ಸಹ ಫೀಲ್ಡರ್ ಎಸೆದ ಚೆಂಡು ತಲೆಗೆ ಬಡಿದು ಗಾಯಗೊಂಡ ಆಸಿಸ್ ಕ್ರಿಕೆಟಿಗ ಆ್ಯಡಂ ವೋಗ್ಸ್

ಫೀಲ್ಡಿ೦ಗ್ ಮಾಡುವ ವೇಳೆ ಸಹ ಆಟಗಾರನೊಬ್ಬ ಎಸೆದ ಚೆ೦ಡು ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯಡ೦ ವೋಗ್ಸ್ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮ ಸ್ಥಳದಲ್ಲೇ ಪ್ರಜ್ಞೆತಪ್ಪಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ...
ಚೆಂಡಿನಿಂದ ಪೆಟ್ಟು ಬಿದ್ದು ಮೈದಾನದಲ್ಲೇ ಪ್ರಜ್ಞೆತಪ್ಪಿದ ಆ್ಯಡಂ ವೋಗ್ಸ್
ಚೆಂಡಿನಿಂದ ಪೆಟ್ಟು ಬಿದ್ದು ಮೈದಾನದಲ್ಲೇ ಪ್ರಜ್ಞೆತಪ್ಪಿದ ಆ್ಯಡಂ ವೋಗ್ಸ್

ಲಂಡನ್: ಫೀಲ್ಡಿ೦ಗ್ ಮಾಡುವ ವೇಳೆ ಸಹ ಆಟಗಾರನೊಬ್ಬ ಎಸೆದ ಚೆ೦ಡು ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯಡ೦ ವೋಗ್ಸ್ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮ ಸ್ಥಳದಲ್ಲೇ ಪ್ರಜ್ಞೆತಪ್ಪಿದ  ಘಙಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

ಈ ಹಿಂದೆ ಬೌಲರ್ ಎಸೆದ ಚೆಂಡಿನಿಂದಾಗಿ ಮೈದಾನದಲ್ಲೇ ಸಾವಿಗೀಡಾದ ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಘಟನೆ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಇಂಗ್ಲೆಂಡ್  ನಲ್ಲಿ ನಡೆದಿದೆ. ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಸರಣಿಯಲ್ಲಿ ಸೌತಾ೦ಪ್ಟನ್‍ನಲ್ಲಿ ಹ್ಯಾ೦ಪ್‍ಶೈರ್ ತ೦ಡದ ವಿರುದ್ಧ ನಡೆದ ಪ೦ದ್ಯದಲ್ಲಿ ಆ್ಯಡಮ್ ವೋಗ್ಸ್ ಫೀಲ್ಡಿ೦ಗ್ ಮಾಡುವ ವೇಳೆ ಈ ಘಟನೆ  ನಡೆದಿದ್ದು, ಬ್ಯಾಟ್ಸಮನ್ ಭಾರಿಸಿದ ಚೆಂಡನ್ನು ಹಿಡಿತಕ್ಕೆ ಪಡೆದ ಒಲ್ಲಿ ರಾಯ್ನರ್, ಚೆಂಡನ್ನು ವಿಕೆಟ್‍ಕೀಪರ್ ಜಾನ್ ಸಿ೦ಪ್ಸನ್‍ರತ್ತ ಎಸೆದರು. ಆದರೆ ಚೆಂಡು ಗುರಿ ತಪ್ಪಿ ಮಿಡ್ಲ್ ಸೆಕ್ಸ್ ತ೦ಡದ   ನಾಯಕ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಆ್ಯಡಂ ವೋಗ್ಸ್ ಅವರ ತಲೆಗೆ ಬಲವಾಗಿ ಬಡಿಯಿತು.

ಆ್ಯಡಂ ವೋಗ್ಸ್ ಮೈದಾನದಲ್ಲೇ ಪ್ರಜ್ಞೆ ತಪ್ಪಿದ್ದು, ಕೂಡಲೇ ಅವರನ್ನು ಆಟಗಾರರ ಡ್ರೆಸಿಂಗ್ ರೂಂಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಆಗಲೂ ಅವರು ಏಳದ ಕಾರಣ ಅವರನ್ನು  ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಯಲ್ಲಿ ಕ್ರಿಕೆಟಿಗನಿಗೆ ತುರ್ತು ಚಿಕಿತ್ಸೆ ನೀಡಲಾಗಿ, ಇದೀಗ ಆತ ಚೇತರಿಸಿಕೊಂಡು ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.



ಆ ಬಗ್ಗೆ  ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಸ್ಪತ್ರೆ ವೈದ್ಯರು, "ಅದೃಶ್ಟವಶಾತ್ ಆ್ಯಡಂ ವೋಗ್ಸ್ ಗೆ ಗಂಭೀರವಾಗಿ ಪೆಟ್ಟು ಬಿದ್ದಿಲ್ಲ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಪ್ರಜ್ಞೆ ತಪ್ಪಿದ್ದರು.  ಇದೀಗ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಮತ್ತು ಮೈದಾನಕ್ಕೆ ಇಳಿಯದಂತೆ ಸೂಚನೆ  ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಚಿಕಿತ್ಸೆ ಬಳಿಕ ವಾಪಸಾದ ಆ್ಯಡಂ ವೋಗ್ಸ್ ಪಂದ್ಯ ನಡೆಯುತ್ತಿದ್ದ ಮೈದಾನಕ್ಕೆ ಆಗಮಿಸಿದ್ದರಾದರೂ, ವೈದ್ಯರ ಸಲಹೆಯಂತೆ ಅಂಗಳಕ್ಕೆ ಇಳಿಯದೇ ಆಟಗಾರರ ಡಗ್ ಔಟ್ ನಲ್ಲಿ ಕುಳಿತೇ  ಪಂದ್ಯವನ್ನು ವೀಕ್ಷಿಸಿದರು.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಂಡದ ಮ್ಯಾನೇಜರ್ ಆ್ಯ೦ಗಸ್ ಫ್ರೇಸರ್, ದುರಾದೃಷ್ಟವಶಾತ್ ವೋಗ್ಸ್ ಅವರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಅವರನ್ನು ಡ್ರೆಸಿಂಗ್ ರೂಂಗೆ  ತೆರಳಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರ ಪರಿಸ್ಥಿತಿ ಚೆನ್ನಾಗಿರದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖುಷಿಯ ವಿಚಾರವೆಂದರೆ ಚಿಕಿತ್ಸೆ ಬಳಿಕ ಅವರು  ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com