ಮಹಿಳಾ ಐಪಿಎಲ್ ಆರಂಭಿಸಿ: ಬಿಸಿಸಿಐಗೆ ನಾಯಕಿಯರ ಒತ್ತಾಯ

ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂಬ ಒತ್ತಾಯ ಹಲವು ವರ್ಷಗಳಿಂದ ಕೇಳುತ್ತಾ ಬಂದಿದೆಯಾದರೂ, ಇದೀಗ ಅದಕ್ಕೆ..
ಬಿಗ್ ಬ್ಯಾಶ್ ಟೂರ್ನಿಯಲ್ಲಿ ಮಹಿಳೆಯರು (ಸಂಗ್ರಹ ಚಿತ್ರ)
ಬಿಗ್ ಬ್ಯಾಶ್ ಟೂರ್ನಿಯಲ್ಲಿ ಮಹಿಳೆಯರು (ಸಂಗ್ರಹ ಚಿತ್ರ)

ನವದೆಹಲಿ: ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂಬ ಒತ್ತಾಯ ಹಲವು ವರ್ಷಗಳಿಂದ ಕೇಳುತ್ತಾ ಬಂದಿದೆಯಾದರೂ, ಇದೀಗ ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧನಿಗಳು  ಒಗ್ಗೂಡಿವೆ.

ಕ್ರಿಕೆಟ್ ಜಗತ್ತಿನಲ್ಲಿ ಮೋಡಿ ಮಾಡಿರುವ ಮತ್ತು ಹಣದೊಂದಿಗೆ ಕ್ರಿಕೆಟಿಗರ ಖ್ಯಾತಿಯನ್ನು ಉತ್ತುಂಗಕ್ಕೇರಿಸಿರುವ ಐಪಿಎಲ್ ಮಾದರಿಯ ಪಂದ್ಯಾವಳಿಗಳನ್ನು ಮಹಿಳಾ ಕ್ರಿಕೆಟ್ ಮಾದರಿಯಲ್ಲಿಯೂ  ಆಯೋಜಿಸುವಂತೆ ಮಹಿಳಾ ಕ್ರಿಕೆಟ್ ತಂಡದ ನಾಯಕಿಯರು ಒತ್ತಾಯಿಸಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಬಿಗ್ ಬ್ಯಾಷ್ ಮತ್ತು ಸೂಪರ್ ಲೀಗ್ ಮಾದರಿಯ  ಟೂರ್ನಿಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಇಂತಹುದೇ ಕ್ರಿಕೆಟ್ ಮಾದರಿ ಅಂದರೆ ಮಹಿಳಾ ಐಪಿಎಲ್ ಸರಣಿಯನ್ನು ಆಯೋಜಿಸುವ ಮೂಲಕ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡಬೇಕು  ಎಂದು ಬಿಸಿಸಿಐಗೆ ಒತ್ತಾಯಿಸಲಾಗಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ಲ್ಯಾನಿಂಗ್ ಮತ್ತು ಇಂಗ್ಲೆಂಡ್ ತಂಡದ ಚಾರ್ಲೊಟ್ , ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಲ್ಲಿ  ವನಿತೆಯರ ಬಿಗ್ ಬ್ಯಾಷ್ ಲೀಗ್  (ಡಬ್ಲ್ಯುಬಿಬಿಎಲ್) ಆರಂಭವಾಗಿದೆ. ಇಂಗ್ಲೆಂಡ್‌ನಲ್ಲಿ ಸೂಪರ್ ಲೀಗ್ ಆರಂಭವಾಗಿದೆ. ಅದೇ ಮಾದರಿಯಲ್ಲಿ ಐಪಿಎಲ್‌ನಲ್ಲಿಯೂ ಮಹಿಳೆಯರು  ಆಡುವಂತಾಗಬೇಕು. ಭಾರತದ ವನಿತೆಯರು ಡಬ್ಲ್ಯುಬಿಬಿಎಲ್ ನಲ್ಲಿ ಆಡುವಂತಾಗಬೇಕು’ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಕ್ರಿಕೆಟ್ ಆಟಗಾರ್ತಿಯರು ಕಳೆದ ಕೆಲವು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರ ಆಟದಲ್ಲಿಯೂ  ಗಮನಾರ್ಹ ಸುಧಾರಣೆಗಳಾಗಿವೆ. ಐಪಿಎಲ್‌ನಲ್ಲಿ ಅವಕಾಶ  ಸಿಗುವುದರಿಂದ ಮತ್ತಷ್ಟು ಬೆಳವಣಿಗೆಗೆ ಅವಕಾಶ ಸಿಗಲಿದೆ’ ಎಂದು ಮೆಗ್ ಲ್ಯಾನಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com