವಿಲಿಯರ್ಸ್ 3.5 ಕೋಟಿ ಹಾಗೂ ವೆಸ್ಟ್ ಇಂಡೀಸ್ ನ ಆಟಗಾರ ಕ್ರಿಸ್ ಗೇಯ್ಲ್ 3 ಕೋಟಿ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com