ಪಾಕ್ ಮಾಜಿ ವೇಗಿ ವಸೀಂ ಅಕ್ರಮ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ದುಷ್ಕರ್ಮಿಗಳು

ಪಾಕಿಸ್ತಾನದ ಮಾಜಿ ವೇಗಿ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ವಾಸಿಂ ಅಕ್ರಮ್ ಅವರು ಟಿವಿ ವಾಹಿನಿ ಯೊಂದಕ್ಕಾಗಿ ನಡೆಸಿ...
ಪಾಕಿಸ್ತಾನ ಮಾಜಿ ಆಟಗಾರ ವಸೀಂ ಅಕ್ರಂ (ಸಂಗ್ರಹ ಚಿತ್ರ)
ಪಾಕಿಸ್ತಾನ ಮಾಜಿ ಆಟಗಾರ ವಸೀಂ ಅಕ್ರಂ (ಸಂಗ್ರಹ ಚಿತ್ರ)

ಮುಂಬೈ: ಪಾಕಿಸ್ತಾನದ ಮಾಜಿ ವೇಗಿ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ವಾಸಿಂ ಅಕ್ರಮ್ ಅವರು ಟಿವಿ ವಾಹಿನಿಯೊಂದಕ್ಕಾಗಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮಕ್ಕೆ ಕೆಲ ವ್ಯಕ್ತಿಗಳು ಅಡ್ಡಿಪಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

 ವಿರಾಟ್ ಕೊಹ್ಲಿ ಉದ್ದೇಶಿಸಿ ಖಾಸಗಿ ಹಿಂದಿ ವಾಹಿನಿಯೊಂದಕ್ಕೆ ವಸೀಂ ಅಕ್ರಂ ಮಾತನಾಡುತ್ತಿದ್ದಾಗ ಕೆಲ ಮಂದಿ ಅಡ್ಡಿಪಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಇನಿಂಗ್ಸ್ ಕಟ್ಟುವ ಮೂಲಕ ವಿರಾಟ್ ಕೊಹ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಇನಿಂಗ್ಸ್ ಕುರಿತು ವಾಸಿಂ ಅಕ್ರಮ್ ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.

ಈ ವೇಳೆ ಏಕಾಏಕಿ ನುಗ್ಗಿದ ಕೆಲ ಮಂದಿ ನೇರಪ್ರಸಾರ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಜತೆಗೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದರು. ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಘಟನೆ ಕುರಿತು ತಕ್ಷಣವೇ ಪ್ರತಿಕ್ರಿಯಿಸಿರುವ ಸಂದರ್ಶಕ ವಿಕ್ರಾಂತ್ ಗುಪ್ತಾ, ವಾಸಿಂ ಅಕ್ರಮ್ ಸುರಕ್ಷಿತವಾಗಿದ್ದಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಯಾರು ಗಾಬರಿಯಾಗಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com