ಭಾರತ-ಬಾಂಗ್ಲಾ ಪಂದ್ಯ ಫಿಕ್ಸಿಂಗ್: ತನಿಖೆಗೆ ಪಾಕ್ ಮಾಜಿ ಸ್ಪಿನ್ನರ್ ಒತ್ತಾಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ದದ ಟಿ20 ಪಂದ್ಯದಲ್ಲಿ ಭಾರತ 1 ರನ್ ಗಳಿಂದ ರೋಚಕ ಗೆಲುವು..
ಭಾರತ, ಬಾಂಗ್ಲಾದೇಶ
ಭಾರತ, ಬಾಂಗ್ಲಾದೇಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ದದ ಟಿ20 ಪಂದ್ಯದಲ್ಲಿ ಭಾರತ 1 ರನ್ ಗಳಿಂದ ರೋಚಕ ಗೆಲುವು ದಾಖಲಿಸಿದ ಬೆನ್ನಲ್ಲಿಯೇ ಇದೀಗ ಪಾಕಿಸ್ತಾನ ಮಾಜಿ ಸ್ಪಿನ್ನರ್ ತೌಸಿಫ್ ಅಹ್ಮದ್ ಪಂದ್ಯ ಫಿಕ್ಸಿಂಗ್‌ ಆಗಿರುವ ಸಾಧ್ಯತೆ ದಟ್ಟವಾಗಿದ್ದು, ಪಂದ್ಯದ ತನಿಖೆ ನಡೆಸುವಂತೆ ಐಸಿಸಿಗೆ ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶ ಗೆಲ್ಲಲು ಕೊನೆಯ ಓವರ್ ನ 3 ಎಸೆತಗಳಿಗೆ 2 ರನ್ ಮಾತ್ರ ಬೇಕಿತ್ತು. ಆ ವೇಳೆ ಕ್ರೀಸ್ ನಲ್ಲಿದ್ದದ್ದು. ಅನುಭವಿ ಆಟಗಾರರು ಹೀಗಿದ್ದರೂ ಪಂದ್ಯದಲ್ಲಿ ಟೈ ಮಾಡಿಕೊಳ್ಳುವುದನ್ನು ಬಿಟ್ಟು ದೊಡ್ಡ ಹೊಡೆತಗಳಿಗೆ ಮುಂದಾಗಿದ್ದೇಕೆ? ಇದನ್ನು ಗಮನಿಸಿದರೆ ಪಂದ್ಯ ಫಿಕ್ಸಿಂಗ್ ಆಗಿರುವಂತ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ.

ಭಾರತ ಬಾಂಗ್ಲಾ ನಡುವಣ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರುವುದು ಖಚಿತ ಎಂದಿರುವ ತೌಸಿಫ್‌ ಅಹ್ಮದ್‌, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕ ಎಂಎಸ್ ಧೋನಿ ಅವರು ಕೊನೆಯ ಎಸೆತದಲ್ಲಿ ಬಾಂಗ್ಲಾ ತಂಡಕ್ಕೆ ಗೆಲ್ಲಲು 2 ರನ್ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯಾನಿಗೆ ಯಾವುದೇ ಕಾರಣಕ್ಕೂ ಯಾರ್ಕರ್ ಹಾಕಬೇಡ, ಬದಲಿಗೆ ಬೌನ್ಸ್ ಬಾಲ್ ಮಾಡು ಎಂದು ಹೇಳಿ ಬ್ಯಾಟ್ಸ್ ಮನ್ ಎಸೆತವನ್ನು ಮುಟ್ಟಲು ಸಾಧ್ಯವಾಗದೆ, ಕೀಪರ್ ನಾಯಕ ಧೋನಿ ಕೈಸೇರಿದಾಗ ರನ್ ಪಡೆಯಲು ಮುಂದಾದಾಗ ಧೋನಿ ವೇಗವಾಗಿ ಬಂದು ವಿಕೆಟ್ ಗೆ ಮುಟ್ಟಿ ಔಟ್ ಮಾಡಿದರು. ಇದರಿಂದಾಗಿ ಭಾರತ ತಂಡ 1 ರನ್ ಗಳಿಂದ ಅಮೋಘ ಜಯ ಸಾಧಿಸುವಂತಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com