ಸಚಿನ್ ತೆಂಡೂಲ್ಕರ್ - ವಿರಾಟ್ ಕೊಹ್ಲಿ
ಕ್ರಿಕೆಟ್
ನನ್ನನ್ನು ಸಚಿನ್‌ಗೆ ಹೋಲಿಸಬೇಡಿ: ವಿರಾಟ್ ಕೊಹ್ಲಿ
ನನ್ನ ಮತ್ತು ಸಚಿನ್ ನಡುವೆ ಹೋಲಿಕೆ ಸರಿಯಲ್ಲ. ಅದ್ಭುತ ಸಾಮರ್ಥ್ಯ ಹೊಂದಿರುವ ವ್ಯಕ್ತಿಯಾಗಿದ್ದಾರೆ ಅವರು. ನಾನು ಆಟವಾಡಲು ಆರಂಭಿಸಿ...
ನವದೆಹಲಿ: ವಿರಾಟ್ ಕೊಹ್ಲಿ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳನ್ನು ಮುರಿಯುತ್ತಿದ್ದು, ಈತನನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಲಾಗುತ್ತಿದೆ. ಆದರೆ ನನ್ನನ್ನು ಸಚಿನ್‌ಗೆ ಹೋಲಿಸಬೇಡಿ, ಈ ಮೂಲಕ ನನ್ನನ್ನು ಪೇಚಿಗೆ ಸಿಲುಕುವಂತೆ ಮಾಡಬೇಡಿ ಎಂದು ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನನ್ನ ಮತ್ತು ಸಚಿನ್ ನಡುವೆ ಹೋಲಿಕೆ ಸರಿಯಲ್ಲ. ಅದ್ಭುತ ಸಾಮರ್ಥ್ಯ ಹೊಂದಿರುವ ವ್ಯಕ್ತಿಯಾಗಿದ್ದಾರೆ ಅವರು. ಅವರು ಪ್ರತಿಭೆಯೊಂದಿಗೇ ಹುಟ್ಟಿದವರು. ನಾನು ಪ್ರತಿಭೆಯನ್ನು ಗಳಿಸಿಕೊಳ್ಳುವ ಹಾದಿಯಲ್ಲಿದ್ದೇನೆ. ನಾನು ಆಟವಾಡಲು ಆರಂಭಿಸಿ ಎರಡು ವರ್ಷಗಳಿಂದ ಹೆಚ್ಚು ಕಾಲವಾಯಿತಷ್ಟೇ. ಸಚಿನ್ 24 ವರ್ಷಗಳ ಕಾಲ ದೇಶಕ್ಕಾಗಿ ಆಡಿದವರು. ನಮ್ಮ ಕಾಲಘಟ್ಟದ ಆಟಗಾರರಿಗಿಂತ ಅವರು ತುಂಬಾ ಮೇಲಿನ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ಆಟವನ್ನು ನೋಡಿ. ಅದರಿಂದ ಸ್ಫೂರ್ತಿ ಪಡೆದು ನಾನು ಪ್ರದರ್ಶನ ನೀಡುತ್ತೇನೆ.
ಈಗಿರುವ ಫಾರ್ಮ್ ನನ್ನ ಉತ್ತಮ ಫಾರ್ಮ್ ಎಂದು ನಾನು ಹೇಳಲಾರೆ, ಆ ಬಗ್ಗೆ ನನಗೆ ಗೊತ್ತಿಲ್ಲ. ಕೆಲವೇ ತಿಂಗಳುಗಳ ಹಿಂದೆಯಷ್ಟೇ ನಾನು ಈ ಫಾರ್ಮ್‌ಗೆ ಬಂದಿರುವುದು ಎದು ಹೇಳಿರುವ ಕೊಹ್ಲಿ, ಪಂದ್ಯ ಆರಂಭಕ್ಕೆ ಮುನ್ನ ತಾನು ತನ್ನ ಎದೆಬಡಿತವನ್ನು ಪರೀಕ್ಷಿಸಿಕೊಳ್ಳುತ್ತೇನೆ. ಹೃದಯ ಬಡಿತ ಜೋರಾಗಿದ್ದರೆ, ಅದನ್ನು ತಹಬದಿಗೆ ತರಲು ಯತ್ನಿಸುತ್ತೇನೆ. ಹಾಗಾದರೆ ಮಾತ್ರ ಉತ್ತಮ ಪ್ರದರ್ಶನ ನೀಡಲು ಸಾಧ್ಯ.
ಪ್ರತಿಯೊಂದು ಪಂದ್ಯದಲ್ಲಿಯೂ ನಾನು ಕ್ರಿಕೆಟ್‌ನ್ನು ಮತ್ತಷ್ಟು ಗೌರವಿಸುತ್ತಾ ಹೋಗುತ್ತೇನೆ. ನಾನು ಪ್ರತೀ ಪಂದ್ಯವಾಡುವಾಗಲೂ ಕ್ರಿಕೆಟ್‌ಗೆ ನನ್ನನ್ನೇ ನಾನು ಸಮರ್ಪಿಸಿಕೊಳ್ಳುತ್ತೇನೆ. ನನಗೆ ಗೊತ್ತಿದ್ದ ಆಟವನ್ನಾಡುತ್ತೇನೆ. ಒಂದೊಳ್ಳೆಯ ವ್ಯಕ್ತಿಯಾಗಿ ಬೆಳೆಯಲು ನಾನು ಬಯಸುತ್ತೇನೆ ಎಂದು ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ ಹೇಳಿದ್ದಾರೆ.


