ತರ್ಕ ಅಂತ್ಯ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲೇ ಟಿ20 ವಿಶ್ವ ಕಪ್ ಸೆಮಿಫೈನಲ್

ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಟಿ 20 ವಿಶ್ವಕಪ್ ಸೆಮಿ ಫೈನಲ್ ಪಂದ್ಯ ಆಯೋಜಿಸುವ ಬಗ್ಗೆ ಇದ್ದ ತರ್ಕ ಇದೀಗ ಅಂತ್ಯಗೊಂಡಿದೆ. ಸೆಮಿ ಫೈನಲ್ ...
ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣ
ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣ
ನವದೆಹಲಿ:  ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಟಿ 20 ವಿಶ್ವಕಪ್ ಸೆಮಿ ಫೈನಲ್ ಪಂದ್ಯ ಆಯೋಜಿಸುವ ಬಗ್ಗೆ ಇದ್ದ ತರ್ಕ ಇದೀಗ ಅಂತ್ಯಗೊಂಡಿದೆ. ಸೆಮಿ ಫೈನಲ್ ಪಂದ್ಯ ಆಯೋಜನೆಗೆ ಇರುವ ಇಲ್ಲ ಅನುಮತಿಗಳು ಸಿಕ್ಕಿದೆ ಎಂದು ದೆಹಲಿ ಕ್ರಿಕೆಟ್ ಮಂಡಳಿ (ಡಿಡಿಸಿಎ) ಹೇಳಿದೆ. ಡಿಡಿಸಿಎಯ ಕಾರ್ಯಗಳ ಮೇಲೆ ನಿಗಾ ಇಡಲು ಹೈಕೋರ್ಟ್ ನೇಮಕ ಮಾಡಿದ್ದ  ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಜತೆ ಕ್ರಿಕೆಟ್ ಮಂಡಳಿ ನಡೆಸಿದ ಚರ್ಚೆಯಲ್ಲಿ ಈ ತರ್ಕ ಇತ್ಯರ್ಥಗೊಂಡಿದೆ.
ಗ್ಯಾಲರಿಯಲ್ಲಿರುವ ಆರ್ ಪಿ ಮೆಹ್ರಾ ಬ್ಲಾಕ್ ಬಗ್ಗೆ ನಡೆದ ತರ್ಕ ಮಾರ್ಚ್ 30ರಂದು ನಡೆಯಲಿರುವ ಸೆಮಿಫೈನಲ್‌ಯನ್ನು ಅನಿಶ್ಚಿತತೆಗೆ ದೂಡಿತ್ತು. ಬ್ಲಾಕ್‌ನ ಕೆಲಸ ಪೂರ್ಣಗೊಂಡಿದೆ ಎಂಬ ಸರ್ಟಿಫಿಕೇಟ್‌ನ್ನು ದಕ್ಷಿಣ ದೆಹಲಿ ಮುನಿಸಿಪಲ್ ಕಾರ್ಪರೇಷನ್ ಡಿಡಿಸಿಎಎಗೆ ನೀಡದೇ ಇರುವ ಕಾರಣ ಅಲ್ಲಿ  ಪ್ರೇಕ್ಷಕರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮುದ್ಗಲ್ ಹೇಳಿದ್ದರು. ಮೆಹ್ರಾ ಬ್ಲಾಕ್‌ನಲ್ಲಿ ಟಿವಿ ಚಾನೆಲ್ ಮತ್ತು ಕಾಮೆಂಟೇಟರ್‌ಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಮುದ್ಗಲ್ ಹೇಳಿದ್ದರು. ಆದಾಗ್ಯೂ, ಸ್ಟೇಡಿಯಂನ ಯಾವುದಾದರೊಂದು ಭಾಗ ಖಾಲಿಯಾಗಿದ್ದರೆ, ಆ ಪಂದ್ಯವನ್ನು ಬೇರೊಂದು ಕಡೆಗೆ ವರ್ಗಾಯಿಸುವುದಾಗಿ ಐಸಿಸಿ ಹೇಳಿರುವುದು ಡಿಡಿಸಿಎಯನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು,.
ಮಾಧ್ಯಮದವರನ್ನು ಮತ್ತು ಕಾಮೆಂಟೇಟರ್‌ಗಳಿಂದಲೇ ಮೆಹ್ರಾ ಬ್ಲಾಕ್‌ನ್ನು ತುಂಬಿಸಲು ಅಸಾಧ್ಯ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಗುರುವಾರ ಮಧ್ಯಾಹ್ನ 13 ಗಂಟೆ ವರೆಗೆ ಡಿಸಿಸಿಎ ಗೆ ಐಸಿಸಿ ಗಡುವು ನೀಡಿತ್ತು.  ವರ್ಕಿಂಗ್ ಪ್ರೆಸಿಡೆಂಟ್ ಚೇತನ್ ಚೌಹಾಣ್ ಅವರ ನೇತೃತ್ವದಲ್ಲಿ ಮುಗ್ದಲ್ ಜತೆ ನಡೆಸಿದ ತುರ್ತು ಸಭೆಯಲ್ಲಿ ಮೆಹ್ರಾ ಬ್ಲಾಕ್‌ನಲ್ಲಿ ಪ್ರೇಕ್ಷಕರಿಗೆ ಒದಗಿಸಲು ಡಿಡಿಸಿಎಗೆ ಅನುಮತಿ ಸಿಕ್ಕಿತು. 
ಮೆಹ್ರಾ ಬ್ಲಾಕ್ ನಲ್ಲಿ 2000 ಪ್ರೇಕ್ಷಕರಿಗೆ ಇಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅದೇ ವೇಳೆ 2017ರ ವರೆಗೆ ನಡೆಯಲಿರುವ ಎಲ್ಲ ಪಂದ್ಯಗಳಿಗೂ ಮೆಹ್ರಾ ಬ್ಲಾಕ್ ಬಳಸಬಹುದಾಗಿದೆ ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com