ಗಾಯ ಸಮಸ್ಯೆ: ಐಪಿಎಲ್ ನಿಂದ ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್ ಔಟ್

ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 9ನೇ ಆವೃತ್ತಿಯ ಪಂದ್ಯಗಳು ನಿರ್ಣಾಯಕ ಹಂತ ತಲುಪುವ ವೇಳೆಗೆ ಸ್ಟಾರ್ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿ ಟೂರ್ನಿಯಿಂದಲೇ ಹೊರಗುಳಿಯುತ್ತಿದ್ದಾರೆ..
ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಮಾರ್ಷ್ (ಸಂಗ್ರಹ ಚಿತ್ರ)
ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಮಾರ್ಷ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 9ನೇ ಆವೃತ್ತಿಯ ಪಂದ್ಯಗಳು ನಿರ್ಣಾಯಕ ಹಂತ ತಲುಪುವ ವೇಳೆಗೆ ಸ್ಟಾರ್ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿ  ಟೂರ್ನಿಯಿಂದಲೇ ಹೊರಗುಳಿಯುತ್ತಿದ್ದಾರೆ.

ಈಗಾಗಲೇ ಐಪಿಎಲ್ ನಿಂದ ಕೆವಿನ್ ಪೀಟರ್ಸೆನ್ ಡುಪ್ಲೆಸಿಸ್ ಗಾಯದ ಸಮಸ್ಯೆಯಿಂದಾಗಿ ಹೊಹಬಿದ್ದಿದ್ದು, ಈ ಪಟ್ಟಿಗೆ ಇದೀಗ ಮತ್ತೆ ಇಬ್ಬರು ಆಟಗಾರರು ಸೇರ್ಪಡೆಯಾಗಿದ್ದಾರೆ. ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಸ್ಟಾರ್ ಆಟಗಾರರಾದ ಮಿಚೆಲ್ ಮಾರ್ಷ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಸ್ಟೀವ್ ಸ್ಮಿತ್ ಗಾಯದ  ಸಮಸ್ಯೆಗೆ ಒಳಗಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಪುಣೆ ವಿರುದ್ಧದ ಪಂದ್ಯದ ವೇಳೆ ಮಣಿಕಟ್ಟಿನ ತೊಂದರೆಗೊಳಗಾದ ಸ್ಟೀವ್ ಸ್ಮಿತ್ ಬಳಿಕ ವೈದ್ಯರಿಂದ ಚಿಕಿತ್ಸೆಗೊಳಗಾಗಿದ್ದರು. ಆದರೆ ನೋವು ಕಡಿಮೆಯಾಗದ ಹಿನ್ನಲೆಯಲ್ಲಿ ಆಸ್ಟ್ರೇಲಿಯಾಗೆ  ವಾಪಸಾಗಲಿದ್ದಾರೆ. ಹೀಗಾಗಿ ಸ್ಟೀವ್ ಸ್ಮಿತ್ ಉಳಿದಿರುವ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಇನ್ನು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿರುವ  ಪುಣೆ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್ ಕೂಡ ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ಆ ಮೂಲಕವಾಗಿ ಗಾಯದ ಸಮಸ್ಯೆಯಿಂದ ಐಪಿಎಲ್ 9ರ ಸರಣಿಯಿಂದ ಹೊರಬಿದ್ದ  ಆಟಗಾರರ ಸಂಖ್ಯೆ ನಾಲ್ಕಕ್ಕೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com