ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದ ಆಟಗಾರರು

ಚುಟುಕು ಕ್ರಿಕೆಟ್ ನಲ್ಲಿ ಹೊಡಿ ಬಡಿ ಆಟಕ್ಕೆ ಹೆಚ್ಚು ಪ್ರಮುಖ್ಯ. ಅಂತಹ ಆಟದಲ್ಲಿ ತಮ್ಮ ನೆಚ್ಚಿನ ಬ್ಯಾಟ್ಸ್ ಮನ್ ಗಳು ಚೆಂಡನ್ನು ಸಿಕ್ಸರ್ ಬಾರಿಸಿದರೆ ಪ್ರೇಕ್ಷಕರ ಕೂಗು ಮುಗಿಲು ಮುಟ್ಟುತ್ತದೆ.
ಐಪಿಎಲ್ ಆಟಗಾರರು
ಐಪಿಎಲ್ ಆಟಗಾರರು

ಚುಟುಕು ಕ್ರಿಕೆಟ್ ನಲ್ಲಿ ಹೊಡಿ ಬಡಿ ಆಟಕ್ಕೆ ಹೆಚ್ಚು ಪ್ರಮುಖ್ಯ. ಅಂತಹ ಆಟದಲ್ಲಿ ತಮ್ಮ ನೆಚ್ಚಿನ ಬ್ಯಾಟ್ಸ್ ಮನ್ ಗಳು ಚೆಂಡನ್ನು ಸಿಕ್ಸರ್ ಬಾರಿಸಿದರೆ ಪ್ರೇಕ್ಷಕರ ಕೂಗು ಮುಗಿಲು ಮುಟ್ಟುತ್ತದೆ. ಹೀಗೆ ಐಪಿಎಲ್ 9ನೇ ಆವೃತ್ತಿಯಲ್ಲಿ ಕೆಲವೊಂದು ಆಟಗಾರರು ಅತಿ ಹೆಚ್ಚು ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂವರು ಆಟಗಾರರು ಸ್ಥಾನ ಪಡೆದಿರುವುದು ವಿಶೇಷ.

ಐಪಿಎಲ್ 9ನೇ ಆವೃತ್ತಿಯಲ್ಲಿ ಸದ್ಯ 43 ಪಂದ್ಯಗಳು ಮುಕ್ತಾಯವಾಗಿದ್ದು, 427 ಸಿಕ್ಸರ್ ಗಳನ್ನು ಬ್ಯಾಟ್ಸ್ ಮನ್ ಗಳು ಸಿಡಿಸಿದ್ದಾರೆ.

ಡೇವಿಡ್ ವಾರ್ನರ್(ಸನ್ ರೈಸರ್ಸ್ ಹೈದರಾಬಾದ್)
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಭರ್ಜರಿ ಸಿಕ್ಸರ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 11 ಪಂದ್ಯಗಳನ್ನಾಡಿರುವ ವಾರ್ನರ್ 22 ಸಿಕ್ಸರ್ ಗಳನ್ನು ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಎಬಿಡಿ ವಿಲಿಯರ್ಸ್(ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಐಪಿಎಲ್ ನಲ್ಲಿ ಬೆಂಗಳೂರು ಪರ ಆಡುತ್ತಿರುವ ಎಬಿಡಿ ವಿಲಿಯರ್ಸ್ 10 ಪಂದ್ಯಗಳಲ್ಲಿ 17 ಸಿಕ್ಸರ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಕ್ ಕೊಹ್ಲಿ(ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಚುಟುಕು ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 10 ಪಂದ್ಯಗಳ ಪೈಕಿ 17 ಸಿಕ್ಸರ್ ಬಾರಿಸಿದ್ದಾರೆ.

ಕೆಎಲ್ ರಾಹುಲ್(ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಬೆಂಗಳೂರು ಪರ ಆಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 8 ಪಂದ್ಯಗಳಲ್ಲಿ 15 ಸಿಕ್ಸರ್ ಬಾರಿಸಿದ್ದಾರೆ.

ಕೀರನ್ ಪೋಲಾರ್ಡ್(ಮುಂಬೈ ಇಂಡಿಯನ್ಸ್)
ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಕೀರನ್ ಪೋಲಾರ್ಡ್ 11 ಪಂದ್ಯಗಳಲ್ಲಿ 15 ಸಿಕ್ಸರ್ ಹೊಡೆದಿದ್ದಾರೆ.

ಕ್ರಿಸ್ ಮೋರಿಸ್(ಗುಜರಾತ್ ಲಯನ್ಸ್)
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ್ದ ಕ್ರಿಸ್ ಮೋರಿಸ್ 32 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ್ದಾರೆ. ಈ ವೇಳೆ 8 ಭರ್ಜರಿ ಸಿಕ್ಸರ್ ಬಾರಿಸಿದ್ದ ಕ್ರಿಸ್ ಒಂದೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಖ್ಯಾತಿಗೆ ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com